Saturday, September 6, 2025
Homeರಾಷ್ಟ್ರೀಯ | Nationalಶಾಲೆಯ ಹೊರಗೆ ಬಾಲಕನ ಎದೆಗೆ ಚಾಕು ಇರಿತ

ಶಾಲೆಯ ಹೊರಗೆ ಬಾಲಕನ ಎದೆಗೆ ಚಾಕು ಇರಿತ

Stabbed outside school, Delhi boy reaches police station with knife lodged in chest

ನವದೆಹಲಿ, ಸೆ.6- ದೇಶದ ರಾಜಧಾನಿ ದೆಹಲಿಯ ಪಹರ್‌ಗಂಜ್‌‍ ಪ್ರದೇಶದ ಶಾಲೆಯೊಂದರ ಹೊರಗೆ 15 ವರ್ಷದ ಬಾಲಕನಿಗೆ ಮೂವರು ಹಲ್ಲೆ ನಡೆಸಿ ಆತನ ಎದೆಕೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.

ಘಟನೆಗೆ ಸಂಬಂದಿಸಿದಂತೆ ಮೂವರು ಅಪ್ರಾಪ್ತ ವಯಸ್ಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಗಾಯಗೊಂಡಿದ್ದ ಬಾಲಕ ಎದೆಗೆ ಚುಚಿದ್ದ ಚಾಕುವಿನ ಜೊತೆಗೆ ಪಹರ್‌ಗಂಜ್‌‍ ಪೊಲೀಸ್‌‍ ಠಾಣೆಗೆ ತಲುಪಿದ್ದು ಪೊಲೀಸರು ಇದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

ನಂತರ ಬಾಲಕನನ್ನು ಕಲಾವತಿ ಸರನ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಆರ್‌ಎಂಎಲ್‌‍ ಆಸ್ಪತ್ರೆಗೆ ಸಾಗಿಸಿ ಅಲ್ಲಿ ವೈದ್ಯರು ಎದೆಯಿಂದ ಚಾಕುವನ್ನು ಯಶಸ್ವಿಯಾಗಿ ಹೊರತೆಗೆದರು ಎಂದು ಅವರು ಪೊಲೀಸರು ತಿಳಿಸಿದ್ದಾರೆ.

ಸುಮಾರು 15 ದಿನಗಳ ಹಿಂದೆ ನಡೆದಿದ್ದ ಗಲಾಟೆ ಈ ಮಟ್ಟಕ್ಕೆ ತಲುಪಿದೆ ಎಂದು ಉಪ ಪೊಲೀಸ್‌‍ ಆಯುಕ್ತ (ಕೇಂದ್ರ) ನಿಧಿನ್‌ ವಲ್ಸನ್‌ ಹೇಳಿದರು.ಪಹರ್‌ಗಂಜ್‌‍ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಗುಪ್ತಚರ ಮತ್ತು ತ್ವರಿತ ದಾಳಿಗಳ ಮೂಲಕ, ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ 15 ಮತ್ತು 16 ವರ್ಷ ವಯಸ್ಸಿನ ಮೂವರು ಆರೋಪಿಗಳನ್ನು ಅರಾಮ್‌ ಬಾಗ್‌ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News