ಶಿವಗಂಗೈ(ತಮಿಳುನಾಡು),ಆ.29- ದುಷ್ಕರ್ಮಿಗಳ ಗುಂಪೊಂದು ತಮಿಳುನಾಡಿನ ಶಿವಗಂಗೈನಲ್ಲಿ ಬಿಜೆಪಿ ಜಿಲ್ಲಾ ವಾಣಿಜ್ಯ ವಿಭಾಗದ ಸದಸ್ಯರನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಸತೀಶ್‌ಕುಮಾರ್ ಕೊಲೆಯಾಗಿರುವ ಬಿಜೆಪಿ ಜಿಲ್ಲಾ ವಾಣಿಜ್ಯ ವಿಭಾಗದ ಸದಸ್ಯರು.
ಈ ಘಟನೆ ರಾಜಕೀಯ ಕಾರಣಗಳಿಂದ ಉಂಟಾಗಿಲ್ಲ, ಬದಲಾಗಿ ವೈಯಕ್ತಿಕ ಕಾರಣಗಳಿಂದ ಉಂಟಾಗಿದೆ. ಜಗಳ ನಡೆದ ಸಮಯದಲ್ಲಿ ಕುಮಾರ್ ಮತ್ತು ಆರೋಪಿ ಗುಂಪು ಇಬ್ಬರೂ ಮದ್ಯಪಾನ ಮಾಡಿದ್ದರು ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐದಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದಾಗ್ಯೂ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.ತಮಿಳುನಾಡಿನಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆ ಮಾಡಿದ ಎರಡು ತಿಂಗಳ ನಂತರ ಈ ಘಟನೆ ನಡೆದಿದೆ.
ಜುಲೈ 4ರಂದು ದಿಂಡಿಗಲ್ ಜಿಲ್ಲೆಯ ಸನಾರ್ಪಟ್ಟಿ ಬಳಿ ರಾಜಕಪಟ್ಟಿಯ ಬಾಲಕೃಷ್ಣನ್(39) ಅವರನ್ನು ಕಡಿದು ಕೊಲೆ ಮಾಡಲಾಗಿತ್ತು. ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಮೋಟಾರ್ ಸೈಕಲ್‌ಗಳಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಅವರ ಮೇಲೆ ಸಾರ್ವಜನಿಕರ ಮುಂದೆಯೇ ದಾಳಿ ನಡೆಸಿತ್ತು.
- ಮಸೀದಿಯಲ್ಲಿ ಗಣೇಶ ಪ್ರತಿಷ್ಠಾಪನೆ
- ಮೈಸೂರಿಗೆ ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ನಾಳೆ ಅರಮನೆ-ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ
- ತನಿಖೆಯಾಗದೆ ಸಿಬಿಐನಲ್ಲಿ ಬಾಕಿ ಉಳಿದ 74 ಗಂಭೀರ ಪ್ರಕರಣಗಳು, ಮರೀಚಿಕೆಯಾದ ನ್ಯಾಯ
- ಹಣೆಗೆ ತಿಲಕ ಧರಿಸಿ ತರಗತಿಗೆ ಬರದಂತೆ ಪ್ರಾಶುಂಪಾಲ ಸುತ್ತೋಲೆ : ಪೋಷಕರಿಂದ ಪ್ರತಿಭಟನೆ
- ಕಾಳೇಶ್ವರಂ ಯೋಜನೆ ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸಿದ ರೇವಂತ್ ರೆಡ್ಡಿ