Tuesday, September 16, 2025
Homeಬೆಂಗಳೂರುಮನೆಗಳ್ಳತನ : ಇಬ್ಬರು ರೌಡಿ ಸೇರಿ ಮೂವರ ಸೆರೆ, 50 ಲಕ್ಷ ರೂ. ಮೌಲ್ಯದ ಚಿನ್ನಾಭರಣ...

ಮನೆಗಳ್ಳತನ : ಇಬ್ಬರು ರೌಡಿ ಸೇರಿ ಮೂವರ ಸೆರೆ, 50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

House robbery: Three including two rowdies arrested

ಬೆಂಗಳೂರು,ಸೆ.16- ರಾತ್ರಿ ವೇಳೆ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ರೌಡಿಗಳು ಸೇರಿದಂತೆ ಮೂವರನ್ನು ಬಂಧಿಸಿರುವ ಜ್ಞಾನಭಾರತಿ ಠಾಣೆ ಪೊಲೀಸರು ನಗದು ಸೇರಿದಂತೆ 50 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿ.ಕೆ.ಅಚ್ಚುಕಟ್ಟು ಪೊಲೀಸ್‌‍ ಠಾಣೆ ರೌಡಿ ಶೀಟರ್‌ಗಳಾದ ಅಬ್ರಹಾಂ ಅಲಿಯಾಸ್‌‍ ಅಭಿ, ಧನುಷ್‌ ಅಲಿಯಾಸ್‌‍ ದಡಿಯ ಹಾಗೂ ಮತ್ತೊಬ್ಬ ಆರೋಪಿ ನಿಖಿಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಮರಿಯಪ್ಪನಪಾಳ್ಯದ ನಿವಾಸಿ ಸಾಫ್‌್ಟವೇರ್‌ ಇಂಜಿನಿಯರ್‌ ಕಾಂತರಾಜು ಹಾಗೂ ಕೇಂದ್ರ ಸರ್ಕಾರಿ ನೌಕರರಾದ ಸಹೋದರ ಗಿರೀಶ್‌ಬಾಬು ಅವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಮಧ್ಯವೆಂಕಟಾಪುರಕ್ಕೆ ಹೋಗಿದ್ದರು.

ಮಾರನೆದಿನ ಮನೆಗೆ ಬಂದಾಗ ಬಾಗಿಲು ತೆರದುಕೊಂಡಿದ್ದುದನ್ನು ಗಮನಿಸಿ ಒಳಗೆ ಹೋಗಿ ನೋಡಿದಾಗ ಮನೆಗಳ್ಳತನವಾಗಿರುವುದು ಗೊತ್ತಾಗಿದೆ. ಮನೆಯ ಕೊಠಡಿಯ ಬೀರುವಿನಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ವಾಚ್‌, ಹಣ ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ ಪೊಲೀಸರು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಸಿ.ಕೆ.ಅಚ್ಚುಕಟ್ಟು ಪೊಲೀಸ್‌‍ ಠಾಣೆಯ ಪ್ರಕರಣವೊಂದರಲ್ಲಿ ಭಾಗಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ರೌಡಿ ಧನುಷ್‌ನನ್ನು ತಮ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಮತ್ತಿಬ್ಬರು ಸಹಚರರೊಂದಿಗೆ ಸೇರಿಕೊಂಡು ಮನೆಗಳ್ಳತನ ಮಾಡಿರುವುದಾಗಿ ಹೇಳಿದ್ದಾನೆ.
ಆ ಇಬ್ಬರು ಸಹಚರರ ಬಗ್ಗೆ ಆರೋಪಿ ಧನುಷ್‌ ಮಾಹಿತಿ ನೀಡಿದ್ದು, ಹೆಸರುಘಟ್ಟದಲ್ಲಿರುವ ಸಪ್ತಗಿರಿ ಕಾಲೇಜಿನ ಬಳಿ ಒಬ್ಬನನ್ನು ಹಾಗೂ ನೆಲಮಂಗಲದ ದೇವಿಹಳ್ಳಿ ಬಳಿ ಮತ್ತೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಈ ಮೂವರು ಆರೋಪಿಗಳನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಕಳವು ಮಾಡಿದ್ದ ಚಿನ್ನಾಭರಣ ಮತ್ತು ಬೆಳ್ಳಿವಸ್ತುಗಳನ್ನು ಜೆ.ಪಿ.ನಗರದ ಸಹಚರನ ತಮನಿಗೆ ಹಾಗೂ ಇಬ್ಬರು ಸಹಚರರ ಸ್ನೇಹಿತರಿಗೆ ನೀಡಿರುವುದಾಗಿ ಹೇಳಿದ್ದಾರೆ.

ತನಿಖೆ ಮುಂದುವರೆಸಿದ ಪೊಲೀಸರು ಮೂವರು ಆರೋಪಿಗಳಿಂದ 423 ಗ್ರಾಂ ಚಿನ್ನಾಭರಣ, 710 ಗ್ರಾಂ ಬೆಳ್ಳಿವಸ್ತುಗಳು, 2 ವಾಚ್‌ಗಳು, 4,156 ರೂ. ನಗದು, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 50 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ಈ ಪ್ರಕರಣದಲ್ಲಿ ಕೇಂದ್ರ ಕಾರಾಗೃಹದಿಂದ ತಮ ವಶಕ್ಕೆ ಪಡೆದಿದ್ದ ಆರೋಪಿ ಧನುಷ್‌ನನ್ನು ಕೇಂದ್ರ ಕಾರಾಗೃಹಕ್ಕೆ ವಾಪಸ್‌‍ ಕಳುಹಿಸಲಾಗಿದೆ.ಈ ಕಾರ್ಯಾಚರಣೆಯನ್ನು ಡಿಸಿಪಿ ಅನಿತಾ ಹದ್ದಣ್ಣನವರ್‌ ಅವರ ಮಾರ್ಗದರ್ಶನದಲ್ಲಿ ಇನ್‌್ಸಪೆಕ್ಟರ್‌ ರವಿ ಹಾಗೂ ಇತರೆ ಅಧಿಕಾರಿಗಳ ಸಿಬ್ಬಂದಿ ತಂಡ ಕೈಗೊಂಡಿತ್ತು.


ಡೆಲಿವರಿ ಬಾಯ್‌ ಸೆರೆ:10 ಲಕ್ಷ ರೂ. ಮೌಲ್ಯದ 70 ಕೈಗಡಿಯಾರಗಳ ಜಪ್ತಿ
ಪ್ರತಿಷ್ಠಿತ ವಾಚ್‌ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು ಪ್ರತಿನಿತ್ಯ ಕೈ ಗಡಿಯಾರಗಳನ್ನು ಕಳವು ಮಾಡಿಕೊಂಡು ಹೋಗಿದ್ದ ಕಂಪನಿಯ ಡೆಲಿವರಿ ಬಾಯ್‌ನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿ 10 ಲಕ್ಷ ರೂ. ವೌಲ್ಯದ 70 ಕೈ ಗಡಿಯಾರಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂಲತಃ ಆಂಧ್ರಪ್ರದೇಶದ ಶೇಷಾದ್ರಿರೆಡ್ಡಿ (27) ಬಂಽತ ಆರೋಪಿ. ಈತ ನಗರದ ಹೊಂಗಸಂದ್ರದಲ್ಲಿ ವಾಸಿಸುತ್ತಿದ್ದ.ಎಲೆಕ್ಟ್ರಾನಿಕ್‌ ಸಿಟಿ 2ನೇ ಹಂತದಲ್ಲಿ ವಾಚ್‌ ಕಂಪನಿಯಿದ್ದು, ಈ ಕಂಪನಿಯಲ್ಲೇ ಡೆಲಿವರಿ ಬಾಯ್‌ ಕೆಲಸ ಮಾಡುತ್ತಿದ್ದ ವ್ಯಕ್ತಿ ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಹೋಗುವ ಸಮಯದಲ್ಲಿ ಇತರೆ ಉದ್ಯೋಗಿಗಳಿಗೆ ಗೊತ್ತಾಗದ ಹಾಗೆ ಒಂದೊಂದು ಕೈ ಗಡಿಯಾರಗಳನ್ನು ಆಗಿಂದಾಗ್ಗೆ ಕಳವು ಮಾಡಿಕೊಂಡು ಹೋಗುತ್ತಿದ್ದನು. ನಂತರ ದಿನಗಳಲ್ಲಿ ತಾನು ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ಈ ಕಂಪನಿಯಲ್ಲಿ ಕೆಲಸ ತೊರೆದು ಹೋಗಿದ್ದಾನೆ.

ಕಂಪನಿಯಲ್ಲಿ ಕೈಗಡಿಯಾರಗಳು ನಾಪತ್ತೆಯಾಗಿರುವ ಬಗ್ಗೆ ಡೆಪ್ಯೂಟಿ ಮ್ಯಾನೇಜರ್‌ ಗಮನಕ್ಕೆ ಬಂದಿದೆ.ತಕ್ಷಣ ಅವರು ಕೆಲಸ ತೊರೆದಿದ್ದ ಡೆಲಿವರಿ ಬಾಯ್‌ ಮೇಲೆ ಅನುಮಾನಗೊಂಡು ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹಲವು ಮಾಹಿತಿಗಳನ್ನು ಕಲೆಹಾಕಿ ಹೊಸೂರು ಮುಖ್ಯ ರಸ್ತೆ ಕೂಡ್ಲುಗೇಟ್‌ ಬಳಿಯ ಕಂಪನಿಯಲ್ಲಿ ಡೆಲಿವರಿ ಬಾಯ್‌ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ವಾಚ್‌ಗಳನ್ನು ಕಳ್ಳತನ ಮಾಡಿರುವುದುದಾಗಿ ತಿಳಿಸಿದ್ದಾನೆ.

ವಿವಿಧ ಕಂಪನಿಗಳ ದುಬಾರಿ ಬೆಲೆಯ ಫಾಸಿಲ್‌, ಅರ್ಮನಿ,ಎಕ್‌್ಸಚೆಂಜ್‌, ಎಂಪೋರಿಯೋ ಅರ್ಮನಿ, ಮೈಕೆಲ್‌ ಕೋರ್‌ರ‍ಸ ಕೈಗಡಿಯಾರಗಳನ್ನು ಡೆಲಿವರಿ ಬಾಯ್‌ ಕಳ್ಳತನ ಮಾಡಿ ಕಂಪನಿಯ ಕೆಲವರಿಗೆ ಮಾರಿರುವುದಾಗಿ ಹೇಳಿದ್ದಾನೆ.ಅಲ್ಲದೇ ಕೆಲವು ಕೈಗಡಿಯಾರ ಗಳನ್ನು ದಾರಿಹೋಕರಿಗೆ ಮಾರಾಟ ಮಾಡಿದ್ದು, ಇನ್ನೂ ಕೆಲ ಕೈಗಡಿಯಾರಗಳನ್ನು ಮಾರಾಟ ಮಾಡುವ ಸಲುವಾಗಿ ತನ್ನ ಬಳಿಯೇ ಇಟ್ಟುಕೊಂಡಿರುವುದಾಗಿ ಡೆಲಿವರಿ ಬಾಯ್‌ ವಿಚಾರಣೆ ವೇಳೆ ತಿಳಿಸಿದ್ದಾನೆ.ಆರೋಪಿ ಡೆಲಿವರಿ ಬಾಯ್‌ ಬಳಿ ಇದ್ದ ಬ್ಯಾಗ್‌ ಪರಿಶೀಲಿಸಿ ಅದರಲ್ಲಿದ್ದ 10 ಲಕ್ಷ ರೂ. ವೌಲ್ಯದ 70 ಕೈಗಡಿಯಾರಗಳನ್ನು ಇನ್‌್ಸಪೆಕ್ಟರ್‌ ಸತೀಶ್‌ ನೇತೃತ್ವದ ತಂಡವು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಕೈಗಡಿಯಾರಗಳನ್ನು ವಶಕ್ಕೆ ಪಡೆಯಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


ನಕಲಿ ದಾಖಲಾತಿಗಳನ್ನು ಮಾಡಿಕೊಡುತ್ತಿದ್ದ ಇಬ್ಬರ ಬಂಧನ..
ಕಂಪ್ಯೂಟರ್‌ ಅಂಗಡಿ ಯೊಂದರಲ್ಲಿ ನಕಲಿ ಅಂಕಪಟ್ಟಿ ಹಾಗೂ ಆಧಾರ್‌ಕಾರ್ಡ್‌ ಮತ್ತು ವಿವಿಧ ದಾಖಲಾತಿಗಳನ್ನು ತಿದ್ದುಪಡಿ ಮಾಡಿಕೊಡುತ್ತಿದ್ದ ಇಬ್ಬರನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕಂಪ್ಯೂಟರ್‌ ಅಂಗಡಿ ಮಾಲೀಕ ರಘುವೀರ್‌ ಮತ್ತು ಕೆಲಸಗಾರ ಯಶವಂತ್‌ ಬಂಧಿತರು.

ಹೆಬ್ಬಗೋಡಿಯ ಭವಾನಿ ರಸ್ತೆಯಲ್ಲಿರುವ ಕಂಪ್ಯೂಟರ್‌ ಅಂಗಡಿಯೊಂದರಲ್ಲಿ ಸರ್ಕಾರಿ ಗುರುತಿನ ಚೀಟಿ, ನಕಲಿ ಅಂಕಪಟ್ಟಿ ಹಾಗೂ ಆಧಾರ್‌ಕಾರ್ಡ್‌ಗಳನ್ನು ತಿದ್ದುಪಡಿ ಮಾಡಿಕೊಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸ್ಥಳದ ಮೇಲೆ ದಾಳಿ ಮಾಡಿ ಒಬ್ಬನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ತಾನು ಅಂಗಡಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಮತ್ತು ದಾಖಲಾತಿಗಳನ್ನು ತಿದ್ದುಪಡಿ ಮಾಡುತ್ತಿದ್ದಾಗಿ ಹೇಳಿದ್ದಾನೆ. ಅಲ್ಲದೆ ಅಂಗಡಿಯ ಮಾಲೀಕನ ಬಗ್ಗೆ ಮಾಹಿತಿ ನೀಡಿದ್ದಾನೆ.
ಅಂಗಡಿಯಲ್ಲಿದ್ದ ಕಂಪ್ಯೂಟರ್‌, ಪ್ರಿಂಟರ್‌, ಲ್ಯಾಮಿನೇಷನ್‌ ಮಿಷನ್‌, ಹಾರ್ಡ್‌ಡಿಸ್ಕ್‌, 2 ಮೊಬೈಲ್‌ಗಳು, 2 ಸಾವಿರ ಹಣ ಹಾಗೂ ನಕಲಿ ಆಧಾರ್‌ಕಾರ್ಡ್‌ಗಳು ಮತ್ತು ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ತನಿಖೆ ಮುಂದುವರೆಸಿದ ಪೊಲೀಸರು ಹೆಬ್ಬಗೋಡಿ ಪಾರ್ಕ್‌ ಬಳಿ ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆಗೊಳ ಪಡಿಸಿದಾಗ ಕಳೆದ ಒಂದೂವರೆ-ಎರಡು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದುದಾಗಿ ಮಾಲೀಕ ಬಾಯ್ಬಿಟ್ಟಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ನಕಲಿ ದಾಖಲಾತಿಗಳಿಂದ ಲಾಭ ಪಡೆದಿರುವವರ ಬಗ್ಗೆ ಮಾಹಿತಿ ಕಲೆ ಹಾಕಿ ಎಲ್ಲರಿಗೂ ನೋಟೀಸ್‌‍ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸುವುದಾಗಿ ಇನ್ಸ್ ಪೆಕ್ಟರ್‌ ಸೋಮಶೇಖರ್‌ ತಿಳಿಸಿದ್ದಾರೆ.


ಐನಾತಿ ಸಹೋದರರ ಬಂಧನ 243 ಗ್ರಾಂ ಆಭರಣ ವಶ
ಜ್ಯೂವೆಲ್ಲರಿ ಮಾಲೀಕರಿಂದ ಚಿನ್ನಾಭರಣ ಪಡೆದುಕೊಂಡು 24 ಕ್ಯಾರೆಟ್‌ ಚಿನ್ನಾಭರಣ ಮಾಡಿಕೊಡದೆ, ಹಣವನ್ನೂ ನೀಡದೇ ಮೋಸ ಮಾಡಿದ್ದ ಇಬ್ಬರು ಸಹೋದರರನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿ 24 ಲಕ್ಷ ರೂ. ಮೌಲ್ಯದ 243 ಗ್ರಾಂ ಆಭರಣವನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಮತ್ತೊಬ್ಬ ಸಹೋದರ ಭಾಗಿಯಾಗಿದ್ದು, ಆತ ಈಗಾಗಲೇ ಪ್ರಕರಣವೊಂದರಲ್ಲಿ ಚೆನ್ನೈನ ಕಾರಾಗೃಹದಲ್ಲಿದ್ದಾನೆ. ನಗರತ್‌ಪೇಟೆಯ ಜ್ಯೂವೆಲ್ಲರಿ ಅಂಗಡಿಯೊಂದರಿಂದ ಮೂವರು ಸಹೋದರರು ಕಳೆದೆರಡು ವರ್ಷಗಳಿಂದ ಆಗಾಗ್ಗೆ 22 ಕ್ಯಾರೆಟ್‌ನ ಚಿನ್ನಾಭರಣ ಪಡೆದುಕೊಂಡು ಅದಕ್ಕೆ ಸರಿಸಮಾನವಾಗಿ 24 ಕ್ಯಾರೆಟ್‌ ಚಿನ್ನಾಭರಣ ಅಥವಾ ಹಣ ನೀಡುತ್ತಿದ್ದರು. ಕಳೆದ ಜ.6 ರಂದು 350 ಗ್ರಾಂ 250 ಮಿಲಿ ಆಭರಣವನ್ನು ಪಡೆದುಕೊಂಡಿದ್ದ ಈ ಸಹೋದರರು ತದನಂತರ ಚಿನ್ನ ವನ್ನಾಗಲಿ ಅಥವಾ ಹಣವನ್ನಾಗಲಿ ನೀಡದೇ ವಂಚನೆ ಮಾಡಿದ್ದಾರೆ. ಈ ಬಗ್ಗೆ ಅಂಗಡಿ ಮ್ಯಾನೇಜರ್‌ ಪೊಲೀಸರಿಗೆ ದೂರು ನೀಡಿದ್ದರು.

ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆಹಾಕಿ ಚೆನ್ನೈನ ಇಬ್ಬರು ಸಹೋದರರನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆಗೊಳಪಡಿಸಿ ನಗರತ್‌ಪೇಟೆಯ 2 ಜ್ಯೂವೆಲ್ಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದ 100 ಗ್ರಾಂ ಚಿನ್ನಾಭರಣ, ಮತ್ತೊಂದು ಜ್ಯೂವೆಲ್ಲರಿ ಅಂಗಡಿಯಿಂದ 23 ಗ್ರಾಂ ಚಿನ್ನಾಭರಣ ಹಾಗೂ ಚೆನ್ನೈನ ಚಿನ್ನ ಕರಗಿಸುವ ಎರಡು ಅಂಗಡಿಗಳಿಂದ 120 ಗ್ರಾಂ ಆಭರಣಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 24 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್‌ ಹನುಮಂತ ಕೆ ಭಜಂತ್ರಿ ಹಾಗೂ ಸಿಬ್ಬಂದಿ ತಂಡ ಕೈಗೊಂಡು ಇಬ್ಬರು ಸಹೋದರರನ್ನು ಬಂಧಿಸಿ ಆಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.


ರೌಡಿ ಸೇರಿ ಆರು ಮಂದಿ ಸೆರೆ : ಪಿಸ್ತೂಲ್‌, ಮಾರಕಾಸ್ತ್ರ ಜಪ್ತಿ
ಅಪರಾಧ ಕೃತ್ಯವೆಸಗಲು ಸಂಚು ರೂಪಿಸುತ್ತಿದ್ದ ರೌಡಿ ಸೇರಿದಂತೆ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ಪಿಸ್ತೂಲ್‌, ಮಾರಕಾಸ್ತ್ರ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.ಸಂಪಿಗೆಹಳ್ಳಿ ಪೊಲೀಸ್‌‍ ಠಾಣಾ ವ್ಯಾಪ್ತಿಯ ಬೆಳ್ಳಹಳ್ಳಿ ಕ್ರಾಸ್‌‍ ಹತ್ತಿರ ರೌಡಿ ಮೌಲಾ ಅಲಿಯಾಸ್‌‍ ಡಾಂಬರ್‌ ಮೌಲಾ (40) ಹಾಗೂ ಸಹಚರರಾದ ಸಯ್ಯದ್‌ ಇಸಾಕ್‌ (22), ಅಪ್ಸರ್‌ ಬಾಷಾ (28), ಶಹಬಾಜ್‌ (26), ಇಬ್ರಾಹಿಂ (26) ಮತ್ತು ಪರಮಾನ್‌ (25) ಎಂಬುವವರನ್ನು ಬಂಧಿಸಲಾಗಿದೆ.

ರೌಡಿ ಮೌಲಾ ಶಿಡ್ಲಘಟ್ಟ ಪೊಲೀಸ್‌‍ ಠಾಣೆಯ ರೌಡಿಶೀಟರ್‌. ಈತ ತನ್ನ ಸಹಚರರೊಂದಿಗೆ ಸೇರಿಕೊಂಡು ಎದುರಾಳಿ ಗ್ಯಾಂಗ್‌ ಮೇಲೆ ಹಲ್ಲೆ ಮಾಡಲು ಸಂಚು ರೂಪಿಸುತ್ತಿದ್ದನು.ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಸ್ಥಳದ ಮೇಲೆ ದಾಳಿ ಮಾಡಿ ಆರು ಮಂದಿಯನ್ನು ಬಂಧಿಸಿ ವಿವಿಧ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.ತನಿಖೆ ಮುಂದುವರೆಸಿದ ಪೊಲೀಸರು, ಪಿಸ್ತೂಲ್‌ ಅನ್ನು ಅಕ್ರಮವಾಗಿ ತರಿಸಿಕೊಂಡಿದ್ದ ಮೇರೆಗೆ ಸಯ್ಯದ್‌ ಸದ್ದಾಂ(28) ಎಂಬಾತನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆದಿದೆ.


ನೆರೆಮನೆ ನಿವಾಸಿಯಿಂದಲೇ ಮನೆಗಳ್ಳತನ
ಮನೆಗಳ್ಳತನ ಮಾಡಿದ್ದ ನೆರೆಮನೆ ನಿವಾಸಿಯನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿ 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 40 ಸಾವಿರ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.ಭೂಪಸಂದ್ರದ ಮನೆಯೊಂದರಲ್ಲಿ ವೃದ್ಧ ದಂಪತಿ ವಾಸವಾಗಿದ್ದು, ಮನೆಗೆಲಸಕ್ಕೆಂದು ಮಹಿಳೆಯನ್ನು ನೇಮಿಸಿಕೊಂಡಿರುತ್ತಾರೆ. ಇವರ ಪಕ್ಕದ ಮನೆಯ ನಿವಾಸಿ, ರಾಜಸ್ಥಾನ ಮೂಲದ ಯಾಸಿನ್‌ (22) ಎಂಬಾತ ಟೈಲ್‌್ಸ ಕೆಲಸ ಮಾಡಿಕೊಂಡಿದ್ದು, ಈ ದಂಪತಿ ನೆರವಿಗೆ ಆಗಾಗ್ಗೆ ಬಂದು ಹೋಗುತ್ತಿದ್ದನು.

ಇದೇ 5 ರಂದು ದಿನಸಿ ತರಲು ಮನೆ ಮಾಲೀಕರು ಹೊರಗೆ ಹೋಗಿದ್ದಾಗ ಅವರ ಪತ್ನಿ ಮನೆಯಲ್ಲಿ ಒಬ್ಬರೇ ಇದ್ದರು. ಆ ಸಂದರ್ಭದಲ್ಲಿ ಅವರಿಗೆ ಗೊತ್ತಾಗದ ಹಾಗೆ ನೆರೆಮನೆಯ ನಿವಾಸಿ ಇವರ ಮನೆಗೆ ನುಗ್ಗಿ ಕಬೋರ್ಡ್‌ನಲ್ಲಿಟ್ಟಿದ್ದ 40 ಸಾವಿರ ರೂ. ನಗದು, 305 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಹೋಗಿದ್ದಾನೆ. ಕೆಲಸಮಯದ ಬಳಿಕ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ವೃದ್ಧ ದಂಪತಿಗೆ ಅರಿವಾಗಿದೆ. ಮನೆ ಕೆಲಸದಾಕೆ ಹಾಗೂ ನೆರೆಮನೆಯ ನಿವಾಸಿ ಯಾಸಿನ್‌ ಮೇಲೆ ಅನುಮಾನ ವ್ಯಕ್ತಪಡಿಸಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ನೆರೆಮನೆ ನಿವಾಸಿಯನ್ನು ವಿಚಾರಣೆಗೊಳಪಡಿಸಿದಾಗ ಆಭರಣ ಕಳ್ಳತನ ಮಾಡಿರುವುದಾಗಿ ಹೇಳಿದ್ದಾನೆ.ಕಳವು ಮಾಡಿದ ಆಭರಣವನ್ನು ತನ್ನ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದು, ಆತನ ಮನೆಯಿಂದ 40 ಸಾವಿರ ರೂ. ನಗದು ಹಾಗೂ 150 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.


ನಿವೃತ್ತ ಎಸಿಪಿ ಸುಲಿಗೆ- ಮೂವರ ಬಂಧನ :
ವಾಯು ವಿಹಾರಕ್ಕೆ ಹೋಗಿದ್ದ ನಿವೃತ್ತ ಎಸಿಪಿ ಸುಬ್ಬಣ್ಣ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಚಾಕುವಿನಿಂದ ಕೈಗೆ ಇರಿದು ಚಿನ್ನದ ಸರ ಹಾಗೂ ಬ್ರಾಸ್‌‍ಲೈಟ್‌ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದ ಮೂವರನ್ನು ಪೊಲೀಸರು ಬಂಧಿಸಿ 8 ಲಕ್ಷ ರೂ. ಮೌಲ್ಯದ 80 ಗ್ರಾಂ ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ. ಆರ್‌.ಟಿ.ನಗರದ ಲಕ್ಷ್ಮಯ್ಯ ಬ್ಲಾಕ್‌ನಲ್ಲಿ ವಾಸವಿರುವ ಸುಬ್ಬಣ್ಣ ಅವರು ಸೆ.1 ರಂದು ಬೆಳಿಗ್ಗೆ ಕಾರಿನಲ್ಲಿ ಹೊರಟು ವೆರ್ಟನರಿ ಕಾಲೇಜು ಪಾರ್ಕಿಂಗ್‌ ಸ್ಥಳದಲ್ಲಿ ಕಾರು ನಿಲ್ಲಿಸಿ ವಾಯುವಿಹಾರ ಮಾಡುತ್ತಿದ್ದರು.

ಆ ವೇಳೆ ಇಬ್ಬರು ದರೋಡೆಕೋರರು ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಒಬ್ಬಾತ ಅವರನ್ನು ಬಿಗಿಯಾಗಿ ಹಿಡಿದುಕೊಂಡಿದ್ದು, ಮತ್ತೊಬ್ಬ ಚಾಕುವಿನಿಂದ ಬಲಗೈಗೆ ಇರಿದು ಬೆದರಿಸಿ ಸರ ಹಾಗೂ ಬ್ರಾಸ್‌‍ಲೈಟ್‌ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕಾರ್ಯಚರಣೆ ಕೈಗೊಂಡು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಖಚಿತ ಮಾಹಿತಿ ಮೇರೆಗೆ ಬುಲ್ಲೇವಾಡ ಪಾರ್ಕ್‌ ಬಳಿ ದ್ವಿಚಕ್ರ ವಾಹನ ಸಮೇತ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಚಿನ್ನಾಭರಣ ಸುಲಿಗೆ ಮಾಡಿರುವುದಾಗಿ ಹೇಳಿದ್ದಾರೆ. ಕಳವು ಮಾಡಿದ ಚಿನ್ನಾಭರಣಗಳನ್ನು ಡಿಜೆ ಹಳ್ಳಿಯ ಸಂಬಂಧಿಕನಿಗೆ ನೀಡಿರುವುದಾಗಿ ಹಾಗೂ ಭೂಪಸಂದ್ರದ ಮೋರಿ ಬಳಿ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ನಿಲ್ಲಿಸಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಪೊಲೀಸರು ಒಟ್ಟು 80 ಗ್ರಾಂ ಚಿನ್ನಾಭರಣ, ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ 8 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.ಈ ಮೂವರು ಆರೋಪಿಗಳ ಬಂಧನದಿಂದ 6 ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಇನ್ಸ್ ಪೆಕ್ಟರ್‌ ಭಾಗ್ಯವತಿ ಜೆ. ಬಂತಿ ಅವರ ನೇತೃತ್ವದ ಸಿಬ್ಬಂದಿಯ ತಂಡ ಯಶಸ್ವಿಯಾಗಿದೆ.


ನಕಲಿ ದಾಖಲಾತಿಗಳನ್ನು ಮಾಡಿಕೊಡುತ್ತಿದ್ದ ಇಬ್ಬರ ಬಂಧನ.. ಕಂಪ್ಯೂಟರ್‌ ಅಂಗಡಿ ಯೊಂದರಲ್ಲಿ ನಕಲಿ ಅಂಕಪಟ್ಟಿ ಹಾಗೂ ಆಧಾರ್‌ಕಾರ್ಡ್‌ ಮತ್ತು ವಿವಿಧ ದಾಖಲಾತಿಗಳನ್ನು ತಿದ್ದುಪಡಿ ಮಾಡಿಕೊಡುತ್ತಿದ್ದ ಇಬ್ಬರನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕಂಪ್ಯೂಟರ್‌ ಅಂಗಡಿ ಮಾಲೀಕ ರಘುವೀರ್‌ ಮತ್ತು ಕೆಲಸಗಾರ ಯಶವಂತ್‌ ಬಂಧಿತರು.ಹೆಬ್ಬಗೋಡಿಯ ಭವಾನಿ ರಸ್ತೆಯಲ್ಲಿರುವ ಕಂಪ್ಯೂಟರ್‌ ಅಂಗಡಿಯೊಂದರಲ್ಲಿ ಸರ್ಕಾರಿ ಗುರುತಿನ ಚೀಟಿ, ನಕಲಿ ಅಂಕಪಟ್ಟಿ ಹಾಗೂ ಆಧಾರ್‌ಕಾರ್ಡ್‌ಗಳನ್ನು ತಿದ್ದುಪಡಿ ಮಾಡಿಕೊಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸ್ಥಳದ ಮೇಲೆ ದಾಳಿ ಮಾಡಿ ಒಬ್ಬನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ತಾನು ಅಂಗಡಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಮತ್ತು ದಾಖಲಾತಿಗಳನ್ನು ತಿದ್ದುಪಡಿ ಮಾಡುತ್ತಿದ್ದಾಗಿ ಹೇಳಿದ್ದಾನೆ. ಅಲ್ಲದೆ ಅಂಗಡಿಯ ಮಾಲೀಕನ ಬಗ್ಗೆ ಮಾಹಿತಿ ನೀಡಿದ್ದಾನೆ.

ಅಂಗಡಿಯಲ್ಲಿದ್ದ ಕಂಪ್ಯೂಟರ್‌, ಪ್ರಿಂಟರ್‌, ಲ್ಯಾಮಿನೇಷನ್‌ ಮಿಷನ್‌, ಹಾರ್ಡ್‌ಡಿಸ್ಕ್‌, 2 ಮೊಬೈಲ್‌ಗಳು, 2 ಸಾವಿರ ಹಣ ಹಾಗೂ ನಕಲಿ ಆಧಾರ್‌ಕಾರ್ಡ್‌ಗಳು ಮತ್ತು ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ತನಿಖೆ ಮುಂದುವರೆಸಿದ ಪೊಲೀಸರು ಹೆಬ್ಬಗೋಡಿ ಪಾರ್ಕ್‌ ಬಳಿ ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆಗೊಳ ಪಡಿಸಿದಾಗ ಕಳೆದ ಒಂದೂವರೆ-ಎರಡು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದುದಾಗಿ ಮಾಲೀಕ ಬಾಯ್ಬಿಟ್ಟಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ನಕಲಿ ದಾಖಲಾತಿಗಳಿಂದ ಲಾಭ ಪಡೆದಿರುವವರ ಬಗ್ಗೆ ಮಾಹಿತಿ ಕಲೆ ಹಾಕಿ ಎಲ್ಲರಿಗೂ ನೋಟೀಸ್‌‍ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸುವುದಾಗಿ ಇನ್‌್ಸಪೆಕ್ಟರ್‌ ಸೋಮಶೇಖರ್‌ ತಿಳಿಸಿದ್ದಾರೆ.

RELATED ARTICLES

Latest News