ಬೆಂಗಳೂರು, ಸೆ.8– ಇವಿಎಂಗಳ ಬದಲು ಬ್ಯಾಲಟ್ ಪೇಪರ್‌ಗಳನ್ನು ಚುನಾವಣೆಯಲ್ಲಿ ಬಳಸಬೇಕೆಂಬ ರಾಜ್ಯ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಿರ್ಣಯದ ವಿರುದ್ಧ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂಬದಲು ಬ್ಯಾಲಟ್‌ಗಳನ್ನು ಬಳಸುವ ಬಗ್ಗೆ ನಿರ್ಣಯ ಕೈಗೊಂಡಿರುವುದನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.
ಸ್ವಾತಂತ್ರ್ಯಾ ನಂತರದ ದಿನಗಳಿಂದ ಹಿಡಿದು ಇವಿಎಂ ಪದ್ಧತಿ ಜಾರಿಗೆ ಬರುವ ತನಕ ಎಲ್ಲ ವಿಧದ ಚುನಾವಣೆಗಳಲ್ಲಿ ಕಾಂಗ್ರೆಸ್(ಐ) ಪಕ್ಷವು ಮಾಡಬಾರದ್ದನ್ನು ಮಾಡಿ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ, ರಾಜ್ಯ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಅಧಿಕಾರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಸಹಸ್ರಾರು ಕಾನೂನು ಬಾಹಿರ ಕಾರ್ಯಗಳನ್ನು ನಡೆಸಿರುವುದು ಈಗಾಗಲೇ ಜಗಜ್ಜಾಹೀರಾಗಿರುವ ವಿಷಯವಾಗಿದೆ.
ಬ್ಯಾಲಟ್‌ಗಳ ಮೂಲಕ ಮತ ಚಲಾವಣೆ ನಡೆಯುತ್ತಿದ್ದ ಸಂದರ್ಭಗಳಲ್ಲಿ ಮತಗಟ್ಟೆ ಅಧಿಕಾರಿಗಳನ್ನು ಬೆದರಿಸಿ ಅಥವಾ ಅಂತಹ ಅಧಿಕಾರಿಗಳನ್ನು ಆಮಿಷಗಳ ಮೂಲಕ ತಮ್ಮತ್ತ ಸೆಳೆದುಕೊಂಡು ವ್ಯಾಪಕ ಪ್ರಮಾಣದ ಮಾಡುವ ಮೂಲಕ ಅಧಿಕಾರವನ್ನು ತಮ್ಮದನ್ನಾಗಿಸಿಕೊಳ್ಳುವ ಸಹಸ್ರಾರು ಕಾನೂನು ಬಾಹಿರ ಕಾರ್ಯಗಳನ್ನು ಕಾಂಗ್ರೆಸ್(ಐ) ಪಕ್ಷವು ನಡೆಸಿರುವುದು ನೂರಾರು ಸಂದರ್ಭಗಳಲ್ಲಿ ಬಹಿರಂಗಗೊಂಡಿದೆ.
ಸಮಾಜ ವಿರೋಧಿ ಶಕ್ತಿಗಳು, ರೌಡಿ ಶೀಟರ್ ಗಳು ಮತ್ತು ಪ್ರಭಾವೀ ವ್ಯಕ್ತಿಗಳ ಮೂಲಕ ಆಯಾ ಮತಗಟ್ಟೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮತಗಟ್ಟೆ ಅಧಿಕಾರಿಗಳನ್ನು ಹೆದರಿಸಿ, ಬೆದರಿಸಿ ಅಥವಾ ಹಣದ ಮೂಲಕ ತಮ್ಮವರನ್ನಾಗಿಸಿಕೊಂಡು ಪ್ರತಿಯೊಂದು ಚುನಾವಣೆಗಳಲ್ಲಿ ಬೃಹತ್ ಮಟ್ಟದ ಕಾರ್ಯಗಳನ್ನು ಮಾಡುವ ನೈಪುಣ್ಯತೆಯನ್ನು ಪಡೆದಿದ್ದ ಕಾಂಗ್ರೆಸ್(ಐ) ಪಕ್ಷವು ಕೇವಲ ತನ್ನ ಇಂತಹ ಪ್ರಜಾಪ್ರಭುತ್ವ ವಿರೋಧಿ ಹಾಗೂ ಸಮಾಜ ವಿರೋಧಿ ಕಾರ್ಯಗಳಿಂದಲೇ ಅಧಿಕಾರವನ್ನು ಪಡೆಯುತ್ತಿದ್ದುದು ಎಲ್ಲರಿಗೂ ತಿಳಿದ ವಿಷಯವಾಗಿದೆ.
2001 ರಲ್ಲಿ ತಮಿಳುನಾಡು, ಕೇರಳ, ಪುದುಚೇರಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಸಂಪೂರ್ಣವಾಗಿ ಇವಿಎಂಗಳನ್ನು ಬಳಸಿ ಮತದಾನದ ಪ್ರಕ್ರಿಯೆಗಳನ್ನು ನಡೆಸಲಾಗಿತ್ತು.ಭಾರತದ ಮೂಲ ನಿವಾಸಿಗಳು ಮತ್ತು ಬಹುಸಂಖ್ಯಾತರ ವಿರೋಧಿ ನಿಲುವುಗಳಿಂದಾಗಿಯೇ ಕಾಂಗ್ರೆಸ್(ಐ) ಪಕ್ಷವು ತನ್ನ ಅಸ್ತಿತ್ವವನ್ನು ದೇಶದಾದ್ಯಂತ ಕಳೆದುಕೊಳ್ಳುತ್ತಿರುವುದು ಸತ್ಯವಾದರೂ ಸಹ, ತಮ್ಮ ತಪ್ಪುಗಳನ್ನು ಮರೆಮಾಚಿ ಇಸಿಒ ಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನಕ್ಕೆ ಮುಂದಾಗಿರುವ ಆ ಪಕ್ಷದ ನಾಯಕರು ಇವಿಎಂ ಗಳ ಮೂಲಕ ಮತ ಚಲಾವಣೆಗೆ ಅವಕಾಶವಿರುವುದರಿಂದ ಮುಂದೆಂದಿಗೂ ಅಧಿಕಾರದ ಮಾತು ಮರೀಚಿಕೆಎಂಬ ಸತ್ಯ ಅವರಿಗೆ ಮನವರಿಕೆಯಾಗಿರುವ ಹಿನ್ನೆಲೆಯಲ್ಲಿ, ಈಗ ತಮ್ಮ ಹಳೆಯ ಸಮಾಜ ವಿರೋಧಿ ಕಾರ್ಯಗಳ ಮೂಲಕ ಬ್ಯಾಲಟ್‌ನಿಂದ ನಡೆಯುವ ಮತದಾನದ ಪ್ರಕ್ರಿಯೆಯಲ್ಲಿ ವ್ಯಾಪಕ ಪ್ರಮಾಣದ ಕಾರ್ಯಗಳನ್ನು ಮಾಡಿಸಿ ಪುನಃ ಅಧಿಕಾರಕ್ಕೆ ಬರುವ ಕನಸನ್ನು ಕಾಣುತ್ತಿರುವಂತೆ ಬಾಸವಾಗುತ್ತಿದೆ.
ಬ್ಯಾಲಟ್‌ಗಳ ಮೂಲಕ ನಡೆಯುವ ಚುನಾವಣೆಗಳಲ್ಲಿ ಮತ ಎಣಿಕೆ ಕಾರ್ಯ ಪಾರದರ್ಶಕವಾಗಿರುತ್ತದೆ ಎಂದು ಹೇಳುತ್ತಿರುವ ಅವರು ಚುನಾವಣೆಗಳಲ್ಲಿ ತಮ್ಮ ಗೂಂಡಾಗಿರಿ ರಾಜಕಾರಣದ ಮೂಲಕ ದೊಡ್ಡ ಮಟ್ಟದ ಷಡ್ಯಂತ್ರ ನಡೆಸಿ ತಮಗೆ ಬೇಕಾದಂತಹ ಅನುಕೂಲಕರ ಚುನಾವಣೆ ನಡೆಸಬಹುದು ಎಂಬ ಸತ್ಯವನ್ನು ಮಾತ್ರ ತಮ್ಮಲ್ಲೇ ಮರೆಮಾಚಿಕೊಳ್ಳುತ್ತಿದ್ದಾರೆ !!! ಬ್ಯಾಲಟ್‌ಗಳ ಪದ್ಧತಿಯಲ್ಲಿ ಕುಲಗೆಟ್ಟ ಮತಗಳ ಪ್ರಮಾಣ ಹೆಚ್ಚಿರುತ್ತದೆ. ಆದರೆ ಇವಿಎಂ ಬಳಕೆಯ ಪದ್ಧತಿಯಲ್ಲಿ ಇಂತಹುದಕ್ಕೆ ಅವಕಾಶವಿರುವುದಿಲ್ಲ.
ಈಗಾಗಲೇ ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಸರ್ವೋಚ್ಛ ನ್ಯಾಯಾಲಯ ಮತ್ತು ಹಲವು ರಾಜ್ಯಗಳ ಉಚ್ಛ ನ್ಯಾಯಾಲಯಗಳಲ್ಲಿ ದಾಖಲಾಗಿದ್ದ ಹಲವು ಪ್ರಕರಣಗಳಲ್ಲಿ ಇವಿಎಂ ಮೂಲಕ ನಡೆಸುವ ಮತದಾನವು ಅತ್ಯಂತ ಪಾರದರ್ಶಕವಾಗಿರುತ್ತದೆ ಹಾಗೂ ಯಾವುದೇ ರೀತಿಯ ಚುನಾವಣೋತ್ತರ ಅಕ್ರಮಗಳು ನಡೆಯಲು ಸಾಧ್ಯವೇ ಇಲ್ಲ ಎಂಬ ಪರಮಸತ್ಯ ಸಾಕ್ಷಿ ಸಹಿತ ರುಜುವಾತಾಗಿರುತ್ತದೆ.ಈ ಹಿನ್ನೆಲೆಯಲ್ಲಿ ಅತ್ಯಂತ ಪಾರದರ್ಶಕವಾಗಿರುವ ಮೂಲಕ ಮತದಾನ ಮಾಡುವ ಇವಿಎಂ ಪದ್ಧತಿಯನ್ನೇ ಮುಂದುವರೆಸುವ ಸಂಬಂಧ ಹಾಗೂ ವ್ಯಾಪಕ ಪ್ರಮಾಣದ ಮಾಡಲು ಅವಕಾಶವಿರುವ ಬ್ಯಾಲಟ್ ಮೂಲಕ ಮತದಾನಕ್ಕೆ ಅವಕಾಶ ಮಾಡಿಕೊಡದಿರುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಪತ್ರದಲ್ಲಿ ಚುನಾವಣಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.