Friday, August 29, 2025
Homeರಾಜ್ಯರಾಹುಲ್‌ ಗಾಂಧಿ 'ಮತದಾನ ಅಧಿಕಾರ ಯಾತ್ರೆ'ಯಲ್ಲಿ ಸಿದ್ದು ಭಾಗಿ

ರಾಹುಲ್‌ ಗಾಂಧಿ ‘ಮತದಾನ ಅಧಿಕಾರ ಯಾತ್ರೆ’ಯಲ್ಲಿ ಸಿದ್ದು ಭಾಗಿ

CM Siddaramaiah to join ahul Gandhi’s Voter Adhikar Yatra

ಬೆಂಗಳೂರು, ಆ.29– ಬಿಹಾರದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ನಡೆಸುತ್ತಿರುವ ಮತದಾನ ಅಧಿಕಾರ ಯಾತ್ರೆ ಬೆಂಬಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಬೆಂಗಳೂರಿನಿಂದ ಸಚಿವರಾದ ಕೆ.ಜೆ. ಜಾರ್ಜ್‌, ಪರಮೇಶ್ವರ್‌, ಸತೀಶ್‌ ಜಾರಕಿಹೊಳಿ, ಡಾ. ಎಂ.ಸಿ. ಸುಧಾಕರ್‌, ಜಮೀರ್‌ ಅಹಮದ್‌ಖಾನ್‌, ಹಿರಿಯ ಕಾಂಗ್ರೆಸ್ಸಿಗರಾದ ಬಿ.ಕೆ.ಹರಿಪ್ರಸಾದ್‌, ವಿಧಾನಪರಿಷತ್‌ ಸದಸ್ಯರಾದ ಸಲೀಮ್‌ ಅಹಮದ್‌, ಯತೀಂದ್ರ ಸಿದ್ದರಾಮಯ್ಯ, ಶಾಸಕ ಎ.ಎಸ್‌‍.ಪೊನ್ನಣ್ಣ ಸೇರಿದಂತೆ 20 ಮಂದಿ ಶಾಸಕರು, ಸಚಿವರ ನಿಯೋಗದೊಂದಿಗೆ ಉತ್ತರ ಪ್ರದೇಶದ ಗೋರಖ್‌ಪುರ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಬಿಹಾರದ ಗೋಪಾಲ್‌ಗಂಜ್‌ಗೆ ರಸ್ತೆ ಮೂಲಕ ಪ್ರಯಾಣ ಬೆಳೆಸಿದರು.

ಬಿಹಾರದಲ್ಲಿ ರಾಹುಲ್‌ಗಾಂಧಿ ಅವರ ಜೊತೆ ಯಾತ್ರೆ ಹಾಗೂ ಸಾರ್ವಜನಿಕ ಸಮಾವೇಶದಲ್ಲಿ ಸಿದ್ದರಾಮಯ್ಯ ನೇತೃತ್ವ ಭಾಗವಹಿಸಿದೆ. ಬಿಹಾರಕ್ಕೆ ತೆರಳಿದ ಸಿದ್ದರಾಮಯ್ಯ ಅವರಿಗೆ ಅಲ್ಲಿನ ಕಾಂಗ್ರೆಸ್‌‍ ಮುಖಂಡರು, ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದರು. ಹಿಂದುಳಿದ ವರ್ಗಗಳ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್‌‍ ಬೇರೆ ಬೇರೆ ರಾಜ್ಯಗಳಿಂದ ಮುಖಂಡರನ್ನು ಆಹ್ವಾನಿಸಿ, ರಾಹುಲ್‌ ಗಾಂಧಿ ಅವರ ಯಾತ್ರೆಗೆ ಬಲ ತುಂಬುವ ಪ್ರಯತ್ನ ಮಾಡುತ್ತಿದೆ.

ರಾಹುಲ್‌ಗಾಂಧಿ ಅವರ ಯಾತ್ರೆಗೆ ಭಾರಿ ಪ್ರಮಾಣದಲ್ಲಿ ಸೇರುತ್ತಿದ್ದು, ಇದು ಕಾಂಗ್ರೆಸ್‌‍ ಪಕ್ಷಕ್ಕೆ ಅಚ್ಚರಿ ಉಂಟುಮಾಡುತ್ತಿದೆ. ಮತಗಳ್ಳತನದ ವಿರುದ್ಧ ರಾಹುಲ್‌ಗಾಂಧಿ ಹೋರಾಟ ಆರಂಭಿಸಿದ್ದಾರೆ.ಈ ಮೊದಲು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಯಾತ್ರೆಯಲ್ಲಿ ಭಾಗವಹಿಸಿದ್ದರು. ಅವರ ನಂತರ ಸಿದ್ದರಾಮಯ್ಯ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಬಿಹಾರದ ಚಂಪಾರಣ್‌, ಮಂಗಳಪುರ, ಗೋಪಾಲ್‌ಗಂಜ್‌, ಶಿವಾನ್‌ ಸೇರಿದಂತೆ ಹಲವು ಭಾಗಗಳಲ್ಲಿ ರಾಹುಲ್‌ಗಾಂಧಿ ಅವರ ಯಾತ್ರೆ ಸಾಗಿದೆ.

ಒಂದು ಕಾಲದಲ್ಲಿ ಸಿದ್ದರಾಮಯ್ಯ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಜನತಾ ಪರಿವಾರದಲ್ಲಿದ್ದವರು ಹಾಗೂ ಪರಸ್ಪರ ಉತ್ತಮ ಸ್ನೇಹಿತರಾಗಿದ್ದರು. ಬದಲಾದ ರಾಜಕೀಯ ಪರಿಸ್ಥಿಯಲ್ಲಿ ನಿತೀಶ್‌ಕುಮಾರ್‌ ಬಿಜೆಪಿ ಮೈತ್ರಿಯಲ್ಲಿದ್ದು, ಸಿದ್ದರಾಮಯ್ಯ ತಮ ಹಳೆಯ ಸ್ನೇಹಿತನ ವಿರುದ್ಧವೇ ಬಿಹಾರದಲ್ಲಿ ಪ್ರಚಾರದ ಅಖಾಡಕ್ಕೆ ಇಳಿಯುವಂತಾಗಿದೆ.

RELATED ARTICLES

Latest News