ನವದೆಹಲಿ, ಸೆ.6- ಭೂಸೇನೆ, ನೌಕಾದಳ ಮತ್ತು ವಾಯುಪಡೆಯ ವಿಲೀನ ಅಥವಾ ಒಂದುಗೂಡಿಸುವಿಕೆ ಖಂಡಿತವಾಗಿಯೂ ನಡೆಯಲಿದೆ ಮತ್ತು ಇದು ಎಷ್ಟು ಸಮಯ ತೆಗೆದುಕೊಳ್ಳಬಹುದು ಎಂಬುದಷ್ಟೇ ಪ್ರಶ್ನೆಯಾಗಿದೆ ಎಂದು ಭೂಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಸ್ಪಷ್ಟಪಡಿಸಿದ್ದಾರೆ.
ಬಹು ವಿಧದ ಸಂಸ್ಥೆಗಳೊಂದಿಗೆ ವ್ಯವಹರಿಸಬೇಕಾದರೆ ವಿಲೀನವೇ ಉತ್ತರವಾಗಿದೆ ಎಂದು ಅವರು ಹೇಳಿದ್ದಾರೆ. ಇಲ್ಲಿನ ಮಾಣಿಕ್ ಷಾ ಕೇಂದ್ರದಲ್ಲಿ ಆಪರೇಷನ್ ಸಿಂಧೂರ್: ದಿ ಅನ್‌ಟೋಲ್‌್ಡ ಸ್ಟೋರಿ ಆಫ್ ಇಂಡಿಯಾಸ್ ಡೀಪ್ ಸ್ಟ್ರೈಕ್‌್ಸ ಇನ್ ಸೈಡ್ ಪಾಕಿಸ್ತಾನ್ ಪುಸ್ತಕದ ಲೋಕಾರ್ಪಣೆ ಬಳಿಕ ಸುದ್ದಿಗಾರರ ಜೊತೆ ಮಾತ ನಾಡಿದ ದ್ವಿವೇದಿ ಈ ವಿಷಯ ತಿಳಿಸಿದರು.
ಈ ಯೋಜಿತ ಬಗ್ಗೆ ಇತ್ತೀಚೆಗೆ ಕ್ರಮದ ಪ್ರಕ್ರಿಯೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸಶಸ್ತ್ರ ಪಡೆಗಳ ವಿಲೀನದ ಕುರಿತು ಕೇಳಲಾದ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.ವಿಲೀನ ಇಂದು ಅಥವಾ ನಾಳೆ ಆಗಬಹುದು. ಇದು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನಷ್ಟೇ ನಾವು ನೋಡಬೇಕಾಗಿದೆ. ಸಶಸ್ತ್ರ ಪಡೆಗಳ ಒಂದುಗೂಡಿಸುವಿಕೆ, ಸಮಗ್ರೀಕರಣ ಒಳಗೊಂಡಿರುವ ವಿಲೀನಕ್ಕೆ ಕೆಲವು ಕ್ರಮಗಳ ಮೂಲಕ ಸಾಗಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಪಾರ ವಿಷಯಗಳನ್ನು ಚರ್ಚಿಸಬೇಕಾಗಿದೆ ಎಂದು ಸೇನಾ ಮುಖ್ಯಸ್ಥರು ನುಡಿದರು.
ವಿಲೀನ ಏಕೆ ಅಗತ್ಯ ಎಂಬುದನನ್ನೂ ದ್ವಿವೇದಿ ವಿವರಿಸಿದರು. ನಾವು ಒಂದು ಯುದ್ಧ ಮಾಡುವಾಗ ಭೂ ಸೇನೆಯೊಂದೇ ಹೋರಾಡಲಾಗದು. ನಾವು ಗಡಿ ಭದ್ರತಾ ಪಡೆ ಮತ್ತು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆಗಳು ಹೊಂದಿದ್ದೇವೆ. ಬಳಿಕ ಮೂರು ಸೇನಾ ಪಡೆಗಳಿವೆ. ರಕ್ಷಣಾ ಸೈಬರ್ ಏಜೆನ್ಸಿಗಳು ಇವೆ ರಕ್ಷಣಾ ಬಾಹ್ಯಾಕಾಶ ಏಜೆನ್ಸಿಗಳು ಮತ್ತು ನಾವೀಗ ಪ್ರತ್ಯಕ್ಷ ಸಮರ ಸಂಸ್ಥೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇದಲ್ಲದೆ ಇಸ್ರೋ, ಸಿವಿಲ್ ಡಿಫೆನ್‌್ಸ, ನಾಗರಿಕ ವಿಮಾನಯಾನ, ರೈಲ್ವೇಸ್, ಎನ್‌ಸಿಸಿ, ರಾಜ್ಯ ಮತ್ತು ಕೇಂದ್ರ ಆಡಳಿತಗಳು ಮುಂತಾದ ಸಂಸ್ಥೆಗಳಿವೆ.
ಬಹಳಷ್ಟು ಸಂಸ್ಥೆಗಳೊಂದಿಗೆ ವ್ಯವಹರಿಸುವಾಗ ವಿಲೀನವೇ ಉತ್ತರವಾಗುತ್ತದೆ. ಏಕೆಂದರೆ ಕಮಾಂಡ್‌ನ ಏಕತೆ ಅತಿಮುಖ್ಯ. ಆದೇಶ ಅನುಷ್ಠಾನ ಸಾಧಿತವಾಗಬೇಕಾದರೆ ನೀವು ಓರ್ವ ಕಮಾಂಡರ್‌ನನ್ನು ಹೊಂದಿರಬೇಕಾಗುತ್ತದೆ ಎಂದು ಅವರು ವಿಶದೀಕರಿಸಿದರು.
ಇತರ ಎರಡು ಸಶಸ್ತ್ರ ಪಡೆಗಳ ಮುಖ್ಯಸ್ಥರು ವಿಲೀನದ ಬಗ್ಗೆ ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಎರಡು ವಾರಗಳ ಬಳಿಕ ಭೂಸೇನಾ ಮುಖ್ಯಸ್ಥರ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಮ್ಹೌದಲ್ಲಿನ ಸೇನಾ ಸಮರ ಕಾಲೇಜ್‌ನಲ್ಲಿ ನಡೆದ ಮೂರೂ ಸೇನಾಪಡೆಗಳ ಎರಡು ದಿನಗಳ ರಣ್ ಸಂವಾದ್ ವಿಚಾರಸಂಕಿರಣದಲ್ಲಿ ವಾಯುಪಡೆ ಮುಖ್ಯಸ್ಥ ದರ್‌ಚೀಫ್ ಮಾರ್ಷಲ್ ಎ.ಪಿ.ಸಿಂಗ್ ಮತ್ತು ನೌಕಾದಳ ಮುಖ್ಯಸ್ಥ ದಿನೇಶ್ ಕೆ. ತ್ರಿಪಾಠಿ ವಿಲೀನದ ಬಗ್ಗೆ ಮಾತನಾಡಿದ್ದರು. ಈ ಎರಡು ಪಡೆಗಳ ಮುಖ್ಯಸ್ಥರು ಈ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊರುವುದು ಸ್ಪಷ್ಟವಾಗಿತ್ತು.
ಸೇನಾ ಪಡೆಗಳು ಏಕ ನಾಯಕತ್ವ ಹೊರಡುವ ನಿಟ್ಟಿನಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗಬಾರದು ಎಂದು ಸೇನಾಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಅವರು ಹೇಳಿದ್ದರು.
ಸಮಾರೋಪ ಸಮಾರಂಭದಲ್ಲಿ ಸೇನಾ ಪಡೆಗಳ ಮುಖ್ಯಸ್ಥರು, ರಾಷ್ಟ್ರದ ಹಿತಾಸಕ್ತಿಯಿಂದ ಮೂರು ಪಡೆಗಳ ವಿಲೀನ ಕುರಿತ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲಾಗುವುದೆಂದು ಹೇಳಿದ್ದರು.