Thursday, September 11, 2025
Homeಅಂತಾರಾಷ್ಟ್ರೀಯ | Internationalತುಂಬಿದ ಸಭೆಯಲ್ಲೇ ಗುಂಡಿಟ್ಟು ಡೊನಾಲ್ಡ್ ಟ್ರಂಪ್‌ ಪರಮಾಪ್ತ ಚಾರ್ಲಿ ಕಿರ್ಕ್‌ ಬರ್ಬರ ಹತ್ಯೆ

ತುಂಬಿದ ಸಭೆಯಲ್ಲೇ ಗುಂಡಿಟ್ಟು ಡೊನಾಲ್ಡ್ ಟ್ರಂಪ್‌ ಪರಮಾಪ್ತ ಚಾರ್ಲಿ ಕಿರ್ಕ್‌ ಬರ್ಬರ ಹತ್ಯೆ

Trump ally Charlie Kirk shot dead on stage; door-to-door search for assassin

ವಾಷಿಂಗ್ಟನ್‌,ಸೆ.11- ಯುವ ರಿಪಬ್ಲಿಕನ್‌ ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ಪರಮಾಪ್ತ ಚಾರ್ಲಿ ಕಿರ್ಕ್‌ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಓರೆಮ್‌ನ ಉತಾಹ್‌ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ರ್ಯಾಲಿಯಲ್ಲಿ ರ್ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾಗ, ಮಧ್ಯಾಹ್ನ 12 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಗುಂಡೇಟಿನ ಶಬ್ದ ಕೇಳಿಬಂದಿದೆ. ವೇದಿಕೆಯ ಮೇಲೆ ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.

ಚಾರ್ಲಿ ಕಿರ್ಕ್‌ ಹತ್ಯೆಗೆ ಸಂಬಂಧಿಸಿದಂತೆ ಕಾನೂನು ಜಾರಿ ಅಧಿಕಾರಿಗಳು, ಘಟನಾ ಸ್ಥಳದಲ್ಲಿ ಓರ್ವ ಶಂಕಿತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದರೆ ಆತ ಹತ್ಯೆಯಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ, ಆತನನ್ನು ಬಿಡುಗಡೆ ಮಾಡಲಾಗಿದೆ. ನೈಜ ಕೊಲೆಗಾರನ ಬಂಧನಕ್ಕೆ ಶೋಧಕಾರ್ಯ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಚಾರ್ಲಿ ಕಿರ್ಕ್‌ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಅತ್ಯಂತ ಆಪ್ತ ವ್ಯಕ್ತಿಗಳಲ್ಲಿ ಒಬ್ಬರು. ಡೊನಾಲ್ಡ್ ಟ್ರಂಪ್‌ ಟ್ರೂತ್‌ ಸೋಷಿಯಲ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಅವರ ಸಾವನ್ನು ದೃಢಪಡಿಸಿದ್ದು, ಅದೇ ಸಮಯದಲ್ಲಿ, ಉತಾಹ್‌ ಗವರ್ನರ್‌ ಸ್ಪೆನ್ಸರ್‌ ಕಾಕ್ಸ್ ಪತ್ರಿಕಾಗೋಷ್ಠಿಯಲ್ಲಿ ಇದನ್ನು ರಾಜಕೀಯ ಕೊಲೆ. ಇದರ ಹೊಣೆಗಾರರಿಗೆ ಶಿಕ್ಷೆಯಾಗುತ್ತದೆ ಎಂದು ಹೇಳಿದ್ದಾರೆ.

ಸೆಪ್ಟೆಂಬರ್‌ 14ರವರೆಗೆ ರಾಜ್ಯಾದ್ಯಂತ ಯುಎಸ್‌‍ ಮತ್ತು ಉತಾಹ್‌ ಧ್ವಜಗಳನ್ನು ಅರ್ಧಕ್ಕೆ ಹಾರಿಸಲು ಅವರು ಆದೇಶಿಸಿದ್ದಾರೆ. ಘಟನೆಯ ನಂತರ, ಪೊಲೀಸರು ಮತ್ತು ಇತರ ಏಜೆನ್ಸಿಗಳು ಕ್ಯಾಂಪಸ್‌‍ ಅನ್ನು ಲಾಕ್‌ಡೌನ್‌ ಮಾಡಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆರಂಭಿಕ ವರದಿಗಳು ಪೊಲೀಸರು ಒಬ್ಬ ಶಂಕಿತನನ್ನು ಬಂಧಿಸಿದ್ದಾರೆಂದು ಹೇಳಿದ್ದವು, ಆದರೆ ನಂತರ ಅಧಿಕಾರಿಗಳು ನಿಜವಾದ ದಾಳಿಕೋರ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಸ್ಪಷ್ಟಪಡಿಸಿದರು.

ಚಾರ್ಲಿ ಕಿರ್ಕ್‌ ಯಾರು?
ಚಾರ್ಲಿ ಕಿರ್ಕ್‌ ಅಮೆರಿಕದಲ್ಲಿ ಸಂಪ್ರದಾಯವಾದಿ ರಾಜಕೀಯದ ದೊಡ್ಡ ಮುಖವಾಗಿದ್ದರು. ಅವರು ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಟರ್ನಿಂಗ್‌ ಪಾಯಿಂಟ್‌ ಯುಎಸ್‌‍ಒ ಅನ್ನು ಸ್ಥಾಪಿಸಿದರು. ಇದು 2024ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸುಮಾರು 15 ಬಿಲಿಯನ್‌ ವೀಕ್ಷಣೆಗಳನ್ನು ಗಳಿಸಿತು.

ಚಾರ್ಲಿ ಕಿರ್ಕ್‌ ಭಾರತದಲ್ಲಿ ಅಮೆರಿಕನ್‌ ರಾಜಕೀಯದಲ್ಲಿ ಆಸಕ್ತಿ ಹೊಂದಿರುವ ಜನರಲ್ಲಿಯೂ ಜನಪ್ರಿಯರಾಗಿದ್ದಾರೆ. ಕ್ರಿಶ್ಚಿಯನ್‌ ರಾಷ್ಟ್ರೀಯತೆ, ಬಂದೂಕು ಹಕ್ಕುಗಳು, ತಪ್ಪು ಮಾಹಿತಿ ಮತ್ತು ಚುನಾವಣಾ ವಂಚನೆಯ ಹಕ್ಕುಗಳಂತಹ ಅನೇಕ ವಿವಾದಾತಕ ವಿಷಯಗಳ ಬಗ್ಗೆ ಕಿರ್ಕ್‌ ಕಠಿಣ ನಿಲುವು ತೆಗೆದುಕೊಂಡಿದ್ದರು. 2024ರ ಯುಎಸ್‌‍ ಅಧ್ಯಕ್ಷೀಯ ಚುನಾವಣೆಯಲ್ಲಿ ಯುವ ಮತದಾರರನ್ನು ಟ್ರಂಪ್‌ಗೆ ಮತ ಚಲಾಯಿಸುವಂತೆ ಮನವೊಲಿಸಿದ್ದರು.

https://twitter.com/BeingPolitical1/status/1965988824200393202

ಸಂತಾಪ:
ಕಿರ್ಕ್‌ಗೆ ಪತ್ನಿ ಮತ್ತು ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಅವರ ಸಾವಿನ ಸುದ್ದಿ ಬಂದ ತಕ್ಷಣ, ಅಮೆರಿಕಾದಾದ್ಯಂತ ಶೋಕದ ಅಲೆಯಿದೆ. ಬೇಸ್‌‍ಬಾಲ್‌ ತಂಡ ನ್ಯೂಯಾರ್ಕ್‌ ಯಾಂಕೀಸ್‌‍ ಚಾರ್ಲಿ ಕಿರ್ಕ್‌ ಅವರ ಗೌರವಾರ್ಥವಾಗಿ ಒಂದು ಕ್ಷಣ ಮೌನ ಆಚರಿಸಿದ್ದಾರೆ.

ಚಾರ್ಲಿ ಕಿರ್ಕ್‌ ಅವರ ನಿಧನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ತೀವ್ರ ಸಂತಾಪ ವ್ಯಕ್ತಪಡಿಸಿ, ಅವರನ್ನು ಶ್ರೇಷ್ಠ ಮತ್ತು ದಂತಕಥೆ ಎಂದು ಬಣ್ಣಿಸಿದ್ದು, ಅಮೆರಿಕದ ಯುವಕರನ್ನು ಚಾರ್ಲಿ ಅರ್ಥಮಾಡಿಕೊಂಡಷ್ಟು ಯಾರೂ ಅರ್ಥಮಾಡಿಕೊಂಡಿರಲಿಲ್ಲ. ಈಗ ಅವರು ನಮೊಂದಿಗಿಲ್ಲ. ಅವರ ಪತ್ನಿ ಎರಿಕಾ ಮತ್ತು ಇಡೀ ಕುಟುಂಬದೊಂದಿಗೆ ನಾವಿದ್ದೇವೆ. ಚಾರ್ಲಿ, ನಾವು ನಿನ್ನನ್ನು ಪ್ರೀತಿಸುತ್ತೇವೆ ಎಂದಿದ್ದಾರೆ. ಟ್ರಂಪ್‌ ಅವರ ಗೌರವಾರ್ಥವಾಗಿ ಅಮೆರಿಕದಾದ್ಯಂತ ಧ್ವಜಗಳನ್ನು ಅರ್ಧಕ್ಕೆ ಹಾರಿಸಲು ಆದೇಶಿಸಿದ್ದಾರೆ. ಏತನಧ್ಯೆ ಉಪಾಧ್ಯಕ್ಷ ಜೆಡಿ ವ್ಯಾನ್‌್ಸ ಇಂದು ಉತಾಹ್‌ಗೆ ಭೇಟಿ ನೀಡಿದ್ದಾರೆ.

RELATED ARTICLES

Latest News