ಮುಂಬೈ, ಆ.31– ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಿಂದಿ ಕಿರುತೆರೆಯ ಪ್ರಖ್ಯಾತ ನಟಿ ಪ್ರಿಯಾ ಮರಾಠೆ (38) ಅವರು ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ 4 ಗಂಟೆಗೆ ತಮ ಇಹಲೋಕ ಯಾತ್ರೆ ಮುಗಿಸಿದ್ದಾರೆ.
ಸುಶಾಂತ್‌ಸಿಂಗ್ ರಜಪೂತ್ ನಟಿಸಿದ್ದ ಪವಿತ್ರ ರಿಶ್ತಾ',
ಬಾರ್ ದಿವಸ್ ಸಾಸುಚೇ’, ಬಡೇ ಅಚ್ಚೇ ಲಗ್ತೆ ಹೈ',
ಸಾಥ್ ನಿಭಾನಾ ಸಾಥಿಯಾ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಿಯಾ ನಟಿಸಿದ್ದರು.
2023ರಲ್ಲೇ ಪ್ರಿಯಾ ಮರಾಠೆ ಅವರಿಗೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಆಗ ತಾವು ನಟಿಸುತ್ತಿದ್ದ `ತುಝೇಚ್ ಮೀ ಗೀತ್ ಗಾತ್ ಅಹೇ’ ಎಂಬ ಧಾರಾವಾಹಿಗೆ ನನ್ನಿಂದ ತೊಂದರೆಯಾಗಬಾರದು ಎಂದು ನಟನೆಯನ್ನು ನಿಲ್ಲಿಸಿದ್ದರು. ಪ್ರಿಯಾ ನಿಧನಕ್ಕೆ ಹಲವು ಕಲಾವಿದರು ಕಂಬನಿ ಮಿಡಿದಿದ್ದಾರೆ.
- ಧರ್ಮಸ್ಥಳ ಪ್ರಕರಣ NIAಗೆ ವಹಿಸಿ: ಸಂತರಿಂದ ಅಮಿತ್ಶಾಗೆ ಮನವಿ
- ಜಾಗತಿಕ ಮಾದರಿಯ ಏಕರೂಪ ಜಿಎಸ್ಟಿಗೆ ಗೃಹ ಸಚಿವ ಪರಮೇಶ್ವರ್ ಆಗ್ರಹ
- ಮಾವೋವಾದಿಗಳ ಗುಂಡೇಟಿಗೆ ಇಬ್ಬರು ಯೋಧರು ಬಲಿ
- ನಕಲಿ ಹಣಕಾಸು ಸಂಸ್ಥೆಯಿಂದ ಹೂಡಿಕೆದಾರರಿಗೆ 93 ಕೋಟಿ ವಂಚನೆ
- ಕ್ರಿಕೆಟಿಗ ಶಿಖರ್ ಧವನ್ಗೆ ಇಡಿ ಸಮನ್ಸ್