Wednesday, September 3, 2025
Homeಬೆಂಗಳೂರುನೈಜೀರಿಯಾ ಪ್ರಜೆ ಬಂಧನ : 2.30 ಕೋಟಿ ರೂ.ಮೌಲ್ಯದ ಮಾದಕ ವಸ್ತು ಜಪ್ತಿ

ನೈಜೀರಿಯಾ ಪ್ರಜೆ ಬಂಧನ : 2.30 ಕೋಟಿ ರೂ.ಮೌಲ್ಯದ ಮಾದಕ ವಸ್ತು ಜಪ್ತಿ

Nigerian national arrested: Drugs worth Rs 2.30 crore seized

ಬೆಂಗಳೂರು,ಸೆ.2-ಕಡಿಮೆ ಬೆಲೆಗೆ ಮಾದಕ ವಸ್ತು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯೊಬ್ಬನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿ, 2.30 ಕೋಟಿ ರೂ. ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.

ಪ್ರವಾಸಿ ವೀಸಾದಲ್ಲಿ ಮೂರು ವರ್ಷದ ಹಿಂಧೆ ಭಾರತಕ್ಕೆ ಬಂದಿದ್ದ ನೈಜೀರಿಯಾ ಪ್ರಜೆ ವಾಪಸ್‌‍ ತಮ ದೇಶಕ್ಕೆ ಹಿಂದಿರುಗದೆ ಬೆಂಗಳೂರಿಗೆ ಬಂದು ಬಾಗಲೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದನು.ಬಾಗಲೂರು ಗ್ರಾಮದ ಸಂತೆ ಸರ್ಕಲ್‌ನಿಂದ ಸಿಎಂಆರ್‌ ಕಾಲೇಜಿಗೆ ಹೋಗುವ ಮಾರ್ಗಮಧ್ಯದ ರಸ್ತೆಯ ಪಕ್ಕದ ಜಾಗದಲ್ಲಿ ವಿದೇಶಿ ವ್ಯಕ್ತಿಯೊಬ್ಬ ಮಾದಕ ವಸ್ತು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಖಚಿತ ಮಾಹಿತಿ ಮೇರೆಗೆ ಎಂಡಿಪಿಎಸ್‌‍ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ತೆರಳಿದ ಪೊಲೀಸರು ವಿದೇಶಿ ಪ್ರಜೆಯನ್ನು ವಶಕ್ಕೆ ವಿಚಾರಣೆಗೆ ಒಳಪಡಿಸಿದಾಗ ಅಪರಿಚಿತ ವ್ಯಕ್ತಿಯೊಬ್ಬನಿಂದ ಎಂಡಿಎಂಎ ಮಾದಕ ವಸ್ತು ಖರೀದಿಸಿರುವುದಾಗಿ ಹೇಳಿದ್ದಾನೆ.

ಪೊಲೀಸರು ಆತನನ್ನು ಬಂಧಿಸಿ, ಬ್ಯಾಗನ್ನು ಪರಿಶೀಲಿಸಿ, ಅದರಲ್ಲಿದ್ದ 3 ಸಾವಿರ ಹಣ, 2 ಕೆಜಿ 36 ಗ್ರಾಂ ಎಂಡಿಎಂಎ ಮಾದಕ ವಸ್ತು, 1 ದ್ವಿಚಕ್ರ ವಾಹನ, ತೂಕದ ಯಂತ್ರ ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 2.30 ಕೋಟಿ ರೂ.ಗಳೆಂದು ಅಂದಾಜಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.ಇನ್ಸ್ ಪೆಕ್ಟರ್‌ ಶಬರೀಶ್‌ ಹಾಗೂ ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

ಅನಧಿಕೃತವಾಗಿ ನಗರದಲ್ಲಿ ನೆಲೆಸಿದ್ದ ಇಬ್ಬರು ವಿದೇಶಿ ಮಹಿಳೆಯರು..
ಮನೆ ಮಾಲೀಕರು ವೀಸಾ ನಿಯಮಗಳನ್ನು ಉಲ್ಲಂಘಿಸಿ ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆಗೆ ನೀಡಿದ್ದ ಮನೆ ಮಾಲೀಕರ ವಿರುದ್ಧ ಸಿಸಿಬಿ ಮಹಿಳಾ ಪೊಲೀಸರು ಕ್ರಮಕೈಗೊಂಡಿದ್ದಾರೆ.
ಇಬ್ಬರು ವಿದೇಶಿ ಪ್ರಜೆಗಳು ವಿವಿಧ ವೀಸಾದಡಿಯಲ್ಲಿ ಭಾರತಕ್ಕೆ ಬಂದು, ಅನಧಿಕೃತವಾಗಿ ನಗರದಲ್ಲಿ ವಾಸವಾಗಿರುವ ಬಗ್ಗೆ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾಹಿತಿ ಲಭಿಸಿದೆ.
ಈ ಮಾಹಿತಿಯನ್ನು ಆಧರಿಸಿ, ಅನಧಿಕೃತವಾಗಿ ಇಬ್ಬರು ವಿದೇಶಿ ಮಹಿಳೆಯರು ವಾಸವಾಗಿರುವ ಸ್ಥಳಕ್ಕೆ ದಾವಿಸಿದ ಪೊಲೀಸರು ಆ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ, ಮನೆ ಮಾಲೀಕರು ವಿದೇಶಿ ಪ್ರಜೆಗಳಿಗೆ ಸಂಬಂಧಿಸಿದ ಸಿ ಫಾರಂ ಹಾಗೂ ಇತರೆ ದಾಖಲೆಗಳನ್ನು ಸ್ಥಳೀಯ ಪೊಲೀಸ್‌‍ ಠಾಣೆಗೆ ನೀಡದೆ ಇರುವುದು ಕಂಡು ಬಂದಿದೆ.

ಮನೆ ಮಾಲೀಕರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್‌‍ ಠಾಣೆಯಲ್ಲಿ ವಿದೇಶಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇಬ್ಬರು ವಿದೇಶಿ ಪ್ರಜೆಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಠಾಣೆಯ ಠಾಣಾಧಿಕಾರಿಗಳಿಗೆ ಒಪ್ಪಿಸಲಾಗಿದೆ.ಮನೆ ಮಾಲೀಕರು ತಲೆ ಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರೆದಿದ್ದು ತನಿಖೆ ಪ್ರಗತಿಯಲ್ಲಿದೆ.

RELATED ARTICLES

Latest News