ಬೆಂಗಳೂರು,ಸೆ.1- ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ದ ವ್ಯವಸ್ಥಿತ ಷಡ್ಯಂತ್ರ ನಡೆಸಿರುವ ದುಷ್ಟಶಕ್ತಿಗಳು ಸಂಹಾರ ಆಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ವಿರುದ್ಧ ಯಾವ ಶಕ್ತಿಗಳು ವ್ಯವಸ್ಥಿತ ಪಿತೂರಿ ನಡೆಸಿದ್ದಾರೋ ಅವರು ಸಂಹಾರ ಆಗಲೇಬೇಕು. ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಬಿಜೆಪಿ ಹೋರಾಟ ಮತ್ತಷ್ಟು ತೀವ್ರವಾಗಲಿದೆ ಎಂದು ಎಚ್ಚರಿಸಿದರು.
ಧರ್ಮಸ್ಥಳದ ವಿರುದ್ದ ಷಡ್ಯಂತ್ರ ರೂಪಿಸಿ ಅಪಪ್ರಚಾರ ಮಾಡಿದವರನ್ನು ಮಟ್ಟ ಹಾಕಬೇಕು ಎಂಬುದು ನಮ ಅಪೇಕ್ಷ. ಅಪಪ್ರಚಾರಗಳಿಗೆ ಇತಿಶ್ರೀ ಹಾಡಬೇಕು ಎಂದರು. ಕಿಡಿಗೇಡಿಗಳು ಜಾತಿ, ಧರ್ಮದ ಮೂಲಕ ತಮ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ. ಇವರ ಅಪಪ್ರಚಾರದಿಂದಾಗಿ ಕೋಟ್ಯಾಂತರ ಭಕ್ತರು ಕಣ್ಣೀರು ಹಾಕ್ತಿದ್ದಾರೆ. ಇದಕ್ಕೆ ಇತಿಶ್ರೀಹಾಡಲು ಧರ್ಮಸ್ಥಳ ಚಲೋ ಹಮಿಕೊಂಡಿದ್ದೇವೆ ಎಂದು ಹೇಳಿದರು.
ಬಿಜೆಪಿಯ ಪ್ರತಿಭಟನೆಯನ್ನು ರಾಜಕೀಯ ಎಂದ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ವೇದಿಕೆಯಲ್ಲಿ ಅವರ ಆರೋಪಗಳಿಗೆ ಉತ್ತರ ಕೊಡುತ್ತೇವೆ ಎಂದು ಹೇಳಿದರು.
- ನ.23ರಂದು ಬೆಂಗಳೂರಿನಲ್ಲಿ ಕೆನರಾ ಬ್ಯಾಂಕ್ ವತಿಯಿಂದ ‘ಒಗ್ಗಟ್ಟಿನ ಓಟ’ ಮ್ಯಾರಥಾನ್
- ಅಭಿನವ ಬೀಚಿ ಗಂಗಾವತಿ ಪ್ರಾಣೇಶ್ ಅವರ ತಾಯಿ ಸತ್ಯವತಿ ಬಾಯಿ ವಿಧಿವಶ
- ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಬೆಂಗಳೂರಿಂದ ಊರುಗಳತ್ತ ತೆರಳುತ್ತಿರುವ ಜನ, ಭಾರಿ ಟ್ರಾಫಿಕ್ ಜಾಮ್
- ಆಫ್ಘನ್ ಮೇಲೆ ಪಾಕ್ ವೈಮಾನಿಕ ದಾಳಿಗೆ ಮೂವರು ಕ್ರಿಕೆಟಿಗರು ಬಲಿ
- ಬೆಂಗಳೂರು : ಲಾಡ್ಜ್ ನಲ್ಲಿ ಪುತ್ತೂರಿನ ಯುವಕ ಅನುಮಾನಾಸ್ಪದ ಸಾವು