ನವದೆಹಲಿ, ಆ.31– ಇಲ್ಲಿಂದ ಇಂದೋರ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ವರದಿಯಾಗಿದೆ.
ದೆಹಲಿಯಿಂದ ಹೊರಟ ವಿಮಾನ ಸುಮಾರು ಅರ್ಧ ಗಂಟೆ ಪ್ರಯಾಣದ ನಂತರ ವಿಮಾನದ ಬಲಭಾಗದ
ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಎಚ್ಚೆತ್ತ ಪೈಲೆಟ್ ವಿಮಾನವನ್ನು ದೆಹಲಿಯತ್ತ ಹಿಂತಿರುಗಿಸಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ.ಇಂದು ಬೆಳಗ್ಗೆ 6.15ಕ್ಕೆ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ ಎಂದು ಮೂಲಗಳು ತಿಳಿಸಿದ್ದು, ಈ ವಿಮಾನದಲ್ಲಿ ಸುಮಾರು 90 ಪ್ರಯಾಣಿಕರಿದ್ದರು.
ತುರ್ತು ಸಂದೇಶ ಬಂದ ನಂತರ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಿ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂತರ ಪ್ರಯಾಣಿಕರನ್ನು ಬೇರೆ ವಿಮಾನದಲ್ಲಿ ಕಳುಹಿಸಲಾಗಿದೆ. ಆದರೆ, ವಿಮಾನ ಮಾರ್ಗಮಧ್ಯದಲ್ಲೇ ಎಂಜಿನ್ ದೋಷ ಕಾಣಿಸಿಕೊಂಡು ಭಾರೀ ಸಮಸ್ಯೆ ಸೃಷ್ಟಿಸಿತ್ತು ಎಂದು ಹೇಳಲಾಗಿದೆ.