Friday, September 12, 2025
Homeರಾಷ್ಟ್ರೀಯ | Nationalಬಲಪಂಥೀಯ ನಾಯಕರ ಹತ್ಯೆಗೆ ಸಂಚು ನಡೆಸಿದ್ದ ಬಂಧಿತ ಶಂಕಿತ ಐಸಿಸ್‌‍ ಉಗ್ರರು

ಬಲಪಂಥೀಯ ನಾಯಕರ ಹತ್ಯೆಗೆ ಸಂಚು ನಡೆಸಿದ್ದ ಬಂಧಿತ ಶಂಕಿತ ಐಸಿಸ್‌‍ ಉಗ್ರರು

Suspected ISIS terrorists arrested for plotting to kill right-wing leaders

ನವದೆಹಲಿ,ಸೆ.12- ವಿವಿಧ ರಾಜ್ಯಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಲಾದ ಐವರು ಶಂಕಿತ ಐಸಿಸ್‌‍ ಉಗ್ರರು, ಕೆಲವು ಬಲಪಂಥೀಯ ನಾಯಕರನ್ನು ಗುರಿಯಾಗಿಸಿ ಹತ್ಯೆ ಮಾಡಲು ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಶಂಕಿತ ಉಗ್ರರು ಚಾಟಿಂಗ್‌ ಮಾಡಿರುವುದು ತನಿಖಾ ವೇಳೆ ತಿಳಿದುಬಂದಿದೆ. ಶಂಕಿತ ಭಯೋತ್ಪಾದಕರು ಆತಹತ್ಯಾ ಜಾಕೆಟ್‌ಗಳು ಮತ್ತು ಆತಹತ್ಯಾ ಬಾಂಬರ್‌ಗಳನ್ನು ಸಹ ಸಿದ್ಧಪಡಿಸುತ್ತಿದ್ದರು.ಇವರು ಸಂಘಟನೆಗಾಗಿ ಯುವಕರನ್ನು ನೇಮಿಸಿಕೊಳ್ಳಲು ಖಿಲಾಫತ್‌ ಮಾದರಿಯನ್ನು ಅನುಸರಿಸ್ತುದ್ದರು. ಸಾಮಾಜಿಕ ಮಾಧ್ಯಮ ವೇದಿಕೆ – ಸಿಗ್ನಲ್‌ ಆ್ಯಪ್‌ ಮೂಲಕ ಸಂಪರ್ಕದಲ್ಲಿದ್ದರು.

ಈ ಮಾಡ್ಯೂಲ್‌ ಸುಮಾರು 40 ಸಕ್ರಿಯ ಸದಸ್ಯರನ್ನು ಹೊಂದಿದ್ದು, ಮಾಡ್ಯೂಲ್‌ನ ನಿರ್ವಾಹಕ ಪಾಕಿಸ್ತಾನದವರಾಗಿದ್ದಾರೆ.ಅವರಲ್ಲಿ ಐವರಿಗೆ ಮಾತ್ರ ಭಯೋತ್ಪಾದಕ ಚಟುವಟಿಕೆಯ ಬಗ್ಗೆ ತಿಳಿದಿತ್ತು. ದೆಹಲಿ, ಮಧ್ಯಪ್ರದೇಶ, ಜಾರ್ಖಂಡ್‌ ಮತ್ತು ತೆಲಂಗಾಣದಲ್ಲಿ ಐದು ಜನರನ್ನು ಬಂಧಿಸಲಾಗಿತ್ತು.

ಮುಂಬೈ ನಿವಾಸಿಗಳಾದ ಅಫ್ತಾಬ್‌ ಮತ್ತು ಅಬು ಸುಫಿಯಾನ್‌ ಎಂಬ ಇಬ್ಬರು ಆರೋಪಿಗಳನ್ನು ದೆಹಲಿಯ ನಿಜಾಮುದ್ದೀನ್‌ ರೈಲ್ವೆ ನಿಲ್ದಾಣದಿಂದ ಮುಂಬೈಗೆ ತೆರಳುತ್ತಿದ್ದ ವೇಳೆ ಶಸಾ್ತ್ರಸ್ತ್ರಗಳೊಂದಿಗೆ ಬಂಧಿಸಲಾಗಿತ್ತು. ಪ್ರಮುಖ ಆರೋಪಿ ಆಶರ್‌ ಡ್ಯಾನಿಶ್‌ನನ್ನು ರಾಂಚಿಯಲ್ಲಿ ಬಂಧಿಸಲಾಗಿತ್ತು.

ಡ್ಯಾನಿಶ್‌ ಈ ಹಿಂದೆ ಇಂಪೂವೈಸ್ಡ್‌ ಎಕ್ಸ್ ಪ್ರೋಸಿವ್‌ ಡಿವೈಸಸ್‌‍ (ಐಇಡಿ) ತಯಾರಿಸುವಾಗ ಗಾಯಗೊಂಡಿದ್ದ. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಗಜ್ವಾ ಎಂಬ ಕೋಡ್‌ ಹೆಸರಿನೊಂದಿಗೆ ಹೋಗಿದ್ದರು. ಈ ವರ್ಷದ ಜನವರಿಯಲ್ಲಿ ನಗರಕ್ಕೆ ಆಗಮಿಸಿದ ಇವರು ವಿದ್ಯಾರ್ಥಿಯಂತೆ ವೇಷ ಧರಿಸಿಕೊಂಡಿದ್ದರು.

ಮಧ್ಯಪ್ರದೇಶದ ರಾಜ್‌ಗಢದಿಂದ ಕಮ್ರಾನ್‌ ಖುರೇಷಿ ಬಂಧಿತನಾಗಿದ್ದರೆ, ಹಜೈಫ್‌ ಯೆಮೆನ್‌ ತೆಲಂಗಾಣದಲ್ಲಿ ಪತ್ತೆಯಾಗಿದ್ದಾನೆ.ಆರೋಪಿಗಳು ರಾಸಾಯನಿಕ ಶಸಾ್ತ್ರಸ್ತ್ರಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದು, ಭಯೋತ್ಪಾದಕ ಸಂಘಟನೆಯ ಸ್ಲೀಪರ್‌ ಮಾಡ್ಯೂಲ್‌ನ ಭಾಗವಾಗಿದ್ದರು. ಬಾಂಬ್‌ಗಳನ್ನು ತಯಾರಿಸುವುದು, ಶಸಾ್ತ್ರಸ್ತ್ರಗಳನ್ನು ಸಂಗ್ರಹಿಸುವುದು ಮತ್ತು ಸಂಘಟನೆಯ ಬಲವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದರುಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಯೋತ್ಪಾದಕರಿಂದ ಅಪಾರ ಪ್ರಮಾಣದ ರಾಸಾಯನಿಕಗಳು ಮತ್ತು ಶಸಾ್ತ್ರಸ್ತ್ರಗಳ ಕಾರ್ಟ್ರಿಡ್‌್ಜಗಳನ್ನು ವಶಪಡಿಸಿಕೊಂಡಿದ್ದಾರೆ. ಪಿಸ್ತೂಲ್‌, ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌ಗಳು, ತೂಕದ ಯಂತ್ರ, ಬೀಕರ್‌ ಸೆಟ್‌, ಸುರಕ್ಷತಾ ಕೈಗವಸುಗಳು, ಉಸಿರಾಟದ ಮುಖವಾಡಗಳು, ಮದರ್‌ಬೋರ್ಡ್‌ ಹೊಂದಿರುವ ಪ್ಲಾಸ್ಟಿಕ್‌ ಕಂಟೇನರ್‌ ಮತ್ತು ವೈರ್‌ಗಳನ್ನು ಕೂಡ ಉಗ್ರರಿಂದ ವಶಪಡಿಸಿಕೊಳ್ಳಾಗಿದೆ.

RELATED ARTICLES

Latest News