ನವದೆಹಲಿ,ಸೆ.22- ವಿಮಾನದ ಲ್ಯಾಂಡಿಂಗ್ ಗೇರ್ ಜಾಗದಲ್ಲಿ ಅಡಗಿಕೊಂಡು ಕಾಬೂಲ್‌ನಿಂದ ಅಫ್ಘಾನ್ ಹುಡುಗ ಅಚ್ಚರಿಯ ರೀತಿಯಲ್ಲಿ ದೆಹಲಿಗೆ ಬಂದಿದ್ದಾನೆ. ಸುಮರು 2 ಗಂಟೆಗಳ ಪ್ರಯಾಣದ ನಂತರ ಕೆಎಎಂ ಏರ್‌ಲೈನ್ಸ್ ವಿಮಾನ ಆರ್‌ಕ್ಯೂ -4401 ಇಂದಿರಾ ಗಾಂಧಿ ಅಂತರರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣವನ್ನು ತಲುಪಿದಾಗ ಈ ಘಟನೆ ವರದಿಯಾಗಿದೆ.
ನಂತರ ಸುಮಾರು 13 ವರ್ಷದ ಹುಡುಗನನ್ನು ಅದೇ ವಿಮಾನದಲ್ಲಿ ಅಫ್ಘಾನಿಸ್ತಾ ನಕ್ಕೆ ಕಳುಹಿಸಲಾಸಲಾಗಿದೆ ಎಂದು ಮೂಲಗಳು ತಿಳಿಸಿವೆ.ವಿಮಾನ ನಿಲ್ದಾಣದ ಭದ್ರತಾ ನಿಯಂತ್ರಣ ಕೊಠಡಿಗೆ ಬಾಲಕನೊಬ್ಬ ವಿಮಾನ ದಿಂದ ಇಳಿದ ಬಳಿಕ ಅಲೆದಾಡುತ್ತಿ ರುವುದು ಕಂಡುಬಂತ್ತು ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘಾನ್‌ನ ಕುಂಡುಜ್ ನಗರದ ಮೂಲದ ಬಾಲಕನನ್ನು ವಿಮಾನಯಾನ ಸಿಬ್ಬಂದಿ ಬಂಧಿಸಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗೆ ಹಸ್ತಾಂತರಿಸಿದಾಗಅವನನ್ನು ವಿಚಾರಣೆಗಾಗಿ ವಿಮಾನ ನಿಲ್ದಾಣದ ಟರ್ಮಿನಲ್ 3 ಕ್ಕೆ ಕರೆತಂದರು.
ತಾನು ಕಾಬೂಲ್ ವಿಮಾನ ನಿಲ್ದಾಣಕ್ಕೆ ನುಸುಳಿದೆ ಮತ್ತು ಹೇಗೋ ಆ ವಿಮಾನದ ಹಿಂಭಾಗದ ಕೇಂದ್ರ ಲ್ಯಾಂಡಿಂಗ್ ಗೇರ್ ವಿಭಾಗ ದೊಳಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿ ದ್ದೇನೆ ಎಂದು ಅವನು ಅಧಿಕಾರಿಗಳಿಗೆ ಹೇಳಿದನು. ವಿಚಾರಣೆ ಮಾಡಿದ ನಂತರ, ಮಧ್ಯಾಹ್ನ 12:30 ರ ಸುಮಾರಿಗೆ ಹೊರಟ ಅದೇ ವಿಮಾನದ ಮೂಲಕ ಅಫ್ಘಾನ್ ಹುಡುಗನನ್ನು ವಾಪಸ್ ಕಳುಹಿಸಲಾಯಿತು ಎಂದು ಅವರು ಹೇಳಿದರು.
ಕೆಎಎಂ ವಿಮಾನಯಾನ ಸಂಸ್ಥೆಯ ಭದ್ರತಾ ಅಧಿಕಾರಿಗಳು ಲ್ಯಾಂಡಿಂಗ್ ಗೇರ್ ವಿಭಾಗದ ಭದ್ರತಾ ಪರಿಶೀಲನೆ ನಡೆಸಿದರು ಮತ್ತು ಆ ಹುಡುಗ ಹೊತ್ತೊಯ್ದಿದ್ದ ಸಣ್ಣ ಕೆಂಪು ಬಣ್ಣದ ಸ್ಪೀಕರ್ ಅನ್ನು ಪತ್ತೆ ಮಾಡಿದ್ದಾರೆ. ಸಂಪೂರ್ಣ ತಪಾಸಣೆ ನಂತರ ವಿಮಾನವನ್ನು ಸುರಕ್ಷಿತವೆಂದು ಘೋಷಿಸಲಾಯಿತು ಎಂದು ಅವರು ಹೇಳಿದರು.