ರಾಂಚಿ,ಸೆ.19- ಜಮು ಮತ್ತು ಕಾಶೀರದ ಪಹಲ್ಗಾಮ್‌ನಲ್ಲಿ ನಡೆದ ನರಮೇಧಕ್ಕೆ ಪ್ರತಿಕಾರವಾಗಿ ಸೇನಾ ಪಡೆಗಳು ಪಾಕಿಸ್ತಾನ ಹಾಗೂ ಪಿಒಕೆ ಮೇಲೆ ನಡೆಸಿದ ಅಪರೇಷನ್ ಸಿಂಧೂರ ಕಾರ್ಯಾಚಾರಣೆಯನ್ನು ಮಧ್ಯರಾತ್ರಿಯೇ ಏಕೆ ನಡೆಸಲಾಯಿತು ಎಂಬ ಗುಟ್ಟು ಕೊನೆಗೂ ರಟ್ಟಾಗಿದೆ.
ಭಾರತದ ರಕ್ಷಣಾ ಸೇನಾ ಸಿಬ್ಬಂದಿ ಜನರಲ್ ಅನಿಲ್ ಚೌಹಾನ್ ಅವರು ರಾಂಚಿಯಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಆಪರೇಷನ್ ಸಿಂದೂರದ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಮೇ 7 ರಾತ್ರಿ ಪಾಕಿಸ್ತಾನದ ಭಯೋತ್ಪಾದಕ ಕ್ಯಾಂಪ್‌ಗಳ ಮೇಲೆ ಭಾರತ ಏಕಾಏಕಿ ದಾಳಿ ಮಾಡಿ 9 ಉಗ್ರನೆಲೆಗಳನ್ನು ಸುಟ್ಟುಬೂದಿ ಮಾಡುತ್ತೆ. ಆದರೆ ಈ ದಾಳಿ ಮಧ್ಯರಾತ್ರಿ ನಂತರ (ರಾತ್ರಿ 1 ಗಂಟೆಯಿಂದ 1:30 ಗಂಟೆಯೊಳಗೆ) ಏಕೆ ಮಾಡಿದೆ ಎಂಬುದನ್ನು ವಿವರಿಸಿದರು.
ರಾತ್ರೋರಾತ್ರಿ ವೈಮಾನಿಕ ದಾಳಿ ನಡೆಸುವುದಕ್ಕೆ ಮುಖ್ಯವಾಗಿ ಎರಡು ಪ್ರಮುಖ ಕಾರಣಗಳಿವೆ ಎಂದು ಹೇಳಿದ ಚೌಹಾಣ್ ಮೊದಲನೆಯದಾಗಿ, ರಾತ್ರಿಯ ವೇಳೆಯೂ ಸಹ ನಮ ತಂತ್ರಜ್ಞಾನದ ಮೂಲಕ ಸ್ಪಷ್ಟ ಚಿತ್ರಣವನ್ನು ಪಡೆಯುವ ವಿಶ್ವಾಸ ನಮಗಿತ್ತು. ಎರಡನೇಯದಾಗಿ, ಅಲ್ಲಿನ ಸಾಮಾನ್ಯ ಜನರಿಗೆ ಯಾವುದೇ ಹಾನಿಯಾಗದಂತೆ, ಸಾವುಗಳು ಸಂಭವಿಸದಂತೆ ತಡೆಯುವುದು ನಮ್ಮ ಉದ್ದೇಶವಾಗಿತ್ತು ಎಂದು ಹೇಳಿದರು.
ಪಾಕಿಸ್ತಾನದ ಮೇಲೆ ದಾಳಿ ಮಾಡುವುದಕ್ಕೆ ಉತ್ತಮ ಸಮಯ ಬೆಳಿಗ್ಗೆ 5:30 ರಿಂದ 6:00 ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಹೇಳುತ್ತಾರೆ. ಆದರೆ ಬೆಳಗಿನ ಪ್ರಾರ್ಥನೆಯಿಂದಾಗಿ ಸಾಕಷ್ಟು ನಾಗರಿಕರು ಇದೇ ವೇಳೆಯಲ್ಲಿ ಸಂಚಾರ ಮಾಡುತ್ತಿದ್ದರು.
ಬಹವಾಲ್ಪುರ್ ಮತ್ತು ಮುರಿಡ್ಕೆಯ ಆ ಸಮಯದಲ್ಲಿ, ಮೊದಲ ಅಜಾನ್ ಅಥವಾ ಮೊದಲ ಪ್ರಾರ್ಥನೆ ನಡೆಯುತ್ತದೆ, ಆ ಸಮಯದಲ್ಲಿ ಸಾಕಷ್ಟು ನಾಗರಿಕರ ಸಂಚಾರ ಇರುತ್ತೆ, ಒಂದು ವೇಳೆ ಈ ಸಂದರ್ಭದಲ್ಲಿ ದಾಳಿ ಮಾಡಿದ್ದರೆ ಅನೇಕ ಜನರು ಸಾವುನೋವುಗಳನ್ನು ಎದುರಿಸಬೇಕಿತ್ತು. ಆದರೆ ನಮ ಗುರಿ ಭಯೋತ್ಪಾದಕರು ಮತ್ತು ಅವರ ನೆಲೆಗಳಾಗಿತ್ತು. ಅದಕ್ಕಾಗಿಯೇ ನಾವು ಮಧ್ಯರಾತ್ರಿ ನಂತರ ಅಂದರೆ 1:00 ರಿಂದ 1:30 ರ ನಡುವಿನ ಸಮಯವನ್ನು ಆರಿಸಿಕೊಂಡಿದ್ದೇವೆ ಎಂದು ಬಹಿರಂಗಪಡಿಸಿದರು.
2025 ಮೇ 7ರ ರಾತ್ರೋರಾತ್ರಿ, ಏಪ್ರಿಲ್ 22 ರಂದು ಜಮುಕಾಶೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ್ ಮೂಲಕ ಪಾಕಿಸ್ತಾನವನ್ನು ಗಢಗಢ ನಡುಗಿಸಿತ್ತು.
ಪಾಕಿಸ್ತಾನದ ಅಹಂಕಾರವನ್ನೂ ಆ ಒಂದು ರಾತ್ರಿ ಭಾರತೀಯ ಸೇನೆ ಸುಟ್ಟು ಭಸ ಮಾಡಿತ್ತು. ಪಾಕಿಸ್ತಾನ ತನ್ನ ಭೂಮಿಯಲ್ಲಿ ಜಾಗ ಕೊಟ್ಟು, ಸಾಕಿ ಸಲುಹಿದ್ದ ಉಗ್ರರ ನೆಲೆಯನ್ನು ಭಾರತ ಕೆಲವೇ ಕ್ಷಣಗಳಲ್ಲಿ ಧ್ವಂಸ ಮಾಡಿತ್ತು. ಅದೇ ಪಾಕಿಸ್ತಾನದ ವಿರುದ್ಧ ಭಾರತದ ಮಹತ್ವದ ಕಾರ್ಯಾಚರಣೆ ಆಪರೇಷನ್ ಸಿಂದೂರ್. ಭಾರತದ ಪರಾಕ್ರಮವನ್ನು ನೋಡಿ ಇಡೀ ದೇಶವೇ ನಿಬ್ಬೆರಗಾಗಿತ್ತು. ಭಾರತ ಕೊಟ್ಟ ಉತ್ತರಕ್ಕೆ ಪಾಕಿಸ್ತಾನ ಕೊನೆಗೂ ಅಂಗಲಾಚಿ ಕದನ ವಿರಾಮಕ್ಕೆ ಬೇಡಿಕೊಳ್ಳಬೇಕಾಯಿತು.