ಕೊಪ್ಪಳ,ಸೆ.16-ಇಲ್ಲಿನ ನಗರಸಭೆ ಕಚೇರಿ ಸೇರಿ ಐದು ಕಡೆ ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದ ಆರೋಪ ಹಾಗೂ ವಿವಿಧ ದೂರಿನ ಹಿನ್ನೆಲೆ ದಾಳಿ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
ಕೊಪ್ಪಳದ ನಗರಸಭೆ ಕಚೇರಿ, ನಗರಸಭೆ ಜೆಇ ಸೋಮಲಿಂಗಪ್ಪ, ಕಂದಾಯ ನಿರೀಕ್ಷಕ ಉಜ್ವಲ್, ಗುತ್ತಿಗೆದಾರರಾದ ಶಕೀಲ್ ಪಟೇಲ್, ಪ್ರವೀಣ ಕಂದಾರಿ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ್,ಇನ್ಸ್ ಪೆಕ್ಟರ್ ವಿಜಯಕುಮಾರ್, ಚಂದ್ರಪ್ಪ, ನಾಗರತ್ನ, ಶೈಲಾ, ಅಮರೇಶ ಹುಬ್ಬಳ್ಳಿ ಸೇರಿಸಿಬ್ಬಂದಿ ಐದು ತಂಡಗಳು ಏಕ ಕಾಲದಲ್ಲಿ ದಾಳಿ ನಡೆಸಿದೆ. ನಗದುಹಣ ,ಚಿನ್ನಾಭರಣ ಸೇರಿ ಹಲವು ಆಸ್ತಿ ದಾಖಲೆ ಪತ್ತೆಯಾಗಿದ್ದು,ಕೆಲವು ಕಚೇರಿಯ ಕಡತ ಮತ್ತು ಹಣಕಾಸಿನ ವ್ಯವಹಾರದ ಡೈರಿ ವಶಕ್ಕೆ ಪಡೆಯಲಾಗಿದೆ.