ಬೆಂಗಳೂರು,ಸೆ.2- ಚಲನಚಿತ್ರ ನಿರ್ದೇಶಕರೊಬ್ಬರಿಗೆ ನೀಡಿದ್ದ ಸಾಲವನ್ನು ಹಿಂದಿರುಗಿಸುವುದಾಗಿ ಹೇಳಿ ಉದ್ಯಮಿಯನ್ನು ಕರೆಸಿ ಅಪಹರಿಸಿಕೊಂಡು ಹೋಗಿ ಬೆದರಿಸಿ 3 ಲಕ್ಷ ಹಣವನ್ನು ಮೊಬೈಲ್‌ಗೆ ವರ್ಗಾಹಿಸಿಕೊಂಡಿದ್ದ ನಾಲ್ವರು ರೌಡಿಗಳು ಸೇರಿದಂತೆ 6 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಚಲನಚಿತ್ರ ನಿರ್ದೇಶಕ ರೊಬ್ಬರಿಗೆ ರೌಡಿ ರಾಜೇಶ್ ಎಂಬಾತ ರಿಯಲ್ ಎಸ್ಟೇಟ್ ಉದ್ಯಮಿ ಮನೋಜ್ ಅವರಿಂದ ಸಾಲ ಕೊಡಿಸಿದ್ದ.ಆದರೆ ಹಣ ಪಡೆದ ನಿರ್ದೇಶಕರು ಅಸಲು ಹಾಗೂ ಬಡ್ಡಿ ಹಣ ಹಿಂದಿರುಗಿಸಿರಲಿಲ್ಲ .ಹಾಗಾಗಿ ಮನೋಜ್ ಅವರು ಹಣ ಕೊಡಿಸುವಂತೆ ರಾಜೇಶ್‌ಗೆ ಒತ್ತಾಯಿಸುತ್ತಿದ್ದರು.
ಈ ನಡುವೆ ಬಸವೇಶ್ವರ ನಗರದ ನಿರ್ದೇಶಕರ ಮನೆ ಬಳಿ ಬಂದರೆ ನಿಮ ಹಣ ವಾಪಸ್ ಕೊಡಿಸುವುದಾಗಿ ಹೇಳಿ ಮನೋಜ್‌ಅವರನ್ನು ಕರೆಸಿಕೊಂಡಿದ್ದಾರೆ. ಮನೋಜ್ ಅವರು ಸ್ಥಳಕ್ಕೆ ಬರುತ್ತಿದ್ದಂತೆ ನಾಲ್ವರು ರೌಡಿಗಳು ಸೇರಿ 6 ಮಂದಿ ದರೋಡೆಕೋರರು ಅವರನ್ನು ಕಾರಿನಲ್ಲಿ ಅಪಹರಿಸಿಕೊಂಡು ಹಲವು ಸ್ಥಳಗಳಲ್ಲಿ ಸುತ್ತಾಡಿಸಿ ಅವರ ಮೊಬೈಲ್‌ನಿಂದಲೇ 3 ಲಕ್ಷ ರೂ. ಹಣವನ್ನು ತಮ ಮೊಬೈಲ್‌ಗಳಿಗೆ ವರ್ಗಾಹಿಸಿಕೊಂಡಿದ್ದಾರೆ.
ಇಷ್ಪಕ್ಕೆ ಸುಮನಾಗದ ಅಪಹರಣಕಾರರು ಇನ್ನೂ 10 ಲಕ್ಷ ರೂ. ಕೊಡಬೇಕೆಂದು ಬೆದರಿಕೆ ಹಾಕಿದ್ದಾರೆ.ದರೋಡೆಕೋರರ ವರ್ತನೆಯಿಂದ ಹೆದರಿದ ಮನೋಜ್ ಅವರು 10 ಲಕ್ಷ ರೂ. ಹಣ ಹೊಂದಿಸಿ ಕೊಡುವುದಾಗಿ ಹೇಳಿ ಉಪಾಯದಿಂದ ತಪ್ಪಿಸಿಕೊಂಡು ಬಂದು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕು ಗೊಳಿಸಿ ನಾಲ್ವರು ರೌಡಿಗಳು ಸೇರಿದಂತೆ ಆರು ಮಂದಿ ದರೋಡೆ ಕೋರರನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
- ಧರ್ಮಸ್ಥಳ ಪ್ರಕರಣವನ್ನು ಎನ್ಐಎಗೆ ವಹಿಸುವ ಅಗತ್ಯವಿಲ್ಲ : ಪರಮೇಶ್ವರ್
- ಟಿ20 ಕ್ರಿಕೆಟ್ಗೆ ಮಿಚೆಲ್ ಸ್ಟಾರ್ಕ್ ವಿದಾಯ
- ಶಾಸಕ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ
- ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಹಾರೈಕೆ
- ಉದ್ಯಮಿ ಅಪಹರಿಸಿ ಜೀವ ಬೆದರಿಕೆ ಹಾಕಿ 3 ಲಕ್ಷ ರೂ. ಪಡೆದಿದ್ದ ನಾಲ್ವರು ರೌಡಿ ಸೇರಿ 6 ಮಂದಿ ಅರೆಸ್ಟ್