ಬಾಲಸೋರ್,ಸೆ.25– ಒಡಿಶಾದ ಬಾಲಸೋರ್ ನಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಡೆಸಿದ ಅಗ್ನಿ-ಪ್ರೈಮ್ ಕ್ಷಿಪಣಿಯ ಯಶಸ್ವಿ ಪರೀಕ್ಷೆಯೊಂದಿಗೆ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗಿದೆ.
ಈ ಪರೀಕ್ಷೆಯನ್ನು ಡಿಆರ್‌ಡಿಒ, ಎಸ್‌ಎಪ್‌ಸಿ ಮತ್ತು ಭಾರತೀಯ ಸಶಸ್ತ್ರ ಪಡೆಗಳು ಜಂಟಿಯಾಗಿ ನಡೆಸಿವೆ. ಈ ಪರೀಕ್ಷೆಯು ಭಾರತದ ಆತನಿರ್ಭರ ಭಾರತ ಯೋಜನೆಯ ಭಾಗವಾಗಿದೆ. ಇದು ಅಗ್ನಿ ಸರಣಿಯ ಆರನೇ ಕ್ಷಿಪಣಿಯಾಗಿದ್ದು, ಇದನ್ನು ಈಗಾಗಲೇ ಭಾರತೀಯ ಸೇನೆಯಲ್ಲಿ ನಿಯೋಜಿಸಲಾಗಿದೆ.
ಈ ಹೊಸ ಪೀಳಿಗೆಯ ಕ್ಷಿಪಣಿಯನ್ನು ರೈಲು ಆಧಾರಿತ ಮೊಬೈಲ್ ಲಾಂಚರ್‌ನಿಂದ ಉಡಾಯಿಸಲಾಯಿತು. ಪರೀಕ್ಷೆಯು ಸಂಪೂರ್ಣ ಯಶಸ್ವಿಯಾಗಿದೆ. 2,000 ಕಿ.ಮೀ.ವರೆಗಿನ ವ್ಯಾಪ್ತಿಗಾಗಿ ವಿನ್ಯಾಸಗೊಳಿಸಲಾದ ಈ ಕ್ಷಿಪಣಿಯು ಚಲನಶೀಲತೆ ಮತ್ತು ತ್ವರಿತ ನಿಯೋಜನೆಯನ್ನು ಹೆಚ್ಚಿಸಲು ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಡಾವಣೆಯ ಕುರಿತು ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಪೋಸ್ಟ್ ಮಾಡಿದ್ದು, ಭಾರತವು ರೈಲು ಆಧಾರಿತ ಮೊಬೈಲ್ ಲಾಂಚರ್ ವ್ಯವಸ್ಥೆಯಿಂದ ಮಧ್ಯಂತರ ಶ್ರೇಣಿಯ ಅಗ್ನಿ-ಪ್ರೈಮ್ ಕ್ಷಿಪಣಿಯ ಯಶಸ್ವಿ ಉಡಾವಣೆಯನ್ನು ನಡೆಸಿದೆ. ಈ ಮುಂದಿನ ಪೀಳಿಗೆಯ ಕ್ಷಿಪಣಿಯನ್ನು 2000 ಕಿ.ಮೀ.ವರೆಗಿನ ವ್ಯಾಪ್ತಿಯನ್ನು ಕ್ರಮಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ವಿವಿಧ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ.ಈ ಸಾಧನೆಗಾಗಿ ಅವರು
ಡಿಆರ್‌ಡಿಒ – ಇಂಡಿಯಾ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಸ್ ಎಪ್ ಸಿ) ಮತ್ತು ಸಶಸ್ತ್ರ ಪಡೆಗಳನ್ನು ಅಭಿನಂದಿಸಿದ್ದಾರೆ.
ಈ ಯಶಸ್ವಿ ಹಾರಾಟ ಪರೀಕ್ಷೆಯು ಭಾರತವನ್ನು ಮೂವ್ ರೈಲ್ ನೆಟ್‌ವರ್ಕ್‌ನಿಂದ ಕ್ಯಾನಿಸ್ಟರೈಸ್ಡ್ ಲಾಂಚ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿದ ಸಾಮಥ್ರ್ಯ ಹೊಂದಿರುವ ಆಯ್ದ ರಾಷ್ಟ್ರಗಳ ಗುಂಪಿಗೆ ಸೇರಿಸಿದೆ ಎಂದು ಬರೆಯಲಾಗಿದೆ. ಪರೀಕ್ಷೆಯು ಎಲ್ಲಾ ಉದ್ದೇಶಗಳನ್ನು ಪೂರೈಸಿದೆ. ಈ ಪ್ರಯೋಗವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾದ ರೈಲು ಆಧಾರಿತ ಮೊಬೈಲ್ ಲಾಂಚರ್‌ನಿಂದ ನಡೆಸಲಾಗಿರುವುದರಿಂದ ಇದನ್ನು ವಿಶಿಷ್ಟ ಎಂದು ಕರೆಯಲಾಗುತ್ತದೆ.
ಇದು ಪ್ರಸ್ತುತ ಕೆಲವೇ ರಾಷ್ಟ್ರಗಳು ಹೊಂದಿರುವ ರಕ್ಷಣಾ ಸಾಮಥ್ರ್ಯವಾಗಿದೆ
ವಿಶೇಷವಾಗಿ ವಿನ್ಯಾಸಗೊಳಿಸಲಾದ ರೈಲು ಆಧಾರಿತ ಮೊಬೈಲ್ ಲಾಂಚರ್‌ನಿಂದ ನಡೆಸಲಾದ ಈ ರೀತಿಯ ಮೊದಲ ಉಡಾವಣೆಯು ಯಾವುದೇ ಪೂರ್ವ-ಷರತ್ತುಗಳಿಲ್ಲದೆ ರೈಲು ಜಾಲದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಬಳಕೆದಾರರಿಗೆ ದೇಶಾದ್ಯಂತ ಚಲನಶೀಲತೆಯನ್ನು ಹೊಂದಲು ಮತ್ತು ಕಡಿಮೆ ಗೋಚರತೆಯೊಂದಿಗೆ ಕಡಿಮೆ ಪ್ರತಿಕ್ರಿಯೆ ಸಮಯದೊಳಗೆ ಉಡಾವಣೆ ಮಾಡಲು ಅನುವು ಮಾಡಿಕೊಡುತ್ತದೆ.
ಅಗ್ನಿ-ಪ್ರೈಮ್ ಎಂದರೇನು? :
ಅಗ್ನಿ-ಪ್ರೈಮ್ ಅಗ್ನಿ ಸರಣಿಯ ಅತ್ಯಂತ ಮುಂದುವರಿದ ಕ್ಷಿಪಣಿಯಾಗಿದೆ. ಇದು ಮಧ್ಯಂತರ ವ್ಯಾಪ್ತಿಯನ್ನು ಹೊಂದಿದ್ದು, 2,000 ಕಿಲೋಮೀಟರ್‌ಗಳವರೆಗಿನ ಗುರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿದೆ. ಇದು ಹಲವಾರು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ.
ನಿಖರವಾದ ಗುರಿ:
ಈ ಸುಧಾರಿತ ಸಂಚರಣೆ ವ್ಯವಸ್ಥೆಯು ಶತ್ರು ನೆಲೆಗಳ ಮೇಲೆ ನಿಖರವಾದ ಗುರಿಯನ್ನು ಇಟ್ಟು ದಾಳಿ ಮಾಡುತ್ತದೆ.
ವೇಗದ ಪ್ರತಿಕ್ರಿಯೆ:
ಕಡಿಮೆ ಗೋಚರವಾಗಿದ್ದರೂ ಸಹ, ಕಡಿಮೆ ಸಮಯದಲ್ಲಿ ಉಡಾವಣೆ ಮಾಡಬಹುದು.
ಗಟ್ಟಿಮುಟ್ಟಾದ ವಿನ್ಯಾಸ:
ಮಳೆ, ಧೂಳು ಅಥವಾ ಶಾಖದಿಂದ ರಕ್ಷಿಸುವ ಬಾಕ್‌್ಸನಲ್ಲಿ (ಮುಚ್ಚಿದ ಪೆಟ್ಟಿಗೆ) ಸಂಗ್ರಹಿಸಲಾಗಿದೆ. ಈ ಕ್ಷಿಪಣಿಯನ್ನು ಭಾರತದ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಗಾಗಿ ಉದ್ದೇಶಿಸಲಾಗಿದೆ. ಒಡಿಶಾದ ಚಾಂಡಿಪುರ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನಿಂದ ಈ ಪರೀಕ್ಷೆಯನ್ನು ನಡೆಸಲಾಯಿತು. ಈ ಪರೀಕ್ಷೆಯ ಪ್ರಮುಖ ಅಂಶವೆಂದರೆ ಇದು ರೈಲು ಆಧಾರಿತ ಮೊಬೈಲ್ ಲಾಂಚರ್. ಇದು ವಿಶೇಷವಾಗಿ ವಿನ್ಯಾಸಗೊಳಿಸಲಾದ ವ್ಯವಸ್ಥೆಯಾಗಿದೆ. ಯಾವುದೇ ಸಿದ್ಧತೆ ಇಲ್ಲದೆ ರೈಲು ಜಾಲದಲ್ಲಿ ಓಡಬಹುದು. ದೇಶಾದ್ಯಂತ ಚಲನಶೀಲತೆಯನ್ನು ಒದಗಿಸುತ್ತದೆ. ಅಂದರೆ ಇದನ್ನು ಕಾಡು, ಪರ್ವತಗಳು ಅಥವಾ ಬಯಲು ಪ್ರದೇಶಗಳಲ್ಲಿ ಸುಲಭವಾಗಿ ಸಾಗಿಸಬಹುದು.