ನವದೆಹಲಿ,ಸೆ.11-ಸಿಂಗಾಪುರಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಸುಮಾರು ಎರಡು ಗಂಟೆಗಳ ಕಾಲ ದೋಷಪೂರಿತ ಹವಾನಿಯಂತ್ರಣ ವ್ಯವಸ್ಥೆಯಿಂದ ವಿಮಾನದಲ್ಲಿ ಕುಳಿತಿದ್ದ 200 ಕ್ಕೂ ಹೆಚ್ಚು ಪ್ರಯಾಣಿಕರನ್ನು ಕೆಳಗಿಳಿಸಿದ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ಕಳೆದ ರಾತ್ರಿ ನಡೆದಿದೆ.
ಬೋಯಿಂಗ್ 787-9 ಡ್ರೀಮ್‌ಲೈನರ್ ಏರ್ ಇಂಡಿಯಾ ಏರ್ ಇಂಡಿಯಾ 2380 ವಿಮಾನ ಕಳೆದ ರಾತ್ರಿ 11 ಗಂಟೆ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಿಂದ ಹೊರಡಬೇಕಿತ್ತು,
ಆದರೆ ವಿಳಂಬವಾಗಿದೆ . ವಿಮಾನದಲ್ಲಿದ್ದ ಪಿಟಿಐ ಪತ್ರಕರ್ತರ ಪ್ರಕಾರ, ವಿಮಾನದ ಹವಾನಿಯಂತ್ರಣ ವ್ಯವಸ್ಥೆ ಮತ್ತು ವಿದ್ಯುತ್ ಸರಬರಾಜು ದೋಷಪೂರಿತವಾಗಿತ್ತು.
ಸುಮಾರು ಎರಡು ಗಂಟೆಗಳ ಕಾಲ ವಿಮಾನದಲ್ಲಿ ಕುಳಿತದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಟರ್ಮಿನಲ್ ಕಟ್ಟಡಕ್ಕೆ ಕರೆದೊಯ್ಯಲಾಯಿತು.ಆದರೆ ಪ್ರಯಾಣಿಕರನ್ನು ಕೆಳಗಿಳಿಸುತ್ತಿರುವುದು ಏಕೆ ಎಂದು ಸಿಬ್ಬಂದಿ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ ಎಂದು ಅವರು ಹೇಳಿದರು.
ಏರ್ ಇಂಡಿಯಾ ಸಂಸ್ಥೆಯಿಂದಲೂ ತಕ್ಷಣದ ಹೇಳಿಕೆ ಬಂದಿಲ್ಲ.ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊ ತುಣುಕುಗಳಲ್ಲಿ ಪ್ರಯಾಣಿಕರ ಕಹಿ ಅನುಭವ ವ್ಯಕ್ತಪಡಿಸಿದ್ದಾರೆ.