ಬೆಂಗಳೂರು,ಸೆ.15- ಈ ದೇಶದಲ್ಲಿ ಯಾರಾದರೂ ನಿಜವಾದ ಮತಾಂತರ ರಾಯಭಾರಿ ಇದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ತಮಗೆ ಮತ್ತು ತಮ ಪಕ್ಷಕ್ಕೆ ಮತಗಳು ಬರುತ್ತವೆ ಎಂದರೆ ವರು ಏನೂ ಬೇಕಾದರು ಮಾಡುತ್ತಾರೆ. ಜಾತಿ ಗಣತಿ ಹೆಸರಿನಲ್ಲಿ ಹಿಂದೂಗಳ ಜೊತೆ ಕ್ರಿಶ್ಚಯಿನ್ ಸೇರ್ಪಡೆ ಮಾಡುವ ಕುತಂತ್ರ ಮಾಡಿದ್ದಾರೆ. ಸಿದ್ದರಾಮಯ್ಯ ಮತಾಂತರದ ಬ್ರಾಂಡ್ ಅಂಬಾಸಿಡರ್ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಏನೇ ಮಾಡಿದರೂ ವೋಟಿಗಾಗಿಯೇ ಮಾಡುತ್ತಾರೆ. ಎಸ್‌ಟಿ ಪ್ರವರ್ಗಕ್ಕೆ ಸೇರಲು ಸುಪ್ರೀಂಕೋರ್ಟ್ ಆದೇಶಗಳಿವೆ. ಏನೇ ತೀರ್ಮಾನ ಮಾಡಿದರೂ ಸಂವಿಧಾನ ಬದ್ಧವಾಗಿ ಕೈಗೊಳ್ಳಲಿ ಎಂದರು.ಕ್ರಿಸ್ಚಿಯನ್ ಜೋಡಿತ ಹಿಂದೂ ಉಪಜಾತಿಗಳಿಗೆ ಪ್ರತ್ಯೇಕ ಕೋಡ್ ವಿಚಾರದ ಬಗ್ಗೆ ಮಾತನಾಡಿದ ಅಶೋಕ್, ಸಿದ್ದರಾಮಯ್ಯ ಮತಾಂತರದ ರಾಯಭಾರಿ. ಹಿಂದೂಗಳನ್ನು ಮತಾಂತರ ಮಾಡಲು ಏನೆಲ್ಲ ಮಾಡಬೇಕೋ ಅದೆಲ್ಲ ಮಾಡುತ್ತ್ತಿದ್ದಾರೆ ಎಂದು ದೂರಿದರು.
ಸಂವಿಧಾನಗಳಲ್ಲಿ ಇರುವುದು ಆರು ಧರ್ಮಗಳು. ಸಿದ್ದರಾಮಯ್ಯ ಹೊಸ ಧರ್ಮ ಸೃಷ್ಟಿಸಲು ಹೊರಟಿದ್ದಾರೆ. ರಾಜ್ಯದಲ್ಲಿ ವಿಷ ಬೀಜ ಬಿತ್ತುವ ಹುನ್ನಾರ ಇದು ಎಂದು ಹೇಳಿದರು.
ವಕ್‌್ಫ ತಿದ್ದುಪಡಿ ಕಾಯ್ದೆ ಸಂಬಂಧ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ವಿಚಾರದ ಕುರಿತು ಮಾತನಾಡಿದ ಅಶೋಕ್, ಸುಪ್ರೀಂಕೋರ್ಟ್ ವಕ್ಫ್ ಕಾಯ್ದೆ ಎತ್ತಿ ಹಿಡಿದಿದೆ. ಕೆಲವು ಸಣ್ಣಪುಟ್ಟ ಅಂಶಗಳಿಗೆ ಸಲಹೆ, ಸ್ಪಷ್ಟನೆ ಕೊಟ್ಟಿದೆ.
ಒಟ್ಟಾರೆ ಕೇಂದ್ರದ ವಕ್‌್ಫ ಕಾಯ್ದೆಗೆ ಕೋರ್ಟ್‌ನಲ್ಲಿ ಜಯ ಸಿಕ್ಕಿದೆ. ಹಲವು ಜಮೀನುಗಳು, ಶಾಲೆ, ಮಠ, ದೇವಸ್ಥಾನಗಳ ಆಸ್ತಿಗೆ ನೊಟೀಸ್ ಕೊಡಲಾಗಿತ್ತು ಎಂದು ಸರಿಸಿದರು.ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸುತ್ತಾ, ವೋಟ್ ಬೇಕು ಅಂದರೆ ಒಕ್ಕಲಿಗ, ಕುರುಬ, ಲಿಂಗಾಯತ ಬೇಕು, ಓಟ್ ಹಾಕಿಸಿಕೊಂಡು ಈಗ ಹತ್ತಿದ ಏಣಿ ಒದ್ದಿದ್ದಾರೆ ಸಿಎಂ.
ಹಿಂದೂ ಧರ್ಮದಲ್ಲಿ ಅಸಮಾನತೆ ಇದ್ದರೆ ಬೇರೆ ಧರ್ಮಗಳಲ್ಲಿ ಸಮಾನತೆ ಇದೆಯಾ? ಮುಸ್ಲಿಮರಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲ, ಮಸೀದಿಗಳಿಗೆ ಪ್ರವೇಶ ಇಲ್ಲ, ಪುರುಷರು ಎಷ್ಟು ಬೇಕಾದರೂ ಮದುವೆ ಆಗಬಹುದು. ಇಸ್ಲಾಂ ಧರ್ಮದ ಅಸಮಾನತೆಗಳ ಬಗ್ಗೆ ಯಾಕೆ ಸಿದ್ದರಾಮಯ್ಯ ಮಾತನಾಡವುದಿಲ್ಲ? ಎಂದು ಪ್ರಶ್ನಿಸಿದರು.
ಕೇವಲ ಹಿಂದೂ ಧರ್ಮದ ಬಗ್ಗೆಯೇ ಯಾಕೆ ಮಾತಾಡುತೀರಿ? ಹಿಂದೂ ಧರ್ಮದ ಸರಿ ಇಲ್ಲ ಅನ್ನುವ ಭಾವನೆ ನಿಮದು. ಎಲ್ಲ ಧರ್ಮಗಳಲ್ಲಿ ಏನೇನು ಅಸಮಾನತೆ ಇದೆ ಎಂದು ಹೇಳಲಿ. ಹಿಂದೂ ಧರ್ಮ ಟಾರ್ಗೆಟ್ ಮಾಡಿ ಮಾತಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಹಿಂದೂಗಳು ಮುಂದಿನ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ಕಾಂಗ್ರೆಸ್ ಸರ್ಕಾರದ ಅವಾಂತರಗಳನ್ನು ನಾವು ಅಧಿಕಾರಕ್ಕೆ ಬಂದು ತಡೆಗಟ್ಟುತ್ತೇವೆ ಎಂದರು.
ದಸರಾ ಉದ್ಘಾಟನೆ ಯಾರು ಮಾಡಬೇಕು ಎಂಬುದರ ಬಗ್ಗೆ ನಾವು ನಿಯಮ ತರುತ್ತೇವೆ. ದಸರಾ ಪ್ರಾರಂಭ ಮಾಡಿದ್ದು ವಿಜಯನಗರದ ಅರಸರು ಯದು ವಂಶದವರಿಗೆ ದಸರಾ ವೇಳೆ ಆಹ್ವಾನ ಹೋಗುತ್ತದೆ. ಯಾಕೆ ಅವರಿಗೇ ಆಹ್ವಾನ ಕೊಡುವುದು? ಬೇರೆಯವರಿಗೆ ಯಾಕೆ ಕೊಡುವುದಿಲ್ಲ. ಅದು ಸಂಪ್ರದಾಯ, ಹಿಂದೂ ಪಂಚಾಂಗ ಪ್ರಕಾರ ನಡೆಯುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಮುಲ್ಲಾಗಳ ಸರ್ಕಾರ. ಪಂಚಾಂಗ, ಸಂಪ್ರದಾಯ, ಸಂಸ್ಕೃತಿಗಳಿಗೆ ಮನ್ನಣೆ ಕೊಡುವುದಿಲ್ಲ. ಇದಕ್ಕೆಲ್ಲ ಕಾನೂನು ತರಬೇಕು. ಉರುಸ್, ಮುಸ್ಲಿಂ ಹಬ್ಬಗಳಿಗೆ ಹೋಗಿ ಇದು ಮುಸ್ಲಿಮರದ್ದಲ್ಲ ಅಂದು ಹೇಳಲಿ, ಹಿಂದೂಗಳನ್ನು ಕರೆದೊಯ್ದು ಉರುಸ್, ಮುಸ್ಲಿಂ ಹಬ್ಬಗಳನ್ನು ಉದ್ಘಾಟಿಸಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಬಂದ ಮೇಲೆಯೇ ಇದೆಲ್ಲ ನಡೆಯುತ್ತದೆ. ಮಸೀದಿ ಮುಂದೆ ಗಣೇಶೋತ್ಸವ ಮೆರವಣಿಗೆ ಹೋಗಬಾರದು ಎನ್ನುತ್ತಾರೆ. ಹಾಗಾದರೆ ದೇವಸ್ಥಾನ ಮುಂದೆಯೂ ಉರುಸ್, ಮೀಲಾದ್ ಮೆರವಣಿಗೆ ಹೋಗಬಾರದು ಎಂದು ಒತ್ತಾಯ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಎಡಬಿಡಂಗಿ ಆಡಳಿತ. ರಾಜ್ಯದಲ್ಲಿ ಇದರಿಂದಲೇ ಅರಾಜಕತೆ ಸೃಷ್ಟಿ ಆಗಿದೆ. ಧರ್ಮ ಧರ್ಮಗಳ ನಡುವೆ ವಿಷ ಬೀಜ, ಬೆಂಕಿ ಹಚ್ಚೋದು, ನಾಡು ಅಶಾಂತಿಯಿಂದಿರಬೇಕೆಂದು ಬಯಸುವವರು ಕಾಂಗ್ರೆಸ್‌ನವರು ಎಂದು ಗುಡುಗಿದರು.