ಬೆಂಗಳೂರು,ಸೆ.18– ಚಂದನವನದ ಅಭಿಮಾನಿಗಳಿಗೆ ಸಂತಸದ ದಿನ. ಒಂದೇ ದಿನ ಮೂವರು ಕಲಾವಿದರ ಹುಟ್ಟುಹಬ್ಬ. ಡಾ.ವಿಷ್ಣುವರ್ಧನ್, ಶೃತಿ, ಉಪೇಂದ್ರ ಇವರ ಕಲಾವಿದರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ವಿಷ್ಣುವರ್ಧನ್ ಅವರಿಗೆ 75ನೇ ವರ್ಷದ ಸಂಭ್ರಮ. ಅಭಿಮಾನ್ ಸ್ಟುಡಿಯೋದಲ್ಲಿ ಸಮಾಧಿಯನ್ನ ನೆಲಸಮ ಮಾಡಲಾಗಿದ್ದರೂ ಹೀಗಾಗಿ ಇಂದು ಕೂಡ ಅಭಿಮಾನಿಗಳೆಲ್ಲಾ ಸೇರಿ ಆ ಜಾಗದಲ್ಲಿ ಅನ್ನದಾನ ಮಾಡುವ ಮೂಲಕ ವಿಷ್ಣು ಫೋಟೋಗೆ ಪೂಜೆ ಸಲ್ಲಿಸಿ ತಮ ಅಭಿಮಾನವನ್ನ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಮೂಲಕ ಬಂದ ಶೃತಿ ಅವರಿಗೂ ಹುಟ್ಟುಹಬ್ಬದ ಸಂಭ್ರಮ. ಅವರ ಅಭಿಮಾನಿ ಬಳಗವೆಲ್ಲಾ ಸೇರಿ, ಕುಟುಂಬಸ್ಥರೆಲ್ಲ ಒಟ್ಟುಗೂಡಿ ಇಂದು ಇಸ್ಕಾನ್ ದೇವಸ್ಥಾನದಲ್ಲಿ ಅದ್ದೂರಿಯಾಗಿ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.
50ನೇ ವರ್ಷದ ಹುಟ್ಟುಹಬ್ಬ ಮಾಡಬೇಕೆಂಬುದು ಮಗಳ ಆಸೆಯಾಗಿತ್ತು. ಇಂದಿನ ಸಂಭ್ರಮಕ್ಕೆ ಚಿತ್ರರಂಗದ ಎಲ್ಲಾ ನಟ ನಟಿಯರು ಬಂದಿರೋದು ನನಗೆ ಬಹಳ ಖುಷಿ ತರಿಸಿದೆ ಎಂದು ಶೃತಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಉಪೇಂದ್ರ ಅವರು ಕನ್ನಡದಲ್ಲಿ ಹಲವು ಭಿನ್ನ ಸಿನಿಮಾಗಳನ್ನು ನೀಡಿ ಹೊಸ ರೀತಿಯಲ್ಲಿ ಆಲೋಚಿಸುವಂತೆ ಮಾಡಿದವರು, ಇವರು 57ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಬೆಳಗ್ಗೆಯಿಂದಲೇ ಉಪೇಂದ್ರ ಮನೆಯ ಮುಂದೆ ಅಭಿಮಾನಿಗಳು ನೆರೆದಿದ್ದು, ತನ್ನಿಷ್ಟದ ನಟನಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ. ಮೂವರು ದಿಗ್ಗಜ ನಟರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.