Thursday, September 11, 2025
Homeರಾಜ್ಯಪರಪ್ಪನ ಅಗ್ರಹಾರ ಕಾರಾಗೃಹದ ಖೈದಿಗಳಿಗೆ ಮಾದಕವಸ್ತು ಸರಬರಾಜು ಜೈಲು ವಾರ್ಡನ್‌ ಬಂಧನ

ಪರಪ್ಪನ ಅಗ್ರಹಾರ ಕಾರಾಗೃಹದ ಖೈದಿಗಳಿಗೆ ಮಾದಕವಸ್ತು ಸರಬರಾಜು ಜೈಲು ವಾರ್ಡನ್‌ ಬಂಧನ

Jail warden arrested for supplying drugs to Parappana Agrahara prison inmates

ಬೆಂಗಳೂರು,ಸೆ.11- ಪರಪ್ಪನ ಅಗ್ರಹಾರ ಕಾರಾಗೃಹದ ಖೈದಿಗಳಿಗೆ ಮಾದಕವಸ್ತು, ತಂಬಾಕು ಸರಬರಾಜು ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಜೈಲು ವಾರ್ಡನ್‌ನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೂರು ತಿಂಗಳ ಹಿಂದೆಯಷ್ಟೇ ಈ ಕಾರಾಗೃಹಕ್ಕೆ ಹುಬ್ಬಳ್ಳಿಯಿಂದ ವರ್ಗಾವಣೆಯಾಗಿದ್ದ ಕಲ್ಲಪ್ಪ ಬಂಧಿತ ಜೈಲು ವಾರ್ಡನ್‌.ಸೆ.7 ರಂದು ಕರ್ತವ್ಯಕ್ಕೆ ಕಲ್ಲಪ್ಪ ಹಾಜರಾದಾಗ ಅಲ್ಲಿನ ಸಿಐಎಸ್‌‍ಎಫ್‌ ಸಿಬ್ಬಂದಿ ತಪಾಸಣೆ ಮಾಡಿದಾಗ ಅವರ ಜೇಬಿನಲ್ಲಿ ಮಾದಕವಸ್ತುವಾದ 100 ಗ್ರಾಂ ಆ್ಯಶಿಶ್‌ ಆಯಿಲ್‌ ಮತ್ತು ಗುಟ್ಕಾವನ್ನು ಸಲ್ಯೂಶನ್‌ ಟೇಪ್‌ನಲ್ಲಿ ಸುತ್ತಿಕೊಂಡು ಬಂದಿರುವುದು ಗೊತ್ತಾಗಿದೆ.

ಈ ಬಗ್ಗೆ ಸಿಐಎಸ್‌‍ಎಫ್‌ ಮುಖ್ಯಸ್ಥರು ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಲ್ಲಪ್ಪನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News