ಮೆಕ್ಸಿಕೋ,ಸೆ.11-ನಗರದ ಪ್ರಮುಖ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಟ್ರಕ್ ಸ್ಫೋಟಗೊಂಡ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ ಮತ್ತು 70 ಜನರು ಗಾಯಗೊಂಡಿದ್ದಾರೆ .ಕಳೆದ ರಾತ್ರಿ ಹೆದ್ದಾರಿ ಮೇಲ್ಸೇತುವೆಯ ಕೆಳಗೆ ಸಂಭವಿಸಿದ ಸ್ಫೋಟವನ್ನು ತುರ್ತು ಪರಿಸ್ಥಿತಿ ಎಂದು ಮೇಯರ್ ಎಂದು ಕ್ಲಾರಾ ಬ್ರೂಗಾಡಾ ಘೋಷಿಸಿದರು.
ಘಟನೆಯಲ್ಲಿ ಸುಮಾರು 18 ವಾಹನಗಳು ಸುಟ್ಟುಹಾಕಿದೆ ಮತ್ತು 19 ಮಂದಿ ಗಾಯಳುಗಳ ಸ್ಥಿತಿ ಗಂಭೀರವಾಗಿದೆ ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.ದುರಂತಕ್ಕೆ ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಬ್ರೂಗಾಡಾ ಹೇಳಿದರು,
ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಉರುಳಿದ ನಂತರ ಟ್ರಕ್ ಟಗೊಂಡಿದೆ.ವಾಹನಗಳ ಸಂಚಾರಕ್ಕೆ ಕೆಲ ಗಂಟೆ ಸಮಸ್ಯೆಯಾಗಿದೆ ತರ್ತು ಕಾರ್ಯಾಪಡೆ ಪರಿಸ್ಥಿತಿ ನಿಭಾಯಿಸುತ್ತಿದೆ.