ಬೆಳ್ತಂಗಡಿ,ಆ.30- ಅನನ್ಯ ಭಟ್ ನಾಪತ್ತೆ ಪ್ರಕರಣದ ವಿಚಾರದಲ್ಲಿ ಸುಜಾತ ಭಟ್ ಅವರನ್ನು ಎಸ್‌ಐಟಿ ಸತತ ನಾಲ್ಕು ದಿನಗಳ ಕಾಲ ವಿಚಾರಣೆ ನಡೆಸಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದು, ಮತ್ತೆ ಕರೆದಾಗ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿ ಅವರನ್ನು ಕಳುಹಿಸಿದೆ.
ಅನನ್ಯ ಭಟ್ ವಿಚಾರದಲ್ಲಿ ತಾನು ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ಸುಜಾತ ಭಟ್ ವಿಚಾರಣೆ ವೇಳೆ ಎಸ್‌ಐಟಿ ಮುಂದೆ ವಿವರವಾಗಿ ಹೇಳಿದ್ದಾರೆಂದು ಗೊತ್ತಾಗಿದೆ.ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ನನ್ನ ಮಗಳು ಅನನ್ಯ ಭಟ್ ಧರ್ಮಸ್ಥಳಕ್ಕೆ ಬಂದಿದ್ದಾಗ ಕಾಣೆಯಾಗಿದ್ದಾಳೆ. ಆಕೆಯನ್ನು ಕೊಲೆ ಮಾಡಿ ಹೂಳಲಾಗಿದೆ. ಆಕೆಯ ಅಸ್ಥಿ ಸಿಕ್ಕಿದರೆ ನನಗೆ ಕೊಡಿ. ನಮ ಸಂಪ್ರದಾಯದಂತೆ
ಅಂತ್ಯಕ್ರಿಯೆ ಮಾಡುವುದಾಗಿ ಈ ಹಿಂದೆ ಪೊಲೀಸರ ಮುಂದೆ ಸುಜಾತ ಭಟ್ ಅವರು ಅಳಲು ತೋಡಿಕೊಂಡು ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದರು.ಇದೀಗ ಸುಜಾತ ಭಟ್ ಅವರು ತಮ ಹೇಳಿಕೆಯನ್ನು ಬದಲಿಸಿದ್ದು, ಕೆಲವರು ಹೇಳಿಕೊಟ್ಟಂತೆ ನಾನು ಮಾಧ್ಯಮಗಳ ಮುಂದೆ ಹೇಳಿದ್ದೇನೆ.
ಅನನ್ಯ ಭಟ್ ನಾಪತ್ತೆ ವಿಚಾರದಲ್ಲಿ ನಾನು ಯಾರಿಂದಲೂ ಸಹ ಹಣ ಪಡೆದುಕೊಂಡಿಲ್ಲ. ನಮ ಜಮೀನನ್ನು ಧರ್ಮಸ್ಥಳಕ್ಕೆ ನಮ ಹಿರಿಯರು ಕೊಟ್ಟಿದ್ದಾರೆ. ಅದರಲ್ಲಿ ನನಗೆ ಪಾಲು ಬರಬೇಕು. ಆ ವಿಚಾರದಿಂದ ಬೇಸರಗೊಂಡು ನಾನು ಆ ರೀತಿಯ ಹೇಳಿಕೆ ನೀಡಬೇಕಾಯಿತು ಎಂದು ಎಸ್‌ಐಟಿ ಮುಂದೆ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.
ಸುಜಾತ ಭಟ್ ಅವರು ನೀಡಿರುವ ದೂರು ಪಿಟೀಷಿಯನ್ ಆಗಿದ್ದು, ಅವರಿಗೆ ವಯಸ್ಸಾಗಿರುವುದರಿಂದ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಎಸ್‌ಐಟಿ ವಿಚಾರಣೆ ನಡೆಸಿ ಕಳುಹಿಸಿದೆ. ಬುರುಡೆ ಪ್ರಕರಣದಲ್ಲಿ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಬೇಕೇ ಎಂಬ ಬಗ್ಗೆಯೂ ಎಸ್‌ಐಟಿ ಚಿಂತನೆ ನಡೆಸುತ್ತಿದೆ.
- ಎ-ಖಾತಾ ಸದುಪಯೋಗಕ್ಕೆ ಡಿಸಿಎಂ ಡಿಕೆಶಿ ಕರೆ
- ಇಂಡಿಗೋ ವಿಮಾನದಲ್ಲಿ ಆತಂಕ ಸೃಷ್ಟಿಸಿದ ಬಾಂಬ್ ಬರಹ
- ಹಾಸನಾಂಬ ದರ್ಶನ : ಶಿಷ್ಟಾಚಾರ ಪಾಲಿಸದೆ ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಆರೋಪ : ಜೆಡಿಎಸ್ನಿಂದ ಪ್ರತಿಭಟನೆ
- ದ್ವೇಷದಿಂದ ಮಗಳ ಅಶ್ಲೀಲ ವಿಡಿಯೋ ವೈರಲ್ ಮಾಡಿದವರ ವಿರುದ್ಧ ಕ್ರಮಕ್ಕೆ ತಂದೆ ದೂರು
- ನ್ಯಾಮತಿಯ ಎಸ್ಬಿಐ ಬ್ಯಾಂಕ್ ಕಳವು ಪ್ರಕರಣ ಸುಖಾಂತ್ಯ, ಗ್ರಾಹಕರು ನಿರಾಳ