ರಾಂಚಿ,ಸೆ.23- ಯುವತಿಯೊಬ್ಬಳು ನೆರೆ ಮನೆಯ ಮಗುವಿಗೆ ವಿಷ ಬೆರೆಸಿದ ಆಹಾರ ನೀಡಿ ಕೊಲೆ ಮಾಡಲು ಯತ್ನಿಸಿರುವ ಘಟ ನಡೆದಿದೆ. ಇದೀಗ ಯುವತಿಯನ್ನು ಜೈಪುರದ ಧರ್ಮಶಾಲಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭೂಬನ್ ಗ್ರಾಮದ ಮಧುಸ್ಥಿತ ಮೊಹಾಂತಿ(21) ಕೊಲೆಗೆ ಯತ್ನಿಸಿರುವ ಯುವತಿ.
ಕಳೆದ ಸೆ.8ರಂದು ಮಧುಸ್ಮಿತ ಪಕ್ಕದ ಮನೆಯ ಎರಡು ವರ್ಷದ ಮಗುವನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ವಿಷ ಬೆರೆಸಿದ ಆಹಾರವನ್ನು ತಿನಿಸಿದ್ದಾಳೆ. ಆಹಾರ ಸೇವಿಸಿದ ನಂತರ ಮಗು ಅಸ್ವಸ್ಥಗೊಂಡಿದೆ.
ಮಂಕಾಗಿದ್ದ ಮಗನನ್ನು ತಂದೆತಾಯಿ ಮೊದಲಗೆ ಧರ್ಮಶಾಲಾದ ಕಮ್ಯುನಿಟಿ ಹೆಲ್ತ್ ಸೆಂಟರ್ನಲ್ಲಿ ಚಿಕಿತ್ಸೆ ಕೊಡಿಸಿ ನಂತರ ಕಟಕ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಪೋಸ್ಟ್ ಗ್ರಾಜುಯೇಟ್ ಇನ್ಸಿಟ್ಯೂಟ್ ಆಫ್ ಪೀಡಿಯಾಟ್ರಿಕ್ಸ್ (ಶಿಶು ಭವನ) ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿ ವೈದ್ಯರು ಪರೀಕ್ಷಿಸಿ ಮಗುವಿಗೆ ವಿಷಹಾರ ನೀಡಲಾಗಿದೆ ಮಾಡಿದ್ದಾರೆ. ಎಂದು ಖಚಿತಪಡಿಸಿದ್ದಾರೆ. ದೀರ್ಘ ಕಾಲದ ಶುಶ್ರುಸೆಯ ನಂತರ ಸೆ.20ರಂದು ಮಗುವನ್ನು ಡಿಸಾರ್ಚ್
ಬಳಿಕ ಅನುಮಾನಗೊಂಡ ಗಂಡು ಮಗುವಿನ ತಂದೆ ಧರ್ಮಶಾಲಾ ಠಾಣೆಗೆ ಹೋಗಿ ಮೊಹಾಂತಿ ವಿರುದ್ಧ ದೂರು ನೀಡಿದ್ದಾರೆ.
ದೂರಿನ ಮೇರೆಗೆ ಬಿಎನ್ಎಸ್ ಸೆಕ್ಷನ್ 109( ಕೊಲೆಯತ್ನ)ರಡಿ ಕೊಲೆ ಮಾಡಲು ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಧರ್ಮಶಾಲಾ ಪೊಲೀಸ್ ಠಾಣೆಯ ಐಐಸಿ ರಂಜನ್ ಮಜ್ಜಿ ತಿಳಿಸಿದ್ದಾರೆ. ಆರೋಪಿ ಮಧುಸ್ಥಿತ ಮೊಹಾಂತಿಯನ್ನು ಬಂಧಿಸಿ ಚಂಡಿಖೋಲ್ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗೆ ಬೇಲ್ ನಿರಾಕರಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.