Wednesday, September 3, 2025
Homeಮನರಂಜನೆಕಿಚ್ಚ ಸುದೀಪ್‌ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಹಾರೈಕೆ

ಕಿಚ್ಚ ಸುದೀಪ್‌ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಹಾರೈಕೆ

Fans wish Kiccha Sudeep on his birthday

ಬೆಂಗಳೂರು, ಸೆ.2- ಕಿಚ್ಚ ಸುದೀಪ್‌ ಅವರ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಹಲವೆಡೆ ಸೇವಾ ಕಾರ್ಯಗಳನ್ನು ನಡೆಸಿ ಸಂಭ್ರಮಿಸಿದ್ದಾರೆ.ಹಲವೆಡೆ ಸಿಹಿ ಹಂಚಿ ನೆಚ್ಚಿನ ನಾಯಕನ ಪೋಸ್ಟರ್‌
ಗಳನ್ನು ಹಿಡಿದು ಶುಭ ಕೋರಿದ್ದಾರೆ. ಇನ್ನು ಹಲವೆಡೆ ಗಿಡಗಳನ್ನು ನೆಟ್ಟು ಪರಿಸರ ಕಾಳಜಿಯಿಂದ ಮೆರೆದಿದ್ದಾರೆ.

ಹುಟ್ಟುಹಬ್ಬದ ದಿನದಂದೇ ಸುದೀಪ್‌ ಅವರ ಹೊಸ ಚಿತ್ರಗಳು ಹಾಗೂ ಪೋಸ್ಟರ್‌ಗಳು ಬಿಡುಗಡೆ ಯಾಗುತ್ತಿದ್ದು, ಹಲವು ಕಲಾವಿದರು, ರಾಜಕೀಯ ಗಣ್ಯರು, ಶುಭ ಹಾರೈಸಿದ್ದಾರೆ.ಬಹುನಿರೀಕ್ಷಿತ ಹಾಗೂ ಭಾರೀ ಮೊತ್ತದ ಚಿತ್ರಗಳು ಸೆಟ್ಟೇರುತ್ತಿದ್ದು, ಇದ್ದಕ್ಕಾಗಿ ಅಭಿಮಾನಿಗಳು ಸಂಭ್ರಮಿಸಿ ದ್ದಾರೆ. ಈ ನಡುವೆ ಹೊಸ ಚಿತ್ರಗಳ ಬಗ್ಗೆ ಸುದೀಪ್‌ ಕೂಡ ಭಾರೀನಿರೀಕ್ಷೆ ಹೊಂದಿದ್ದು, ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹಲವಾರು ಹಿಟ್‌ ಚಿತ್ರಗಳನ್ನು ನೀಡಿ, ಪ್ಯಾನ್‌ ಇಂಡಿಯಾ ನಟನಾಗಿರುವ ಕಿಚ್ಚನಿಗೆ ದೇಶ-ವಿದೇಶ ಗಳಿಂದಲೂ ಚಿತ್ರರಂಗದ ಗಣ್ಯರು ಶುಭ ಕೋರಿದ್ದಾರೆ. ಅವರ ಮನೆ ಬಳಿ ರಾತ್ರಿಯೇ ಅಭಿಮಾನಿಗಳು ಜಮಾಯಿಸಿ ಕೇಕ್‌ ಕತ್ತರಿಸಿ, ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಿದ್ದಾರೆ.

RELATED ARTICLES

Latest News