Saturday, September 6, 2025
Homeಬೆಂಗಳೂರುಕೆ.ಆರ್‌.ಮಾರ್ಕೆಟ್‌ನಲ್ಲಿ ಹೈಟೆಕ್‌ ಪಾರ್ಕಿಂಗ್‌ ಲಾಟ್‌

ಕೆ.ಆರ್‌.ಮಾರ್ಕೆಟ್‌ನಲ್ಲಿ ಹೈಟೆಕ್‌ ಪಾರ್ಕಿಂಗ್‌ ಲಾಟ್‌

Hi-tech parking lot in K.R. Market

ಬೆಂಗಳೂರು, ಸೆ.6- ಬಿಬಿಎಂಪಿ ಹೋಗಿ ಗ್ರೇಟರ್‌ ಬೆಂಗ ಳೂರು ರಚನೆಯಾಗುತ್ತಿದ್ದಂತೆ ಗ್ರೇಟರ್‌ ಯೋಜನೆಗಳನ್ನು ಜಾರಿಗೊಳಿಸಲು ತಯಾರಿ ನಡೆಸಲಾಗುತ್ತಿದೆ.ನಗರದಲ್ಲಿರುವ ಬಹುತೇಕ ಪಾರ್ಕಿಂಗ್‌ ಲಾಟ್‌ಗಳು ಗಬ್ಬೆದ್ದು ಹೋಗಿರುವುದು ಎಲ್ಲರಿಗೂ ತಿಳಿದಿರುವೇ ವಿಚಾರವೇ. ಹೀಗಾಗಿ ಜಿಬಿಎ ಹೆಸರಿಗೆ ತಕ್ಕಂತೆ ಹೈಟೆಕ್‌ ಪಾರ್ಕಿಂಗ್‌ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ.

ಸುಮಾರು ನಾಲ್ಕೂವರೆ ಕೋಟಿ ವೆಚ್ಚದಲ್ಲಿ ಹೈಟೆಕ್‌ ಪಾರ್ಕಿಂಗ್‌ ನಿಲ್ದಾಣ ನಿರ್ಮಿಸಲಾಗುತ್ತಿದೆ. ಏಷ್ಯಾದಲ್ಲೇ ಮೊದಲ ಬಾರಿಗೆ ನಗರದ ಕೃಷ್ಣರಾಜ ಮಾರ್ಕೇಟ್‌ನಲ್ಲಿ ಹೈಟೆಕ್‌ ಪಾರ್ಕಿಂಗ್‌‍ ನಿರ್ಮಿಸಲು ಜಿಬಿಎ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಇದುವರೆಗೂ ನಗರ ಕಂಡರಿಯದ ಮಾದರಿಯಲ್ಲಿ ಅಂದರೆ ದುಬೈ ಮಾದರಿಯ ಪಾರ್ಕಿಂಗ್‌ ಲಾಟ್‌ ನಿರ್ಮಿಸಲಾಗುತ್ತಿದೆ. ಕೆ.ಆರ್‌. ಮಾರ್ಕೇಟ್‌ ನ ಕೆಳ ಮಹಡಿಯಲ್ಲಿ ಇರುವ ಪಾರ್ಕಿಂಗ್‌ ವ್ಯವಸ್ಥೆ ನಿರ್ವಹಣೆ ಮಾಡದೆ ಅಧ್ವಾನವಾಗಿರುವ ಪಾರ್ಕಿಂಗ್‌ ಲಾಟ್‌ ಆಗಿದ್ದು, ಸದ್ಯ ಪಾಳು ಬಿದ್ದು ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿರೋ ಈ ಪಾರ್ಕಿಂಗ್‌ ಲಾಟ್‌ಗೆ ಇದೀಗ ಹೈಟೆಕ್‌ ಸ್ಪರ್ಶ ನೀಡಲಾಗುತ್ತಿದೆ.

ಅವ್ಯವಸ್ಥೆಯ ತಾಣವಾಗಿರೋ ಪಾರ್ಕಿಂಗ್‌ ಗೆ ಹೊಸ ಲುಕ್‌ ನೀಡಿ ದುಬೈ ಮಾದರಿಯಲ್ಲಿ ನಿರ್ಮಿಸಿ, ಸಾರ್ವಜನಿಕರಿಗೆ ನೀಡಲು ಜಿಬಿಎ ತೀರ್ಮಾನ ಮಾಡಿದೆ.ಹಾಲಿ ಪಾಳು ಬಿದ್ದಿರುವ ಮಾರ್ಕೆಟ್‌ ಪಾರ್ಕಿಂಗ್‌ ಲಾಟ್‌ ಬಂದ್‌ ಮಾಡಲಾಗಿದ್ದು, ಹೈಟೆಕ್‌ ಸ್ಪರ್ಶ ನೀಡುವ ಕಾಮಗಾರಿಗೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ.

ಸುಮಾರು 4 ಕೋಟಿ 37 ಲಕ್ಷ ರೂ.ಗಳ ಟೆಂಡರ್‌ ಕರೆಯಲಾಗಿದ್ದು, 10 ವರ್ಷಗಳ ಗುತ್ತಿಗೆ ನೀಡಿ ಆದೇಶ ಹೊರಡಿಸಲಾಗಿದೆ. ಹೊಸ ಪಾರ್ಕಿಂಗ್‌ ಲಾಟ್‌ನಲ್ಲಿ 200 ಕಾರು, 400 ಬೈಕ್‌ ಪಾರ್ಕ್‌ ಮಾಡಲು ಅವಕಾಶ ನೀಡಲಾಗಿದೆ. ಗುತ್ತಿಗೆದಾರನೇ ಸಂಪೂರ್ಣ ಹಣ ವೆಚ್ಚಮಾಡಿ ಹೈಟೆಕ್‌ ಪಾರ್ಕಿಂಗ್‌ ನಿರ್ಮಿಸಬೇಕು..10 ವರ್ಷ ಗುತ್ತಿಗೆ ಆಧಾರದ ಮೇಲೆ ಫೀ ಸಂಗ್ರಹಿಸಲು ಅವಕಾಶ ನೀಡಲಾಗಿದೆ. ಪಾರ್ಕಿಂಗ್‌ ಲಾಟ್‌ ನಲ್ಲಿ ಹೈಟೆಕ್‌ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, ಈ ಹೊಸ ಪಾರ್ಕಿಂಗ್‌ ಲಾಟ್‌ನಲ್ಲಾದರೂ ಜನ ತಮ ವಾಹನಗಳನ್ನು ನಿಲ್ಲಿಸುತ್ತಾರೋ ಕಾದು ನೋಡಬೇಕಿದೆ.

RELATED ARTICLES

Latest News