ಬೆಂಗಳೂರು,ಆ.29- ತುಂಗಾಭದ್ರ ಜಲಾಶಯದಿಂದ ನದಿಗೆ 40 ಸಾವಿರ ಕ್ಯೂಸೆಕ್‌ನಿಂದ 70 ಸಾವಿರ ಕ್ಯೂಸೆಕ್‌ವರೆಗೂ ನೀರು ಬಿಡುವ ಸಾಧ್ಯತೆ ಇದ್ದು, ತುಂಗಾಭದ್ರ ಅಣೆಕಟ್ಟೆಯ ಕೆಳಭಾಗದಲ್ಲಿನ ನದಿಪಾತ್ರದ ಜನವಸತಿಗಳಲ್ಲಿ ಜಾಗ್ರತೆ ವಹಿಸಲು ಕೋರಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಈ ಮನವಿ ಮಾಡಿದೆ.
ತುಂಗಾಭದ್ರ ಜಲಾಶಯಕ್ಕೆ ಈಗ ಬರುತ್ತಿರುವ ಒಳಹರಿವು 36 ಸಾವಿರ ಕ್ಯೂಸೆಕ್ ಆಗಿದ್ದು, ಇದು 53 ಸಾವಿರ ಕ್ಯೂಸೆಕ್‌ಗೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ನದಿಗೆ ನೀರು ಬಿಡುವ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ.
ಒಳಹರಿವು 40 ಸಾವಿರ ಕ್ಯೂಸೆಕ್‌ಗಿಂತ 70 ಸಾವಿರ ಕ್ಯೂಸೆಕ್‌ವರೆಗೂ ಹೆಚ್ಚಾಗಬಹುದು. ಇದಕ್ಕೆ ಕಾರಣ ತುಂಗಾಜಲಾಶಯದಿಂದ 32 ಸಾವಿರ ಕ್ಯೂಸೆಕ್, ಭದ್ರ ಅಣೆಕಟ್ಟೆಯಿಂದ 11 ಸಾವಿರ ಕ್ಯೂಸೆಕ್ ಹಾಗೂ ವರದಾನದಿಯಿಂದ 9700 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಅಲ್ಲದೆ ತುಂಗಾಭದ್ರ ನದಿ ಜಲಾನಯನ ಭಾಗದಲ್ಲಿ ಮಳೆಯಾಗುತ್ತಿದ್ದು, ತುಂಗಾಭದ್ರ ಜಲಾಶಯದ ಒಳಹರಿವು 53 ಸಾವಿರ ಕ್ಯೂಸೆಕ್‌ಗೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
- ನ.23ರಂದು ಬೆಂಗಳೂರಿನಲ್ಲಿ ಕೆನರಾ ಬ್ಯಾಂಕ್ ವತಿಯಿಂದ ‘ಒಗ್ಗಟ್ಟಿನ ಓಟ’ ಮ್ಯಾರಥಾನ್
- ಅಭಿನವ ಬೀಚಿ ಗಂಗಾವತಿ ಪ್ರಾಣೇಶ್ ಅವರ ತಾಯಿ ಸತ್ಯವತಿ ಬಾಯಿ ವಿಧಿವಶ
- ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಬೆಂಗಳೂರಿಂದ ಊರುಗಳತ್ತ ತೆರಳುತ್ತಿರುವ ಜನ, ಭಾರಿ ಟ್ರಾಫಿಕ್ ಜಾಮ್
- ಆಫ್ಘನ್ ಮೇಲೆ ಪಾಕ್ ವೈಮಾನಿಕ ದಾಳಿಗೆ ಮೂವರು ಕ್ರಿಕೆಟಿಗರು ಬಲಿ
- ಬೆಂಗಳೂರು : ಲಾಡ್ಜ್ ನಲ್ಲಿ ಪುತ್ತೂರಿನ ಯುವಕ ಅನುಮಾನಾಸ್ಪದ ಸಾವು