ಬೆಂಗಳೂರು,ಸೆ.27- ಮಹಿಳೆಯರು ಕಿರುಕುಳ, ದೌರ್ಜನ್ಯಕ್ಕೊಳಗಾದರೆ 112 ಗೆ ಕರೆ ಮಾಡಿದರೆ ತಕ್ಷಣ ರಾಣಿ ಚೆನ್ನಮ ಪಡೆ ನಿಮ ಸಹಾಯಕ್ಕೆ ಧಾವಿಸಲಿದೆ. ಈ ಪಡೆ ನಿನ್ನೆಯಿಂದ ಉತ್ತರ ವಿಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಒಬ್ಬರು ಮಹಿಳಾ ಇನ್‌್ಸಪೆಕ್ಟರ್, ನಾಲ್ವರು ಸಬ್‌ಇನ್ಸ್ ಪೆಕ್ಟರ್, 15 ಮಂದಿ ಸಿಬ್ಬಂದಿ ಸೇರಿ 20 ಮಂದಿ ತಂಡದಲ್ಲಿರುತ್ತಾರೆ.
ರಾಣಿ ಚೆನ್ನಮ ಪಡೆಯನ್ನು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರು ನಿನ್ನೆ ಉದ್ಘಾಟನೆ ಮಾಡಿದ್ದು, ಈ ಪಡೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಗಸ್ತಿನಲ್ಲಿರಲಿದೆ.
ದಾರಿಯಲ್ಲಿ ಹೋಗುವ ಮಹಿಳೆಯರೊಂದಿಗೆ ಯಾರಾದರೂ ಅನುಚಿತವಾಗಿ ವರ್ತಿಸಿದರೆ, ಚುಡಾಯಿಸಿದರೆ, ಕಿರುಕುಳ ನೀಡಿದರೆ ಬಂಧನಕ್ಕೊಳಗಾಗುತ್ತೀರಿ ಎಚ್ಚರಿಕೆ.ಈ ಪಡೆ ಮಹಿಳೆಯರ ರಕ್ಷಣೆ ಮಾತ್ರವಲ್ಲದೇ ಅವರಿಗೆ ಕಾನೂನು ಕುರಿತು ಜಾಗೃತಿ ಮೂಡಿಸಲಿದೆ ಹಾಗೂ ಸ್ವಯಂ ರಕ್ಷಣೆ ಬಗ್ಗೆ ಶಾಲಾ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿನಿಯರಿಗೆ ತರಬೇತಿ ಕಾರ್ಯಾಗಾರ ನೀಡಲಿದೆ.
ಬಸ್ ನಿಲ್ದಾಣ, ಶಾಲಾ ಕಾಲೇಜುಗಳ ಸಮೀಪ ಸೇರಿದಂತೆ ಜನ ಸಂದಣಿ ಪ್ರದೇಶಗಳಲ್ಲಿ ಚೆನ್ನಮ ಪಡೆ ಗಸ್ತು ನಡೆಸಲಿದ್ದು, ತೊಂದರೆಗೊಳಗಾದ ಮಹಿಳೆಯರು ತಕ್ಷಣ 112 ಗೆ ಕರೆ ಮಾಡಿದರೆ, ಆ ಮಾಹಿತಿ ಚೆನ್ನಮ ಪಡೆಗೆ ರವಾನೆಯಾಗಲಿದ್ದು, ಆಗ ಕ್ಷಣಾರ್ಧದಲ್ಲಿ ನಿಮ ಸಹಾಯಕ್ಕೆ ಬರಲಿದೆ.