ಬೆಂಗಳೂರು, ಆ.31– ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಒಟ್ಟಾರೆ ವಾಡಿಕೆ ಪ್ರಮಾಣದ ಮಳೆಯಾಗಿದೆ. ಜೂನ್ ಒಂದರಿಂದ ಆ.30ರ ನಡುವಿನ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ ಪ್ರಮಾಣದ ಮಳೆ ಬಿದ್ದಿದೆ.
‘
ಹಾಗೆಯೇ ಜನವರಿ ಒಂದರಿಂದ ಆ.30ರ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೆ. ಆಗಸ್ಟ್ ಕೊನೆಯವಾರದಲ್ಲಿ ಕೆಲವೆಡೆ ಅತಿವೃಷ್ಟಿ, ಪ್ರವಾಹ ಉಂಟಾಗುವಂತಹ ಮಳೆಯಾಗಿದ್ದರೂ ಒಟ್ಟಾರೆ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಬಹಳಷ್ಟು ಕಡೆಗಳಲ್ಲಿ ಮಳೆ ಕೊರತೆ ಉಂಟಾಗಿರುವುದು ಕಂಡುಬಂದಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಜೂನ್ ಒಂದರಿಂದ ನಿನ್ನೆಯವರೆಗಿನ ವಾಡಿಕೆ ಮಳೆ ಪ್ರಮಾಣ 686 ಮಿ.ಮೀ. ಆಗಿದ್ದು, 721 ಮಿ.ಮೀ.ನಷ್ಟು ಮಳೆ ರಾಜ್ಯದಲ್ಲಿ ಬಿದ್ದಿದ್ದು, ಶೇ.5ರಷ್ಟು ವಾಡಿಕೆಗಿಂತ ಹೆಚ್ಚಾಗಿದೆ.ದಕ್ಷಿಣ ಒಳನಾಡಿನಲ್ಲಿ ಶೇ.10ರಷ್ಟು, ಉತ್ತರ ಒಳನಾಡಿನಲ್ಲಿ ಶೇ.21ರಷ್ಟು ಹೆಚ್ಚು ಮಳೆಯಾಗಿದ್ದರೆ, ಮಲೆನಾಡಿನಲ್ಲಿ ಶೇ.6ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಆದರೆ, ಕರಾವಳಿಯಲ್ಲಿ ವಾಡಿಕೆಗಿಂತ ಶೇ.3ರಷ್ಟು ಹೆಚ್ಚು ಮಳೆಯಾಗಿದೆ.
ಜನವರಿ ಒಂದರಿಂದ ನಿನ್ನೆಯವರೆಗೆ ರಾಜ್ಯದ ವಾಡಿಕೆ ಮಳೆ ಪ್ರಮಾಣ 805 ಮಿ.ಮೀ. ಆಗಿದ್ದು, 1009 ಮಿ.ಮೀ.ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.25ರಷ್ಟು ಹೆಚ್ಚು ಮಳೆಯಾಗಿದೆ.
ದಕ್ಷಿಣ ಒಳನಾಡಿನಲ್ಲಿ ಶೇ.30ರಷ್ಟು, ಉತ್ತರ ಒಳನಾಡಿನಲ್ಲಿ ಶೇ.42ರಷ್ಟು, ಮಲೆನಾಡಿನಲ್ಲಿ ಶೇ.12ರಷ್ಟು , ಕರಾವಳಿಯಲ್ಲಿ ಶೇ.22ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ಆಗಸ್ಟ್ ಒಂದರಿಂದ ನಿನ್ನೆಯವರೆಗೆ 215 ಮಿ.ಮೀ. ವಾಡಿಕೆ ಮಳೆಯಾಗಿದ್ದು, 255 ಮಿ.ಮೀ.ನಷ್ಟು ಮಳೆಯಾಗಿದೆ. ಒಟ್ಟಾರೆ ಶೇ.19ರಷ್ಟು ಹೆಚ್ಚು ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.62ರಷ್ಟು, ಉತ್ತರ ಒಳನಾಡಿನಲ್ಲಿ ಶೇ.70ರಷ್ಟು ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ. ಆದರೆ, ಹೆಚ್ಚು ಮಳೆಯಾಗುತ್ತಿದ್ದ ಮಲೆನಾಡಿನಲ್ಲಿ ಶೇ.14ರಷ್ಟು , ಕರಾವಳಿಯಲ್ಲಿ ಶೇ.6 ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಈ ಬಾರಿ ಮುಂಗಾರು ಮೇನಲ್ಲೇ ಆರಂಭಗೊಂಡರೂ ಜೂನ್‌ನಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿ ತ್ತು. ಆದರೆ, ಜುಲೈ ಮತ್ತು ಆಗಸ್ಟ್‌ನಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ ಹೆಚ್ಚಾಗಿದೆ.
ನಿರಂತರವಾಗಿ ಮಳೆ ಬೀಳದೆ, ಕೆಲವೆಡೆ ಕೈ ಕೊಟ್ಟಿದ್ದರೆ, ಮತ್ತೆ ಕೆಲವೆಡೆ ಅತಿವೃಷ್ಟಿ ಉಂಟಾಗಿದೆ. ಬಹುತೇಕ ಪ್ರಮುಖ ಜಲಾಶಯಗಳು ಗರಿಷ್ಠ ಪ್ರಮಾಣದಲ್ಲಿ ಭರ್ತಿಯಾಗಿದ್ದು, ಕುಡಿಯುವ ನೀರಿನ ಹಾಗೂ ನೀರಾವರಿ ಬೆಳೆಗಳ ಸಮಸ್ಯೆ ದೂರ ಸರಿದಿದೆ.
ಆಗಸ್ಟ್‌ನಲ್ಲಿ ಸಾಕಷ್ಟು ಮಳೆಯಾದ ಪರಿಣಾಮ ವಾಡಿಕೆಗಿಂತ ಹೆಚ್ಚು ಬಿತ್ತನೆಯಾಗಿದೆ. ಕೃಷಿ ಚಟುವಟಿಕೆಗಳು ಚುರುಕಾಗಿವೆ. ಆದರೆ, ದಕ್ಷಿಣ ಒಳನಾಡು ಹಾಗೂ ಬಯಲು ಸೀಮೆಯ ಸಣ್ಣ ಕೆರೆಗಳಿಗೆ ನೀರು ಬಾರದಿರುವುದು ರೈತರು ಹಾಗೂ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಏಕೆಂದರೆ, ಅಂರ್ತಜಲ ಕುಸಿತವಾಗುವುದಲ್ಲದೆ, ಜನ-ಜಾನುವಾರುಗಳ ನೀರಿಗೆ ಮುಂದೆ ಅಭಾವ ಉಂಟಾಗುವ ಭಯ ಕಾಡತೊಡಗಿದೆ.
- ವಿಶ್ವದ ಗಮನ ಸೆಳೆದ ಮೋದಿ-ಜಿನ್ಪಿಂಗ್ ಮೀಟಿಂಗ್: ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಬದ್ಧ
- ಧರ್ಮಸ್ಥಳ ಪ್ರಕರಣ ಕುರಿತು ಎಸ್ಐಟಿ ತನಿಖೆ ಹಿಂದೆ ಗಾಂಧಿ ಕುಟುಂಬದ ಷಡ್ಯಂತ್ರ : ಯತ್ನಾಳ್ ಗಂಭೀರ ಆರೋಪ
- ದಸರಾ ನಾಡ ಹಬ್ಬ, ಎಲ್ಲಾ ಧರ್ಮದವರಿಂದ ಆಚರಣೆ : ಸಿಎಂ ಸಿದ್ದರಾಮಯ್ಯ
- ಕೃಷಿ ಹೊಂಡದಲ್ಲಿ ಪುರುಷ ಹಾಗೂ ಮಹಿಳೆಯ ಶವ ಪತ್ತೆ
- ರಾಯಚೂರು : ಗಣೇಶ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು