ಪಾವಗಡ,ಸೆ.21– ತನ್ನೆರಡು ಮಕ್ಕಳನ್ನೂ ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾವಗಡ ತಾಲೂಕಿನ ಕಡಪಲಕೆರೆ ಗ್ರಾಮದಲ್ಲಿ ನಡೆದಿದೆ.ಸರಿತಾ(25) ತನ್ನ ಒಂದೂವರೆ ವರ್ಷದ ಮಗ ಪುಷ್ಪಕ್ ಹಾಗೂ ನಾಲ್ಕು ವರ್ಷದ ಯುಕ್ತಿಯ ಕತ್ತು ಕೊಯ್ದು ಕೊಂದು ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿ ಸಂತೋಷ್ ಲಗೇಜ್ ಆಟೋ ಚಾಲಕನಾಗಿದ್ದು, ಯಾವ ಕಾರಣಕ್ಕೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿಲ್ಲ.ಈ ಘಟನೆಯಿಂದ ಗ್ರಾಮ ಮತ್ತು ಇಡೀ ತಾಲ್ಲೂಕು ಬೆಚ್ಚಿಬಿದ್ದಿದ್ದು, ಸುದ್ದಿ ತಿಳಿದ ಕೂಡಲೇ ಮಧುಗಿರಿ ಡಿ.ವೈ.ಎಸ್ಪಿ. ಮಂಜುನಾಥ್ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ದೇಹಗಳನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಶವಪರೀಕ್ಷೆಯಾದ ನಂತರವೇ ಖಚಿತ ಮಾಹಿತಿ ದೊರೆಯಲಿದೆ.