Tuesday, September 16, 2025
Homeರಾಜ್ಯಮುಸಲ್ಮಾನರ ವಿಷಯಗಳು ಇಲ್ಲದಿದ್ದರೆ ಬಿಜೆಪಿ ರಾಜಕೀಯ ಮಾಡಲು ಸಾಧ್ಯವಿಲ್ಲ : ಸಂತೋಷ್‌ಲಾಡ್‌ ಕಿಡಿ

ಮುಸಲ್ಮಾನರ ವಿಷಯಗಳು ಇಲ್ಲದಿದ್ದರೆ ಬಿಜೆಪಿ ರಾಜಕೀಯ ಮಾಡಲು ಸಾಧ್ಯವಿಲ್ಲ : ಸಂತೋಷ್‌ಲಾಡ್‌ ಕಿಡಿ

BJP cannot do politics without Muslim issues: Santosh Lad taunts

ಬೆಂಗಳೂರು, ಸೆ.16- ಪಾಕಿಸ್ತಾನ, ಮುಸಲ್ಮಾನ ವಿಷಯಗಳು ಇಲ್ಲವೆಂದರೆ ಬಿಜೆಪಿಯವರಿಗೆ ರಾಜಕೀಯ ವ್ಯವಹಾರವೇ ಇಲ್ಲ. ಈ ವಿಷಯಗಳೇ ಬಿಜೆಪಿಯವರಿಗೆ ಜೀವಾಳ ಎಂದು ಕಾರ್ಮಿಕ ಸಚಿವ ಸಂತೋಷಲಾಡ್‌ ಲೇವಡಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್‌ ದಾಳಿಯಾದಾಗ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಜೋರು ಭಾಷಣ ಮಾಡಿ, ನೀರು ಮತ್ತು ರಕ್ತ ಏಕಾಕಾಲಕ್ಕೆ ಹರಿಯಲು ಸಾಧ್ಯವಿಲ್ಲ ಎಂದಿದ್ದರು. ಈಗ ಪಾಕಿಸ್ತಾನದ ಜೊತೆ ಕ್ರಿಕೆಟ್‌ ಆಡುತ್ತಿದ್ದಾರೆ. ಇದನ್ನು ಬಿಜೆಪಿಯವರು ಏಕೆ ಪ್ರಶ್ನಿಸುತ್ತಿಲ್ಲ ಎಂದು ಕಿಡಿ ಕಾರಿದರು.

ಬಿಜೆಪಿಯವರಿಗೆ ನಾಚಿಕೆ, ಮಾನಮರ್ಯಾದೆ ಏನೂ ಇಲ್ಲ. ಪಾಕಿಸ್ತಾನದ ಜೊತೆಗಿನ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ನಿಲ್ಲಿಸಿಬಿಡುತ್ತೇವೆ, ಪಾಕಿಸ್ತಾನವನ್ನು ಮುಗಿಸಿ ಬಿಡುತ್ತೇವೆ, ಹಾಗೇ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂದೆಲ್ಲಾ ಹೇಳಿದವರು ಇವತ್ತು ಮಾಡುತ್ತಿರುವುದು ಏನು? ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರ ಪುತ್ರ ಜೈ ಷಾ ಅವರ ಅಧ್ಯಕ್ಷತೆಯಲ್ಲಿರುವ ಭಾರತೀಯ ಕ್ರಿಕೆಟ್‌ ಮಂಡಳಿ ಪಾಕಿಸ್ತಾನದ ಜೊತೆ ನಮ ತಂಡ ಆಟವಾಡಲು ಅವಕಾಶ ನೀಡಿದೆ. ಇದನ್ನು ಬಿಜೆಪಿಯವರು ವಿರೋಧಿಸುತ್ತಿಲ್ಲ ಎಂದು ಹೇಳಿದರು.

ಬಿಜೆಪಿಯವರು ಏನೂ ಮಾಡಿದರೂ ಅದು ಅಂಗೀಕೃತ ಎಂಬಂತೆ ವರ್ತಿಸಲಾಗುತ್ತಿದೆ. ಕಾಂಗ್ರೆಸ್‌‍ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರಲ್ಲಿ ಮುಸಲಾನರು ಪಾಕಿಸ್ತಾನ ಎಂಬ ಹುಳುಕು ಹುಡುಕಿ ಟೀಕೆ ಮಾಡುತ್ತಾರೆ. ಇದೇ ಬಿಜೆಪಿಯವರ ಜೀವಾಳ. ಇದನ್ನು ಬಿಟ್ಟರೆ ಅವರಿಗೆ ಬದುಕಿಲ್ಲ ಎಂದು ಕಿಡಿ ಕಾರಿದರು.

ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಶೇ.65ರಷ್ಟು ಬಿಪಿಎಲ್‌ ಕಾರ್ಡ್‌ಗಳು ಇರಬೇಕು. ಆದರೆ ನಮಲ್ಲಿ 90ಕ್ಕಿಂತಲೂ ಹೆಚ್ಚು ಬಿಪಿಎಲ್‌ ಕಾರ್ಡ್‌ಗಳಿವೆ. ಅರ್ಹರಿಗೆ ಬಿಪಿಎಲ್‌ ಸೌಲಭ್ಯ ದೊರಕಿಸಲು ಎಲ್ಲಾ ಸರ್ಕಾರಗಳು ಪ್ರಯತ್ನ ಮಾಡುತ್ತಲೇ ಇವೆ.

ಅನರ್ಹರು ಸೌಲಭ್ಯ ಪಡೆದಿರುವುದನ್ನು ಪತ್ತೆ ಹಚ್ಚಲು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.ರಾಜ್ಯದಲ್ಲಿ ಒಂದೆಡೆ ಬಿಪಿಎಲ್‌ ಕಾರ್ಡ್‌ಗಳ ಸಂಖ್ಯೆ ಹೆಚ್ಚಿದ್ದರೂ ದೇಶದಲ್ಲೇ ಅತೀ ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವ ರಾಜ್ಯ ಕರ್ನಾಟಕವಾಗಿದೆ. ತಲಾ ಆದಾಯದಲ್ಲೂ ದೇಶದಲ್ಲಿ ನಂ.1 ಸ್ಥಾನದಲ್ಲಿದ್ದೇವೆ. ಇದಕ್ಕೆ ಗ್ಯಾರಂಟಿ ಯೋಜನೆಗಳ ಕೊಡುಗೆಯೂ ಮಹತ್ವದ್ದಾಗಿದೆ ಎಂದು ಹೇಳಿದರು.

ಮೃತಪಟ್ಟ ಮಹಿಳೆಯ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿಯಾಗಿರುವುದು ಸಹಜ. ಇದು ದೊಡ್ಡ ಪ್ರಮಾಣದ ಯೋಜನೆ. ಸಣ್ಣ ಪ್ರಮಾಣದ ಲೋಪಗಳು ಇರಬಹುದು. ಪ್ರತಿವಾರ ಸಾವು-ನೋವುಗಳು ಘಟಿಸುತ್ತಿರುತ್ತವೆ. ಆ ಮಾಹಿತಿ ಕಾಲಕಾಲಕ್ಕೆ ಅಪ್‌ಡೇಟ್‌ ಆಗದೇ ಇದ್ದಾಗ ಲೋಪಗಳಾಗುವುದು ಸಾಮಾನ್ಯ. ಸರ್ಕಾರ ಇದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಹೇಳಿದರು.

RELATED ARTICLES

Latest News