ಬೆಂಗಳೂರು, ಸೆ.14- ತಮ ಹುಟ್ಟುಹಬ್ಬದಂದೇ (ಸೆ.14) ನಟಿ ಅಮೂಲ್ಯ ಅವರು ಚಿತ್ರರಂಗಕ್ಕೆ ಮರಳುವ ಸುದ್ದಿ ಪ್ರಕಟಿಸಿದ್ದಾರೆ.ಶರಣ್, ತಾರಾ ಅವರು ಮುಖ್ಯ ತೀರ್ಪುಗಾರರಾಗಿರುವ ನಾವು ನಮವರು ಎಂಬ ರಿಯಾಲ್ಟಿ ಶೋನಲ್ಲಿ ಅಮೂಲ್ಯಅವರು ಕೂಡ ತೀರ್ಪುಗಾರರಾಗಿದ್ದನ್ನು ಗಮನಿಸಿದ್ದವರು ಅಮೂಲ್ಯ ಅವರು ಸಿನಿಮಾಕ್ಕೆ ರೀಎಂಟ್ರಿ ಕೊಡುತ್ತಾರೆ ಎಂದು ಲೆಕ್ಕಾಚಾರ ಹಾಕಿದ್ದರು.
ಅವರ ಲೆಕ್ಕಾಚಾರದಂತೆಯೇ ಅಮೂಲ್ಯ ಅವರು ಎಂಟು ವರ್ಷ ಗಳ ನಂತರ ನಾಯಕನಟಿಯಾಗಿ ಭರ್ಜರಿ ಎಂಟ್ರಿ ನೀಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯಅವರು ಅಭಿನಯಿಸಿದ್ದ ಶ್ರಾವಣಿ ಸುಬ್ರಹಣ್ಯ' ಸಿನಿಮಾದ ನಿರ್ದೇಶಕ ಮಂಜು ಸ್ವರಾಜ್ ಅವರೇ ಅಮೂಲ್ಯ ಅವರು ಅಭಿನಯಿಸುತ್ತಿರುವ
ಪೀಕಬೂ’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಅಮೂಲ್ಯರ ಹುಟ್ಟುಹಬ್ಬದ ಅಂಗವಾಗಿ ಈ ಸಿನಿಮಾದ ಟೀಸರ್ ಹಾಗೂ ಅಮೂಲ್ಯರ ಲುಕ್ ಅನ್ನು ರಿವೀಲ್ ಮಾಡಲಾಗಿದೆ. ಅಂದಹಾಗೆ ಮಾಸ್ತಿಗುಡಿ ನಂತರ ಅಮೂಲ್ಯ ಚಿತ್ರರಂಗದಿಂದ ದೂರ ಉಳಿದಿದ್ದರು.