ಬೆಂಗಳೂರು, ಸೆ.3- ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್. ಮುಂದಿನ ವಾರದಿಂದ ಟ್ರ್ಯಾಕ್‌ಗೆ ಇಳಿಯಲಿದೆ ನಮ್ಮ ಮೆಟ್ರೋದ ನಾಲ್ಕನೇ ರೈಲು.ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ ಪ್ರಸ್ತುತ ಕೇವಲ ಮೂರು ರೈಲುಗಳು ಮಾತ್ರ ಸಂಚಾರ ಮಾಡುತ್ತಿವೆ. ಹೀಗಾಗಿ ಪ್ರಯಾಣಿಕರು 25 ನಿಮಿಷ ಕಾಯಬೇಕಿದೆ..ಇದರಿಂದ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಶುಭ ಸುದ್ದಿ ನೀಡಿದೆ ಈ ಮಾರ್ಗದಲ್ಲಿ ನಾಲ್ಕನೇ ರೈಲು ಸೆಪ್ಟೆಂಬರ್ ಎರಡನೇ ವಾರದಲ್ಲಿ ಟ್ರ್ಯಾಕಿಗಿಳಿಯಲಿದೆ ಎಂದು ಮಾಹಿತಿ ನೀಡಿದೆ.
ಅಕ್ಟೋಬರ್‌ನಲ್ಲಿ ಕೋಲ್ಕತ್ತಾದಿಂದ ನಮ್ಮ ಮೆಟ್ರೋಗೆ ಐದನೇ ರೈಲು ಕೂಡ ಆಗಮಿಸಲಿದೆ. ನಂತರ ಪ್ರತಿ ತಿಂಗಳು ಒಂದು ಮೆಟ್ರೋ ರೈಲು ಸೆಟ್ ನಮ್ಮ ಮೆಟ್ರೋ ಗೆ ಸೇರ್ಪಡೆಯಾಗಲಿವೆ. ಹೊಸ ರೈಲಿನ ಆಗಮನದಿಂದ 15 ರಿಂದ 20 ನಿಮಿಷಕ್ಕೊಂದು ರೈಲು ಸಂಚಾರಿಸಲಿವೆ ಎಂದು ತಿಳಿಸಲಾಗಿದೆ.
ಆಗಸ್ಟ್ 11 ರಿಂದ ನಮ್ಮ ಮೆಟ್ರೋದ ಮೂರು ಮಾರ್ಗದಲ್ಲೂ 10 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರತಿ ದಿನ ಪ್ರಯಾಣಸಿದರೆ ಯೆಲ್ಲೋ ಲೈನ್‌ನಲ್ಲಿ ಕೇವಲ ಮೂರು ರೈಲುಗಳಿರುವ ಕಾರಣದಿಂದಾಗಿ, ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಮನಗಂಡು ಇಂತಹ ತೀರ್ಮಾನ ಕೈಗೊಳ್ಳಲಾಗಿದೆ.
2026ರ ಮಾರ್ಚ್ ವೇಳೆಗೆ ಯೆಲ್ಲೋ ಲೈನ್‌ಗೆ ಎಲ್ಲಾ ರೈಲುಗಳು ಆಗಮನವಾಗಲಿವೆ. ಗ್ರೀನ್ ಮತ್ತು ಪರ್ಪಲ್ ಲೈನ್ ರೀತಿಯಲ್ಲಿ ಯಲ್ಲೋ ಲೈನ್ ನಲ್ಲಿ ಐದು ನಿಮಿಷಕ್ಕೊಂದರಂತೆ ರೈಲುಗಳು ಸಂಚಾರ ಮಾಡುವ ದಿನಗಳು ದೂರವಿಲ್ಲ ಎನ್ನುವಂತಾಗಿದೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-09-2025)
- ಪಿಎಂಎಫ್ಎಂಇ ಯೋಜನೆಯಲ್ಲಿ ಕರ್ನಾಟಕದ ಅಭೂತಪೂರ್ವ ಪ್ರಗತಿ: ಸಚಿವ ಚಲುವರಾಯಸ್ವಾಮಿ
- ಸಮೀರ್ ನಿವಾಸದ ಮೇಲೆ ಬೆಳ್ತಂಗಡಿ ಪೊಲೀಸರ ದಾಳಿ
- ವಿದೇಶಿ ಪ್ರಜೆಗಳ ಮನೆಗಳ ಮೇಲೆ ದಾಳಿ: 600 ಗ್ರಾಂ ಕೊಕೈನ್ ವಶ
- ಕಾಂಗ್ರೆಸ್ ಪಕ್ಷದ ಕಚೇರಿಗಳಿಗೆ ಸರ್ಕಾರಿ ನಿವೇಶನ: ಸಂಪುಟದಲ್ಲಿ ಚರ್ಚೆ