ಬೆಳ್ತಂಗಡಿ,ಆ.29- ಮಹೇಶ್ ಶೆಟ್ಟಿ ತಿಮರೋಡಿ ವಿಚಾರಣೆಗೆ ಹಾಜರಾಗಿರುವ ವೇಳೆಯಲ್ಲೇ ಎಸ್‌ಐಟಿ ಮುಖ್ಯಸ್ಥರಾದ ಡಿಜಿಪಿ ಪ್ರಣವ್ ಮೊಹಂತಿ ಅವರು ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಆಗಮಿಸಿರುವುದು ಬಹಳ ಕುತೂಹಲ ಕೆರಳಿಸಿದೆ.
ಪ್ರಣವ್ ಮೊಹಂತಿಯವರು ಇಂದು ಬೆಳಿಗ್ಗೆ ಎಸ್‌ಐಟಿ ಕಚೇರಿಯಲ್ಲಿ ತನಿಖಾ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿದರು.ಕಳೆದ ಮೂರು ದಿನಗಳಿಂದ ಸುಜಾತಭಟ್ ಅವರನ್ನು ಎಸ್‌ಐಟಿ ವಿಚಾರಣೆ ಮಾಡುತ್ತಿದ್ದು, ನಾಲ್ಕನೇ ದಿನವಾದ ಇಂದೂ ಸಹ ಸುಜಾತ ಭಟ್ ವಿಚಾರಣೆಗೆ ಹಾಜರಾಗಿದ್ದರು. ಅವರನ್ನು ಖುದ್ದು ಮೊಹಂತಿಯವರು ವಿಚಾರಣೆಗೊಳಪಡಿಸಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಇದುವರೆಗೂ ನಡೆಸಿದ ಸುಜಾತ ಭಟ್ ಅವರ ವಿಚಾರಣೆ ವೇಳೆ ಲಭ್ಯವಾದ ಮಾಹಿತಿಗಳು, ತಿಮರೋಡಿ ಮನೆ ಮೇಲೆ ಇತ್ತೀಚೆಗೆ ದಾಳಿ ಮಾಡಿದ ಸಂದರ್ಭದಲ್ಲಿ ವಶಕ್ಕೆ ಪಡೆಯಲಾಗಿರುವ ದಾಖಲೆಗಳ ಬಗ್ಗೆಯೂ ಮೊಹಂತಿ ಅವರು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಬುರುಡೆ ಚಿನ್ನಯ್ಯ ವಿಚಾರಣೆ ವೇಳೆ ಎಸ್‌ಐಟಿ ಮುಂದೆ ಹೇಳಿರುವ ಮಾಹಿತಿಗಳ ಬಗ್ಗೆಯೂ ವಿವರಗಳನ್ನು ಮೊಹಂತಿಯವರು ಪರಿಶೀಲಿಸಿದ್ದಾರೆ.ಒಟ್ಟಾರೆ ಇಂದು ಡಿಜಿಪಿ ಪ್ರಣವ್ ಮೊಹಂತಿ ಅವರು ಎಸ್‌ಐಟಿ ಕಚೇರಿಗೆ ಭೇಟಿ ನೀಡಿರುವುದು ಬಹಳ ಮಹತ್ವ ಪಡೆದುಕೊಂಡಿದೆ.
- ಕೇವಲ 4 ನಿಮಿಷದಲ್ಲಿ ನೆಪೋಲಿಯನ್ ಕಿರೀಟದ ಆಭರಣಗಳನ್ನು ಕದ್ದ ಕಳ್ಳನ ಕೈಚಳಕಕ್ಕೆ ಫಿದಾ ಆದ ಸಚಿವೆ..!
- ಓಲಾ ಕಂಪನಿ ನೌಕರ ಆತ್ಮಹತ್ಯೆ ಪ್ರಕರಣ : ಕಂಪನಿ ಸಿಇಓ, ಹಿರಿಯ ಅಧಿಕಾರಿ ವಿರುದ್ಧ ಎಫ್ಐಆರ್
- ದೀಪಾವಳಿ ಮೊದಲ ದಿನವೇ ದೆಹಲಿಯಲ್ಲಿ ಹೆಚ್ಚಿದ ವಾಯುಮಾಲಿನ್ಯ
- ಆರ್ಎಸ್ಎಸ್ ಚಟುವಟಿಕೆಗಳಿಗೆ ನಿರ್ಬಂಧ : ಸರ್ಕಾರದ ವಿರುದ್ಧ ಶೆಟ್ಟರ್ ವಾಗ್ದಾಳಿ
- ಹಾಸನಾಂಬ ದರ್ಶನ ಪಡೆದು ವಾಪಸ್ಸಾಗುತ್ತಿದ್ದಾಗ ಭೀಕರ ಅಫಘಾತ : ಇಬ್ಬರ ಸಾವು