Wednesday, September 10, 2025
Homeಅಂತಾರಾಷ್ಟ್ರೀಯ | Internationalದೋಹಾದಲ್ಲಿ ಇಸ್ರೇಲ್‌ ದಾಳಿಗೆ ಹಮಾಸ್‌‍ ನಾಯಕನ ಪುತ್ರ ಸೇರಿ ಆರು ಮಂದಿ ಬಲಿ

ದೋಹಾದಲ್ಲಿ ಇಸ್ರೇಲ್‌ ದಾಳಿಗೆ ಹಮಾಸ್‌‍ ನಾಯಕನ ಪುತ್ರ ಸೇರಿ ಆರು ಮಂದಿ ಬಲಿ

Hamas claims leaders survived Israeli attack in Doha, but confirms six deaths

ಟೆಲ್‌ಅವಿವ್‌, ಸೆ.10– ಕತಾರ್‌ ರಾಜಧಾನಿ ದೋಹಾದಲ್ಲಿ ಇಸ್ರೇಲ್‌ ನಡೆಸಿದ ಭೀಕರ ವಾಯುದಾಳಿಗೆ ಹಮಾಸ್‌‍ ನಾಯಕನ ಪುತ್ರ ಸೇರಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ. ಆರು ಮಂದಿ ಸಾವನ್ನು ದೃಢಪಡಿಸಿರುವ ಹಮಾಸ್‌‍ ಬಂಡುಕೋರರ ಗುಂಪು ಇಸ್ರೇಲ್‌ಗೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದೆ.

ಯುದ್ಧ ನಿಲ್ಲಬೇಕು, ಗಾಜಾದಿಂದ ಸೈನ್ಯ ಹಿಂದಕ್ಕೆ ತೆಗೆದುಕೊಳ್ಳಬೇಕು ಮತ್ತು ಗಾಜಾವನ್ನು ನೋಡಿಕೊಳ್ಳಲು ಬೇರೆಯೇ ಸಮಿತಿ ರಚನೆಯಾಗಬೇಕು ಎಂದು ಟ್ರಂಪ್‌ ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ಹಮಾಸ್‌‍ ಹಿರಿಯ ನಾಯಕರ ಗುರಿಯಾಗಿಸಿಕೊಂಡು ಇಸ್ರೇಲ್‌ ಸೇನೆ ದಾಳಿ ನಡೆಸಿದೆ. ಆದ್ರೆ ಇದೊಂದು ಹೇಡಿತನದ ದಾಳಿ ಎಂದು ಕತಾರ್‌ ಆಕ್ರೋಶ ವ್ಯಕ್ತಪಡಿಸಿದೆ.

ಕದನ ವಿರಾಮ ಮತ್ತು ಯುದ್ಧ ಕೈದಿಗಳ ಕುರಿತು ಮಾತುಕತೆ ನಡೆಯುತ್ತಿದ್ದಾಗಲೇ ಇಸ್ರೇಲ್‌ ದಾಳಿ ನಡೆಸಿರುವುದನ್ನು ಹಮಾಸ್‌‍ ಗುಂಪು ಖಂಡಿಸಿದೆ. ಇದು ಆಕ್ರಮಣಕಾರಿ ಸ್ವರೂಪದ ಅಪರಾಧ ಕೃತ್ಯ. ಒಪ್ಪಂದದ ಸಾಧ್ಯತೆಗಳನ್ನು ಹಾಳುಮಾಡುವ ಹಾಗೂ ನಿರಾಕರಿಸುವ ದೃಷ್ಟಿಕೋನವನ್ನು ತೋರಿಸುತ್ತದೆ. ಇದು ಘೋರ ಅಪರಾಧ, ಸ್ಪಷ್ಟ ಆಕ್ರಮಣ ಮಾತ್ರವಲ್ಲದೇ ಎಲ್ಲಾ ಅಂತಾರಾಷ್ಟ್ರೀಯ ನಿಯಮ ಮತ್ತು ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ಪ್ಯಾಲೆಸ್ತೀನ್‌ ಗುಂಪು ಅಸಮಾಧಾನ ಹೊರಹಾಕಿದೆ.

ಈ ದಾಳಿಯಲ್ಲಿ ಹಮಾಸ್‌‍ ನಾಯಕ ಖಲೀಲ್‌ ಅಲ್‌‍-ಹಯ್ಯನ ಪುತ್ರ, ಓರ್ವ ಸಹಾಯಕ ಸಿಬ್ಬಂದಿ, ಓರ್ವ ಭದ್ರತಾ ಅಧಿಕಾರಿ ಸೇರಿದಂತೆ ಕನಿಷ್ಠ 6 ಜನ ಸಾವನ್ನಪ್ಪಿದ್ದಾರೆ ಎಂದು ಗುಂಪು ದೃಢಪಡಿಸಿದೆ.

ಹಮಾಸ್‌‍ ಹಿರಿಯ ನಾಯಕರ ವಸತಿ ಕಟ್ಟಡವನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ರಕ್ಷಣಾ ಪಡೆ ಮತ್ತು ಇಸ್ರೇಲ್‌ ಭದ್ರತಾ ಸಂಸ್ಥೆ ವಾಯು ದಾಳಿ ನಡೆಸಿತ್ತು. ಇಸ್ರೇಲ್‌ನ ದಾಳಿಯ ವೇಳೆ ಹಮಾಸ್‌‍ ನಾಯಕರು ದೋಹಾದಲ್ಲಿ ಕದನ ವಿರಾಮದ ಬಗ್ಗೆ ಚರ್ಚಿಸುತ್ತಿದ್ದರು. ಗಾಜಾ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಅವರ ಕದನ ವಿರಾಮದ ಪ್ರಸ್ತಾಪದ ಬಗ್ಗೆ ಚರ್ಚಿಸುತ್ತಿದ್ದಾಗ ದೋಹಾದಲ್ಲಿ ಹಮಾಸ್‌‍ ನಿಯೋಗದ ಮೇಲೆ ದಾಳಿ ಮಾಡಲಾಗಿದೆ ಎಂದು ವರದಿಯಾಗಿದೆ.

RELATED ARTICLES

Latest News