ಪರ್ತ್,ಸೆ,15-ದೇಶದ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಒಂದೂವರೆ ಕೋಟಿಗೂ ಹೆಚ್ಚು ಆಸ್ಟ್ರೇಲಿಯನ್ನರು 2050ರ ವೇಳೆಗೆ ಸಮುದ್ರ ಮಟ್ಟ ಏರಿಕೆಯಿಂದ ಅಪಾಯದಲ್ಲಿದ್ದಾರೆ ಎಂದು ಹವಾಮಾನ ಸಂಸ್ಥೆ ವರದಿಯೊಂದು ಎಚ್ಚರಿಸಿದೆ.
ಆಸ್ಟ್ರೇಲಿಯಾದ ಮೊದಲ ರಾಷ್ಟ್ರೀಯ ಹವಾಮಾನ ಅಪಾಯದ ಮೌಲ್ಯಮಾಪನವು ಪ್ರವಾಹಗಳು, ಚಂಡಮಾರುತಗಳು, ಶಾಖೋತ್ಪನ್ನಗಳು, ಬರ ಮತ್ತು ಕಾಡ್ಗಿಚ್ಚುಗಳಂತಹ ಘಟನೆ ಆಗಾಗ್ಗೆ ಮತ್ತು ತೀವ್ರ ಹವಾಮಾನ ಅಪಾಯಗಳನ್ನು ಮುನ್ಸೂಚಿಸಿದೆ.
ಇಂದು ಆಸ್ಟ್ರೇಲಿಯನ್ನರು ಹವಾಮಾನ ಬದಲಾವಣೆಯ ಪರಿಣಾಮಗಳೊಂದಿಗೆ ಬದುಕುತ್ತಿದ್ದಾರೆ ಎಂದು ಹವಾಮಾನ ಬದಲಾವಣೆ ಸಚಿವ ಕ್ರಿಸ್ ಬೋವೆನ್ ಹೇಳಿದರು, ಆದರೆ ನಾವು ಈಗ ತಾಪಮಾನ ಏರಿಕೆಯಾಗದಂತೆ, ಭವಿಷ್ಯದ ಪೀಳಿಗೆಗೆ ಪರಿಸರ ಕಾಪಾಡಲು ಪ್ರಯತ್ನ ಸಾಗಿದೆ ಎಂದು ಹೇಳಿದರು.
ವಿಶ್ವದ ಅತಿ ದೊಡ್ಡ ತಲಾ ಮಾಲಿನ್ಯಕಾರಕ ರಾಷ್ಟ್ರಗಳಲ್ಲಿ ಒಂದಾದ ಆಸ್ಟ್ರೇಲಿಯಾ ಈಗಾಗಲೇ 1.5 ಡಿಗ್ರಿಗಿಂತ ಹೆಚ್ಚಿನ ತಾಪಮಾನವನ್ನು ತಲುಪಿದೆ ಎಂದು ವರದಿ ಹೇಳಿದೆ, ಸಿಡ್ನಿಯಲ್ಲಿ ಶಾಖ-ಸಂಬಂಧಿತ ಸಾವುಗಳು 400% ಕ್ಕಿಂತ ಹೆಚ್ಚು ಮತ್ತು ಮೆಲ್ಬೋರ್ನ್‌ನಲ್ಲಿ ಬಹುತೇಕ ಮೂರು ಪಟ್ಟು ಹೆಚ್ಚಾಗಬಹುದು ಎಂದು ವರದಿ ಉಲ್ಲೇಕಿಸಿದೆ.
2035 ಕ್ಕೆ ಸರ್ಕಾರ ತನ್ನ ಹೊರಸೂಸುವಿಕೆ ಕಡಿತ ಗುರಿಗಳನ್ನು ಘೋಷಿಸುವ ಕೆಲವು ದಿನಗಳ ಮೊದಲು ಬಿಡುಗಡೆಯಾದ 72 ಪುಟಗಳ ವರದಿಯು, ಯಾವುದೇ ಆಸ್ಟ್ರೇಲಿಯಾದ ಸಮುದಾಯವು ಅಪಾಯಗಳಿಂದ ಮುಕ್ತವಾಗಿರುವುದಿಲ್ಲ ಎಂದು ಕಂಡುಹಿಡಿದಿದೆ.
ಹೆಚ್ಚಿನ ಶಾಖದ ಅಲೆ-ಸಂಬಂಧಿತ ಸಾವುಗಳು, ತೀವ್ರ ಪ್ರವಾಹ ಮತ್ತು ಕಾಡು ಬೆಂಕಿ ಅಪಾಯ ಹೆಚ್ಚಿಸಿದೆ. ಕಳಪೆ ನೀರಿನ ಗುಣಮಟ್ಟ ಮತ್ತು ಆಸ್ತಿ ಮೌಲ್ಯಗಳು ಕೂಡ ಕಡಿಮೆಯಾಗುವ ಬಗ್ಗೆ ಅದು ಎಚ್ಚರಿಸಿದೆ.
2050 ರ ವೇಳೆಗೆ, ಆಸ್ಟ್ರೇಲಿಯಾದಲ್ಲಿ ಹೆಚ್ಚಿನ ಮತ್ತು ಅತಿ ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ನೆಲೆಗೊಂಡಿರುವ ಕರಾವಳಿ ಸಮುದಾಯಗಳ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ಜನಸಂಖ್ಯಾ ಮಟ್ಟಗಳು ಪ್ರಸ್ತುತ ಮಟ್ಟದಲ್ಲಿಯೇ ಇದ್ದರೆ, ಇದರರ್ಥ 1.5 ಮಿಲಿಯನ್‌ಗಿಂತಲೂ ಹೆಚ್ಚು ಜನರು ಅಪಾಯದಲ್ಲಿರುತ್ತಾರೆ.
ಆರೋಗ್ಯ, ಮೂಲಸೌಕರ್ಯ, ನೈಸರ್ಗಿಕ ಪ್ರಭೇದಗಳು ಮತ್ತು ಪರಿಸರ ವ್ಯವಸ್ಥೆಗಳು ಮತ್ತು ಪ್ರಾಥಮಿಕ ಕೈಗಾರಿಕೆಗಳ ಮೇಲೆ ಒತ್ತಡ ಹೇರುತ್ತದೆ ಎಂದು ವರದಿ ಎಚ್ಚರಿಸಿದೆ, ಜೊತೆಗೆ ತುರ್ತು ಪ್ರತಿಕ್ರಿಯೆ ನೀಡುವವರಿಗೆ ಹೆಚ್ಚುವರಿ ಸವಾಲುಗಳನ್ನು ಒಡ್ಡುತ್ತಿದೆ.