Monday, September 1, 2025
Homeರಾಷ್ಟ್ರೀಯ | Nationalಜಮ್ಮು-ಕಾಶ್ಮೀರದ ಗಂಡೇರ್ಬಲ್‌ ಜಿಲ್ಲೆಯಲ್ಲಿ ಆಕಸ್ಮಿಕ ಅವಘಡದಲ್ಲಿ ಯೋಧ ಸಾವು

ಜಮ್ಮು-ಕಾಶ್ಮೀರದ ಗಂಡೇರ್ಬಲ್‌ ಜಿಲ್ಲೆಯಲ್ಲಿ ಆಕಸ್ಮಿಕ ಅವಘಡದಲ್ಲಿ ಯೋಧ ಸಾವು

Soldier dies in accidental fire in Ganderbal

ಶ್ರೀನಗರ, ಆ.31– ಜಮ್ಮು-ಕಾಶ್ಮೀರದ ಗಂಡೇರ್ಬಲ್‌ ಜಿಲ್ಲೆಯಲ್ಲಿ ಆಕಸ್ಮಿಕ ಅವಘಡದಲ್ಲಿ ಯೋಧನೊಬ್ಬ ಸಾವನ್ನಪ್ಪಿದ್ದಾನೆ ಕಳೆದ ರಾತ್ರಿ ಸೇನೆಯ ರಾಷ್ಟ್ರೀಯ ರೈಫಲ್ಸ್ ನ ಕಾನ್ಸ್ ಟೇಬಲ್‌‍ ಚೋಟು ಕುಮಾರ್‌ ಅವರು ಮಧ್ಯ ಕಾಶ್ಮೀರ ಜಿಲ್ಲೆಯ ಮಾನಸ್ಬಲ್‌ ಪ್ರದೇಶವನ್ನು ತಲುಪುವಾಗ ಟ್ರಕ್‌ನಿಂದ ಹಾರಿದಾಗ ಅವರ ಸರ್ವಿಸ್‌‍ ರೈಫಲ್‌ ಆಕಸ್ಮಿಕವಾಗಿ ಸ್ಫೋಟಗೊಂಡ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವರ ರೈಫಲ್‌ನ ಟ್ರಿಗರ್‌ ಆಕಸ್ಮಿಕವಾಗಿ ಒತ್ತಿದ ಕಾರಣ ಕಾನ್ಸ್ ಟೇಬಲ್‌‍ ಕುಮಾರ್‌ ಅವರ ಗಲ್ಲದ ಕೆಳಗೆ ಗುಂಡೇಟಿನಿಂದ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಘಟನೆ ಕುರಿತಂದೆ ತಿನಿಖೆ ನಡೆದಿದೆ ಮೃತ ಯೋಧನ ಶವವನ್ನು ಸೇನಾ ಶಿಬಿರಕ್ಕೆ ತರಲಾಗಿದ್ದು ಸಹದ್ಯೋಗಿಗಳು ಅಂತಿಮ ನಮನ ಸಲ್ಲಿಸಿದ್ದಾರೆ.

RELATED ARTICLES

Latest News