Sunday, August 31, 2025
Homeರಾಜ್ಯಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿಯಲ್ಲಿ 5 ಪಾಲಿಕೆಗಳಿಗೆ 10 ವಲಯ ಕಚೇರಿ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿಯಲ್ಲಿ 5 ಪಾಲಿಕೆಗಳಿಗೆ 10 ವಲಯ ಕಚೇರಿ

10 zonal offices for 5 corporations under Greater Bangalore Authority

ಬೆಂಗಳೂರು, ಆ.30– ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಇನುಂದೆ 5 ಪಾಲಿಕೆಗಳು ರಚನೆಯಾಗಲಿದ್ದು, ಪ್ರತಿ ಪಾಲಿಕೆಗೆ ತಲಾ ಎರಡು ವಲಯ ಕಚೇರಿಗಳನ್ನು ಗುರುತಿಸಲಾಗಿದೆ.
ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕೇಂದ್ರ ಕಚೇರಿಯ ಬಿಬಿಎಂಪಿ ಮುಖ್ಯ ಕಚೇರಿಯ ಅನೆಕ್‌್ಸ 1 ಮತ್ತು 2ರ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿವೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ ಕಚೇರಿಯೂ ವಲಯ-1ರಲ್ಲಿ ಹಾಲಿ ಪೂರ್ವ ವಲಯ ಕಚೇರಿ ಹಾಗೂ ವಲಯ-2ರ ಕಚೇರಿಯೂ ಬಿಬಿಎಂಪಿಯು ಅನೆಕ್ಸ್ -3 ಕಟ್ಟಡದಲ್ಲಿ ಇರಲಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆಯ ವಲಯ-1ರ ಕಚೇರಿ ಹಾಲಿ ಮಹದೇವಪುರ ವಲಯ ಕಚೇರಿಯಲ್ಲಿ ಹಾಗೂ ವಲಯ-2ರ ಕಚೇರಿ ಹಾಲಿ ಕೆ.ಆರ್‌.ಪುರಂ ಮುಖ್ಯ ಅಭಿಯಂತರರ ಕಚೇರಿಯಲ್ಲಿರಲಿದೆ.

ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಲಯ-1 ಕಚೇರಿ ಹಾಲಿ ಆರ್‌.ಆರ್‌.ನಗರ ವಲಯ ಕಚೇರಿ ಮತ್ತು ವಲಯ-2ರ ಕಚೇರಿ ಹಾಲಿ ಚಂದ್ರಾಲೇಔಟ್‌ನ ಪಾಲಿಕೆ ಸೌಧದಲ್ಲಿರಲಿದೆ.ಬೆಂಗಳೂರು ಉತ್ತರ ನಗರ ಪಾಲಿಕೆಯ ವಲಯ-1ರ ಕಚೇರಿ ಹಾಲಿ ಯಲಹಂಕ ವಲಯ ಕಚೇರಿ ಹಾಗೂ ವಲಯ-2 ಹಾಲಿ ದಾಸರಹಳ್ಳಿ ವಲಯ ಕಚೇರಿಯಲ್ಲಿ ಇರುತ್ತದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಲಯ ಒಂದರ ಕಚೇರಿ ಹಾಲಿ ದಕ್ಷಿಣ ವಲಯ ಕಚೇರಿಯಲ್ಲಿ ಹಾಗೂ ವಲಯ ಎರಡರ ಕಚೇರಿ ಬೊಮನಹಳ್ಳಿ ವಲಯ ಕಚೇರಿಯಲ್ಲಿರುತ್ತದೆ ಎಂದು ಜಿಬಿಎ ಮೂಲಗಳು ತಿಳಿಸಿವೆ.

RELATED ARTICLES

Latest News