ಜಮ್ಮು, ಸೆ.6- ಕಶ್ಮೀರದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಉಂಟಾದ ವಿನಾಶದ ನಡುವೆ, ಕಥುವಾ ಜಿಲ್ಲೆಯ ಬನಿಯಿಂದ ಕೋಮು ಸಾಮರಸ್ಯದ ಹೃದಯಸ್ಪರ್ಶಿ ಉದಾಹರಣೆ ಹೊರಹೊಮ್ಮಿದೆ, ಅಲ್ಲಿ ಹಿಂದೂ ಕುಟುಂಬವೊಂದು ವಿಪತ್ತಿನಲ್ಲಿ ಮನೆ ಕಳೆದುಕೊಂಡ ಮುಸ್ಲಿಂ ನೆರೆಹೊರೆಯವರಿಗೆ ಆಶ್ರಯ ನೀಡಲು ತಮ ಮನೆಯ ಬಾಗಿಲು ತೆರೆದಿದೆ.
ಕಳೆದ ಆಗಸ್ಟ್ 28 ರಂದು ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮನೆ ಹಾನಿಗೊಳಗಾದ ನಂತರ ಜಾವೈದ್ ಅಹ್ಮದ್ ಕುಟುಂಬಕ್ಕೆ ಯಾರು ನೆರವಾಗಲಿಲ್ಲಮ ಆದರೆ ಸುಬಾಶ್ ಅವರು ಜಾವೈದ್ ಅಹದ್,ಅವರ ಮಾವ ,ಇಬ್ಬರು ಕುರುಡು ಮಕ್ಕಳು ಸೇರಿದಂತೆ ಅವರ ಎಂಟು ಕುಟುಂಬ ಸದಸ್ಯರನ್ನು ಮನೆಗೆ ಕರೆತಂದು ಉಪಚರಿಸಿದ್ದಾರೆ.
ಸುಬಾಶ್ ಅವರ ಮಾನವೀಯತೆ ವರ್ಣಿಸಲು ಸಾಧ್ಯವಿಲ್ಲ ಎಮದು ಅಹದ್ ಹೇಳಿದರು. ಪ್ರವಾಹದಲ್ಲಿ ನಮ ಮನೆ ಹಾನಿಗೊಳಗಾಗಿದ್ದು, ನಾವು ಬೇರೆ ಕಡೆ ಆಶ್ರಯ ಪಡೆಯಬೇಕಾಯಿತು. ಆದರೆ ಸುಬಾಶ್‌ಜಿಯವರ ಮನೆಯಲ್ಲಿ ವಾಸಿಸುತ್ತಿದ್ದೇವೆ. ಅವರು ನಮಗೆ ಮೊದಲ ಮಹಡಿಯಲ್ಲಿ ಎರಡು ಕೊಠಡಿಗಳನ್ನು ನೀಡಿ ಮೇಲಿನ ಮಹಡಿಗೆ ಸ್ಥಳಾಂತರಗೊಂಡಿದ್ದಾರೆ. ನಾವು ನಮ್ಮ ಸ್ವಂತ ಮನೆಯಲ್ಲಿದ್ದೇವೆ ಎಂಬ ಭಾವನೆ ನಮಗಿದೆ ಎಂದು ಅವರು ಹೇಳಿದರು.ತಮ ಆತಿಥೇಯರ ಮಾನವೀಯ ಮನೋಭಾವವನ್ನು ಅಪಾರವಾಗಿ ಶ್ಲಾಘಿಸಿದ ಅಹ್ಮದ್, ಅವರು ಅವರಿಗೆ ಪಡಿತರ ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಕುಟುಂಬಗಳನ್ನು ಭೇಟಿ ಮಾಡಿದ ಸ್ಥಳೀಯ ಶಾಸಕ ರಾಮೇಶ್ವರ್ ಸಿಂಗ್, ಈ ಕಾರ್ಯವು ಪ್ರಬಲ ಸಂದೇಶವನ್ನು ಹೊಂದಿದೆ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದ ನಿಜವಾದ ಸೌಂದರ್ಯ ಇದು ಎಂದು ಶಾಸಕರು ಹೇಳಿದರು – ಪ್ರತಿಕೂಲ ಪರಿಸ್ಥಿತಿಯಲ್ಲಿ ಏಕತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯತೆ.ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ಪುನರ್ವಸತಿ ಕ್ರಮಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.