Thursday, August 28, 2025
Homeಮನರಂಜನೆಕೊಡಗಿನ ರೋಷನ್‌ ಜೊತೆ ಹಸೆಮಣೆ ಏರಿದ ಆ್ಯಂಕರ್‌ ಅನುಶ್ರೀ

ಕೊಡಗಿನ ರೋಷನ್‌ ಜೊತೆ ಹಸೆಮಣೆ ಏರಿದ ಆ್ಯಂಕರ್‌ ಅನುಶ್ರೀ

Kannada Anchor Anushree Marries Businessman Roshan in a Grand Bengaluru Wedding

ಬೆಂಗಳೂರು,ಆ.28- ನಟಿ ಹಾಗೂ ಆ್ಯಂಕರ್‌ ಅನುಶ್ರೀ ಹಾಗೂ ರೋಷನ್‌ ಅವರ ಕಲ್ಯಾಣ ಮಹೋತ್ಸವವು ಕಗ್ಗಲಿಪುರದ ಬೈಸ್ವಾನ್‌ ಲೈನ್‌ ಸ್ಟುಡಿಯೋಸ್‌‍ ತಿಟ್ಟಹಳ್ಳಿಯಲ್ಲಿ ಅದ್ಧೂರಿಯಾಗಿ ನೆರವೇರಿದೆ.

ಅನುಶ್ರೀ ಅವರ ವಿವಾಹ ಮಹೋತ್ಸವಕ್ಕೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಆಗಮಿಸಿ ಶುಭ ಹಾರೈಸಿದ್ದಾರೆ. ತಮ್ಮ ನಿರೂಪಣಾ ಶೈಲಿಯಿಂದಲೇ ತಮದೇ ಆದ ಅಭಿಮಾನಿ ಬಳಗವನ್ನು ಅನುಶ್ರೀ ಅಪ್ಪು ಫ್ಯಾನ್‌ ಆಗಿರುವ ಕಾರಣ, ಅಪ್ಪು ಹುಟ್ಟುಹಬ್ಬದ ದಿನವೇ ಮದುವೆ ಬಗ್ಗೆ ಸಿಹಿ ಸುದ್ದಿ ಕೊಡ್ತೀನಿ ಎಂದಿದ್ದರು. ಆದರೆ ಅಂದು ಅಭಿಮಾನಿಗಳಿಗೆ ನಿರಾಸೆ ಮಾಡಿದ್ದರು. ಕೊನೆಗೂ ಅನುಶ್ರೀ ಅವರ ಮದುವೆಯ ಬಗ್ಗೆ ಇದ್ದ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ.

ಅನುಶ್ರೀ- ರೋಷನ್‌ ಅವರ ಮನೆಗಳವರು ಒಪ್ಪಿ ಅದ್ದೂರಿಯಾಗಿ ಮದುವೆ ಮಾಡಿದ್ದಾರೆ. ನಿನ್ನೆಯಿಂದಾನೂ ವೈವಾಹಿಕ ಕ್ರಿಯೆಗಳು ನಡೆದಿದ್ದು, ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರದಲ್ಲಿ ಅನುಶ್ರೀ ಮಿಂದೆದ್ದಿದ್ದಾರೆ.

ರೋಷನ್‌ ಮೂಲತಃ ಕೊಡಗಿನವರು. ಬೆಂಗಳೂರಿನಲ್ಲಿಯೇ ಉದ್ಯಮಿಯಾಗಿದ್ದಾರೆ. ಇಂದು ಬೆಳಗ್ಗೆ 10.56ಕ್ಕೆ ರೋಷನ್‌, ಅನುಶ್ರೀ ಅವರಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.

RELATED ARTICLES

Latest News