Wednesday, September 17, 2025
HomeUncategorizedನಾಳೆಯಿಂದ ಕಂಪ್ಯೂಟ್, ಕಂಟ್ರೋಲ್, ನೆಟ್ವರ್ಕ್ ಮತ್ತು ಫೋಟಾನಿಕ್ಸ್ ಕುರಿತ ಐಇಇಇ ಅಂತರರಾಷ್ಟ್ರೀಯ ಸಮ್ಮೇಳನ

ನಾಳೆಯಿಂದ ಕಂಪ್ಯೂಟ್, ಕಂಟ್ರೋಲ್, ನೆಟ್ವರ್ಕ್ ಮತ್ತು ಫೋಟಾನಿಕ್ಸ್ ಕುರಿತ ಐಇಇಇ ಅಂತರರಾಷ್ಟ್ರೀಯ ಸಮ್ಮೇಳನ

IEEE International Conference on Compute, Control, Networks and Photonics from tomorrow

ಬೆಂಗಳೂರು : ಇದೇ ಸೆಪ್ಟೆಂಬರ್ 18 ಮತ್ತು19 ರಂದು ಎರಡು ದಿನಗಳವರೆಗೆ ನಡೆಯಲಿರುವ ಕಂಪ್ಯೂಟ್, ಕಂಟ್ರೋಲ್, ನೆಟ್ವರ್ಕ್ ಮತ್ತು ಫೋಟಾನಿಕ್ಸ್ ಕುರಿತ ಐಇಇಇ ಅಂತರರಾಷ್ಟ್ರೀಯ ಸಮ್ಮೇಳನದ ಆತಿಥ್ಯವನ್ನು ಆಕ್ಸ್‌ಫರ್ಡ್ ಕಾಲೇಜ್ ಆಫ್ ಎಂಜಿನಿಯರಿಂಗ್ ವಹಿಸಿಕೊಂಡಿದೆ.

ಸಮ್ಮೇಳನದ ಮುಖ್ಯ ಅತಿಥಿಯಾಗಿ ಬೆಂಗಳೂರಿನ ಸಿನಾಪ್ಸಿಸ್ ಐಎನ್‌ಸಿ ಹಿರಿಯ ನಿರ್ದೇಶಕ (ಆರ್‌‌&ಡಿ) ವಿಕಾಸ್ ಗುಡಿ ಅವರು ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಜರ್ಮನಿ ವಿಶ್ವವಿದ್ಯಾಲಯದ ಫ್ರಾನ್ಸಿಸ್ಕೋ ಮುರ್ರೆ ಮತ್ತು ಬಿಹೊರ್ ದಾರ್ ವಿಶ್ವವಿದ್ಯಾಲಯದ ಡಾ. ಫೆಕದ್ ಮಿಹ್ರತ್ ಗೆರೆಮಿವ್ ಅವರು ಉಪಸ್ಥಿತರಿರಲಿದ್ದಾರೆ. ಆಕ್ಸ್‌ಫರ್ಡ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಅಧ್ಯಕ್ಷ ಡಾ. ಎಸ್‌‌.ಎನ್‌.ವಿ‌.ಎಲ್. ನರಸಿಂಹ ರಾಜು ಅವರು ಸಮ್ಮೇಳನದ ಮುಖ್ಯ ಆಯೋಜಕರಾಗಿರುತ್ತಾರೆ.

ಎರಡು ದಿನಗಳ ಸಮ್ಮೇಳನದಲ್ಲಿ ಎಐ, ಎಂಎಲ್, ಐಒಟಿ, ಆನ್‌ಲೈನ್ ಟ್ರ್ಯಾಕ್, ಫೋಟಾನಿಕ್ & ವಿಎಸ್‌ಎಲ್ ವಿಷಯಗಳ ಮೇಲೆ ಚರ್ಚೆ ಮತ್ತು ವಿಚಾರ ಸಂಕಿರಣ ನಡೆಯಲಿದೆ.

RELATED ARTICLES

Latest News