ರಾಯಚೂರು, ಆ.31- ಗಣೇಶಮೂರ್ತಿ ಮೆರವಣಿಗೆ ವೇಳೆ ವಿದ್ಯುತ್ ತಂತಿ ತಾಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಗುಟ್ಟುಬಿಚ್ಚಾಲಿಯಲ್ಲಿ ನಡೆದಿದೆ.ನರಸಿಂಹ (22) ಮೃತ ದುರ್ದೈವಿ.
ಬೊಲೆರೋ ವಾಹನದಲ್ಲಿ ಗಣೇಶಮೂರ್ತಿಯನ್ನಿರಿಸಿ ವಿಸರ್ಜನೆಗಾಗಿ ಹನುಮಾಪುರ ಬಳಿಯ ರಾಜೊಳ್ಳಿಬಂಡಾದಲ್ಲಿ ತೆರಳುವಾಗ ರಸ್ತೆ ಮಧ್ಯೆ ಹಾದು ಹೋಗಿದ್ದ ವಿದ್ಯುತ್ ತಂತಿ ನರಸಿಂಹನಿಗೆ ತಾಗಿದೆ.
ವಿದ್ಯುತ್ ಸ್ಪರ್ಶಿಸುತ್ತಿದ್ದಂತೆ ನರಸಿಂಹನ ಪಕ್ಕದಲ್ಲಿದ್ದ ಕೆಲವರು ವಾಹನದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಆದರೆ, ನರಸಿಂಹ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯರಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ನಾನು ಯಾವ ಪಕ್ಷಕ್ಕೂ ಸೇರಲ್ಲ, ಕೊನೆಯವರೆಗೂ ಕಾಂಗ್ರೆಸ್ನಲ್ಲೇ ಇರುತ್ತೇನೆ : ಕೆ.ಎನ್.ರಾಜಣ್ಣ
- ಪ್ರಧಾನಿ ಮೋದಿ ತಾಯಿಗೆ ನಿಂದನೆ ಖಂಡಿಸಿ ನಾಳೆ ಬಿಹಾರ ಬಂದ್
- ಪ್ರತಿ ಮಗುವಿಗೂ ಪೋಷಕರಿಬ್ಬರ ಪ್ರೀತಿ ಪಡೆಯುವ ಹಕ್ಕಿದೆ ; ಸುಪ್ರೀಂ ಕೋರ್ಟ್
- ಹೆಚ್ಡಿಕೆ ಭೇಟಿಯಾದ ಗೋವಾ ಸಿಎಂ, ರಾಜ್ಯ ರಾಜಕಾರಣದಲ್ಲಿ ತಲ್ಲಣ
- ದೊಡ್ಡಬಳ್ಳಾಪುರ : ಗಣೇಶ ವಿಸರ್ಜನೆ ವೇಳೆ ಪಟಾಕಿ ದುರಂತ ಗಾಯಗೊಂಡಿದ್ದ ಮತ್ತೊಬ್ಬ ಬಾಲಕ ಸಾವು