Wednesday, September 10, 2025
Homeರಾಜ್ಯಶಾಸಕ ಸಂಗಮೇಶ್‌ ತಡಮಾಡದೇ ಇಸ್ಲಾಂಗೆ ಮತಾಂತರವಾಗಲಿ : ವಿಜಯೇಂದ್ರ

ಶಾಸಕ ಸಂಗಮೇಶ್‌ ತಡಮಾಡದೇ ಇಸ್ಲಾಂಗೆ ಮತಾಂತರವಾಗಲಿ : ವಿಜಯೇಂದ್ರ

MLA Sangamesh should convert to Islam : Vijayendra

ಬೆಂಗಳೂರು,ಸೆ.10– ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆಂದು ಹೇಳಿರುವ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್‌ ತಡಮಾಡದೇ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಕೆ.ಸಂಗಮೇಶ್‌, ಈ ಜನದಲ್ಲಿ ಹಿಂದೂವಾಗಿ ಹುಟ್ಟಿದ್ದಾರೆ. ಮೊದಲು ಹುಟ್ಟಿರುವ ಧರ್ಮದ ಋಣ ತೀರಿಸುವ ಕೆಲಸ ಮಾಡಲಿ. ನಂತರ ಮುಸ್ಲಿಂ ಆಗಿ ಹುಟ್ಟುವ ಮಾತನಾಡಲಿ ಎಂದು ತಿರುಗೇಟು ನೀಡಿದರು.

ಈ ಜನದಲ್ಲೇ ನೀವು ಮುಸ್ಲಿಂ ಆಗಿ ಹುಟ್ಟಬೇಕಿತ್ತು. ಅದನ್ನು ತಡೆದವರು ಯಾರು?, ನಿಮಗೆ ಮುಂದಿನ ಜನ ಬೇಡ. ತಕ್ಷಣವೇ ಮತಾಂತರವಾದರೆ ಮುಸ್ಲಿಮರಾಗಿ ಬಿಡುತ್ತೀರಿ. ಇದೆಲ್ಲಾ ಓಲೈಕೆಯ ದ್ವಂದ್ವ ಮಾತುಗಳು. ಸಂಗಮೇಶ್‌ ಮಾತುಗಳನ್ನು ಭದ್ರಾವತಿಯಲ್ಲಿ ಮುಸ್ಲಿಮರೇ ಗಂಭೀರವಾಗಿ ಪರಿಗಣಿಸುವುದಿಲ್ಲ. ಇದು ರಾಜಕೀಯ ಬೂಟಾಟಿಕೆ ಎಂದು ತಿರುಗೇಟು ಕೊಟ್ಟರು.

ರಾಜ್ಯದಲ್ಲಿ ಸರ್ಕಾರವೇ ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಸರ್ಕಾರವೇ ನೇರಹೊಣೆ. ಹಿಂದೂಗಳು ನೆಮದಿಯಿಂದ ಗಣೇಶ ಹಬ್ಬ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ನಮನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Latest News