ಬೀದರ್, ಸೆ.1- ಗುಟ್ಕಾ, ಪಾನ್ ಮಸಾಲಾ ನಕಲು ಮಾಡಿ ಮಾರುತ್ತಿದ್ದ ಜಾಲವನ್ನು ಬೀದರ್ ಜಿಲ್ಲೆಯಲ್ಲಿ ಪೊಲೀಸರು ಎರಡು ಕಡೆ ದಾಳಿ ನಡೆಸಿ ಒಟ್ಟು 2.20 ಕೋಟಿ ರೂ. ಮೌಲ್ಯದ ನಕಲಿ ತಂಬಾಕು ವಸ್ತುಗಳನ್ನು ಜಪ್ತಿ ಮಾಡಿ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಹೈದರಾಬಾದ್ ಮೂಲದ ತನ್ವೀರ್, ಬೀದರ್ ಮೂಲದ ರಿಜ್ವಾನ್, ತನ್ವೀರ್ ಶೇರಿಕಾರ್, ಬಸೀರುದ್ದೀನ್, ಮಣಿಪುರ ಮೂಲದ ಯಾಸೀನ್, ಎಂ.ಡಿ. ಸಿರಾಜ್, ಶರೀಫ್,ಅನಾಸ್, ರೋಹಿತ್, ಚೇಸಾನ್, ಮೊಹದ್ ಅನಾಸ್ ಎಂದು ಎಸ್‌ಪಿ ಪ್ರದೀಪ್ ಗುಂಟೆ ಮಾಹಿತಿ ನೀಡಿದ್ದಾರೆ.
ಗಾಂಧಿಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯ ಚಿದ್ರಿಬುತ್ತಿ ಬಸವಣ್ಣ ಹತ್ತಿರದ ಮನೆಯಲ್ಲಿ ಅಕ್ರಮವಾಗಿ ಪಾನ್ ಮಸಾಲಾ, ಕಲಬೆರಕೆ ಮಾಡಿದ ಗುಟ್ಕಾ ಸಾಮಗ್ರಿಯನ್ನು ಸಂಗ್ರಹಿಸಿಡಲಾಗಿತ್ತು ಇದನ್ನು ಪತ್ತೆ ಮಾಡಿ ನಮ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ನೂತನ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೋಳಾರ ಕೈಗಾರಿಕಾ ಪ್ರದೇಶದಲ್ಲಿ ಶೇಡ್‌ವೊಂದರ ಮೇಲೂ ದಾಳಿ ನಡೆಸಲಾಗಿದೆ. ಹೊರಗೆ ಟು ಲೆಟ್ ಬೋರ್ಡ್ ಹಾಕಿ, ಒಳಗಡೆ ಪರವಾನಗಿ ಇಲ್ಲದೆ, ಮಾನವನ ಆರೋಗ್ಯಕ್ಕೆ ಹಾನಿಕಾರಕವಾದಂಥ ರಾಸಾಯನಿಕ ಪದಾರ್ಥಗಳನ್ನ ಸಂಗ್ರಹಿಸಿಟ್ಟಿರುವುದು ಕಂಡುಬಂದಿತ್ತು. ಸದ್ಯ 43.30 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತರ ವಿರುದ್ಧ ಬಿಎನ್‌ಎಸ್ ಕಾಯ್ದೆ 2023 ರ ಕಲಂ 7, ಕೋಟ್ಟಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಎಂದು ಎಸ್‌ಪಿ ತಿಳಿಸಿದ್ದಾರೆ. ಬೇರೆ ರಾಜ್ಯದವರು ಕರ್ನಾಟಕದಲ್ಲಿ ಬಂದು ಕಲಬೆರಕೆ ಗುಟ್ಕಾ ತಯಾರಿಸಿ,ಕಳ್ಳ ದಂಧೆ ನಡೆಸುತ್ತಿರುವುದು ಗೊತ್ತಾಗಿದೆ.
- ಕ್ರಿಕೆಟಿಗ ಶಿಖರ್ ಧವನ್ಗೆ ಇಡಿ ಸಮನ್ಸ್
- ಜಿಎಸ್ಟಿ ಕಡಿತಗೊಳಿಸಿ ರಾಷ್ಟ್ರಕ್ಕೆ ಐತಿಹಾಸಿಕ ದೀಪಾವಳಿ ಉಡುಗೊರೆ: ಕುಮಾರಸ್ವಾಮಿ
- ಜಿಎಸ್ಟಿ ಸರಳೀಕರಣ ಬಡವರ ಪರ ; ಚಂದ್ರಬಾಬು ನಾಯ್ಡು
- ಅಮದು ಸುಂಕ ಕಡಿಮೆ ಮಾಡುವ ಅವಶ್ಯಕತೆ ಇದೆ ; ರಾಕೇಶ್ ಮೋಹನ್
- ಜಿಎಸ್ಟಿ ಸರಳೀರಣಕ್ಕೆ ದೇಶಾದ್ಯಂತ ವ್ಯಾಪಕ ಸ್ವಾಗತ