ನವದೆಹಲಿ,ಸೆ.28- ಆಶ್ರಮದಲ್ಲಿ 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ ಬಂಧನದ ಭೀತಿಯಿಂದ ತಲೆಮೆರೆಸಿಕೊಂಡಿದ್ದ ದೆಹಲಿಯ ಸ್ವಾಮಿ ಚೈತನ್ಯಾನಂದ ಸರಸ್ವತಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಸ್ವಾಮಿ ಚೈತನ್ಯಾನಂದ ಸರಸ್ವತಿ ವಿರುದ್ಧ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ, ಬಲವಂತದ ದೈಹಿಕ ಸಂಪರ್ಕ ನಡೆಸಿದ ಆರೋಪಗಳಿವೆ.
ಪ್ರಕರಣ ಹೊರಬಂದ ನಂತರ ಆಶ್ರಮದಿಂದ ತಲೆಮೆರೆಸಿಕೊಂಡು ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಇವರನ್ನು ಉತ್ತರಪ್ರದೇಶದ ಆಗ್ರದಲ್ಲಿ ಬಂಧಿಸಿರುವದೆಹಲಿ ಪೊಲೀಸರು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ತಮ ವಶಕ್ಕೆ ಪಡೆದಿದ್ದಾರೆ.
ದೆಹಲಿಯ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜೆಂಟ್ನ ನಿರ್ವಹಣಾ ಸಮಿತಿಯ ಸದಸ್ಯರಾಗಿರುವ ಆರೋಪಿ ವಿರುದ್ಧ 2009 ಮತ್ತು 2016 ರಲ್ಲಿ ಸಹ ಎರಡು ಲೈಂಗಿಕ ಕಿರುಕುಳದ ದೂರು ದಾಖಲಾಗಿದ್ದವು.
ಸ್ವಾಮೀಜಿ, ವಿದ್ಯಾರ್ಥಿಗಳನ್ನು ತಮ ಕೋಣೆಗೆ ಕರೆಸಿಕೊಂಡು ಉಚಿತ ವಿದೇಶ ಪ್ರವಾಸಗಳ ಆಮಿಷವೊಡ್ಡಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದರು. ಮಹಿಳಾ ಹಾಸ್ಟೆಲ್ನಲ್ಲಿ ರಹಸ್ಯವಾಗಿ ಕ್ಯಾಮೆರಾಗಳನ್ನು ಅಳವಡಿಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಆರೋಪಗಳು ಹೊರಬಿದ್ದ ನಂತರ, ಆಶ್ರಮದ ಆಡಳಿತ ಮಂಡಳಿ ಚೈತನ್ಯಾನಂದರನ್ನು ಅವರ ಹುದ್ದೆಯಿಂದ ಹೊರಹಾಕಿತ್ತು.
ವಿದ್ಯಾರ್ಥಿನಿಯರ ದೂರು ಏನು?
ಸ್ವಾಮಿ ಚೈತನ್ಯಾನಂದ ಸರಸ್ವತಿ ಪಾರ್ಥ ಸಾರಥಿ, ಇಡಬ್ಲ್ಯೂಎಸ್ ವಿದ್ಯಾರ್ಥಿವೇತನದಡಿ ಪಿಜಿಡಿಎಂ ಕೋರ್ಸ್ಗಳನ್ನು ಕಲಿಯುತ್ತಿರುವ ಮಹಿಳಾ ವಿದ್ಯಾರ್ಥಿಗಳಿಗೆ ಅಶ್ಲೀಲ ಭಾಷೆಯನ್ನು ಬಳಸಿ ನಿಂದಿಸುತ್ತಿದ್ದರು ಮತ್ತು ವಾಟ್ಸಪ್ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದರು. ಅಲ್ಲದೇ ದೈಹಿಕ ಸಂಪರ್ಕಕ್ಕೂ ಪ್ರಯತ್ನಿಸಿದ್ದರು. ಸಂಸ್ಥೆಯಲ್ಲಿನ ಕೆಲ ಮಹಿಳಾ ಅಧ್ಯಾಪಕರು ಹಾಗೂ ಆಡಳಿತಾಧಿಕಾರಿಗಳು ಅವರ ಬೇಡಿಕೆ ಈಡೇರಿಸುವಂತೆ ವಿದ್ಯಾರ್ಥಿನಿಯರ ಮೇಲೆ ಒತ್ತಡ ಹೇರುತ್ತಿದ್ದರು. ಇದರಿಂದಾಗಿ ಸಾಕಷ್ಟು ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ದೂರಿನಲ್ಲಿ ತಿಳಿಸಿದ್ದರು.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು, 32 ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು. ಈ ಪೈಕಿ 17 ಮಂದಿ ತಮ ಮೇಲೆ ನಿಂದನೆಯ ಭಾಷೆ ಬಳಸಿದ್ದಾರೆ, ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾರೆಂದು ಹೇಳಿಕೊಂಡಿದ್ದಾರೆ. ಇದಕ್ಕೆ ನಾವು ವಿರೋಧ ಮಾಡಿದಾಗ ಕೆಲ ಮಹಿಳಾ ಅಧ್ಯಾಪಕರು ಹಾಗೂ ಆಡಳಿತಾಧಿಕಾರಿಗಳು ಸಹಕರಿಸುವಂತೆ ನಮ ಮೇಲೆ ಒತ್ತಡ ಹೇರುತ್ತಿದ್ದರು. ಇದು ಒಂದು ದಿನದ ಸಮಸ್ಯೆಯಲ್ಲ ದೀರ್ಘಕಾಲದ ಸಮಸ್ಯೆ ಎಂದು ಹೇಳಿದ್ದರು.
ಈ ಪ್ರಕರಣ ವಿದ್ಯಾರ್ಥಿನಿಯರ ಭಯಾನಕ ಕಥೆಗಳನ್ನು ಬಯಲು ಮಾಡಲಿದ್ದು, ರಾಷ್ಟ್ರೀಯ ಮಹಿಳಾ ಆಯೋಗ ಸಹ ಸ್ವತಃ ಸ್ವಯಂಪ್ರೇರಣೆಯಿಂದ ತನಿಖೆಗೆ ಸೂಚನೆ ನೀಡಿದೆ.
ವಿದ್ಯಾರ್ಥಿನಿಯರು ನೀಡಿದ ಮಾಹಿತಿ ಪ್ರಕಾರ, ಸ್ವಾಮಿ ಚೈತನ್ಯಾನಂದ ತಮನ್ನು ಅಂತಾರಾಷ್ಟ್ರೀಯ ವ್ಯಕ್ತಿಯೆಂದು ಪರಿಚಯಿಸಿಕೊಂಡು, ಉತ್ತಮ ಉದ್ಯೋಗದ ಭರವಸೆ ನೀಡಿ ಹುಡುಗಿಯರನ್ನು ಆಕರ್ಷಿಸುತ್ತಿದ್ದ. ತಡರಾತ್ರಿ ಅವರನ್ನು ತನ್ನ ಕೋಣೆಗೆ ಕರೆಸಿ, ಅಂಕಗಳನ್ನು ಕಡಿತಗೊಳಿಸುವ ಬೆದರಿಕೆ ಹಾಕಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದರು. ವಾಟ್್ಸಆಪ್ ಮೂಲಕ ಬೇಬಿ, ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂಬ ದುರ್ಬಳಕೆಯ ಸಂದೇಶಗಳನ್ನು ಕಳುಹಿಸುತ್ತಿದ್ದರು. ಒಬ್ಬ ವಿದ್ಯಾರ್ಥಿನಿಯನ್ನು ಕಾಂಡೋಮ್ ಬಳಸುತ್ತೀಯಾ? ಎಂದು ಕೇಳಿದ್ದಾರೆ. ಹರಿಯಾಣದ ಹುಡುಗಿಯೊಬ್ಬಳಿಗೆ ಗೆಳೆಯ ಇದ್ದಿದ್ದಕ್ಕೆ ನೀನು ಸರಿ ಇಲ್ಲ ಎಂದು ಕರೆದಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಸಿಸಿಟಿವಿ ಇಟ್ಟು ಬಾಬಾ ಕಳ್ಳಾಟದ ಆರೋಪ!
ಭದ್ರತೆಯ ಹೆಸರಿನಲ್ಲಿ ಮಹಿಳಾ ಹಾಸ್ಟೆಲ್, ಕೊಠಡಿಗಳು ಮತ್ತು ಸ್ನಾನಗೃಹಗಳ ಬಳಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಸ್ವಾಮಿ ಚೈತನ್ಯಾನಂದ ತಮ ಮೊಬೈಲ್ನಲ್ಲಿ ಈ ಫೀಡ್ಗಳನ್ನು ನೇರವಾಗಿ ನಿಗಾ ಇಟ್ಟುಕೊಳ್ಳುತ್ತಿದ್ದರು. ಹುಡುಗಿಯರ ಎಲ್ಲಾ ಚಟುವಟಿಕೆಗಳನ್ನು 24/7 ಮೇಲ್ವಿಚಾರಣೆ ಮಾಡುತ್ತಿದ್ದರು. ಹೋಳಿ ಹಬ್ಬದಂದು ವಿದ್ಯಾರ್ಥಿನಿಯರನ್ನು ಸಾಲಿನಲ್ಲಿ ನಿಲ್ಲಿಸಿ, ಎಲ್ಲರೂ ಆತನಿಗೆ ನಮಸ್ಕರಿಸುವಂತೆ ಒತ್ತಾಯಿಸಲಾಗುತಿತ್ತು.
ನಂತರ ಆತ ಕೂದಲು ಮತ್ತು ಕೆನ್ನೆಗೆ ಬಣ್ಣ ಹಚ್ಚುತ್ತಿದ್ದ ಮತ್ತೊಂದು ಗಂಭೀರ ಆರೋಪವೆಂದರೆ, ವಿದ್ಯಾರ್ಥಿನಿಯ ಶೈಕ್ಷಣಿಕ ದಾಖಲೆಗಳನ್ನು ಸಂಸ್ಥೆಯು ಹಿಂತಿರುಗಿಸಲಿಲ್ಲ ಎನ್ನಲಾಗಿದೆ.
ಆಗಸ್ಟ್ 25ರಂದು ಇನ್ನೊಂದು ಎಫ್ಐಆರ್ ದಾಖಲಾಗಿ, ಸಂಸ್ಥೆಯ ಬೇಸ್ಮೆಂಟ್ನಲ್ಲಿ ಸ್ವಾಮಿ ಬಳಸುತ್ತಿದ್ದ ಲಕ್ಷ್ವರಿ ವೊಲ್ವೊ ಕಾರ್ ಜಪ್ತಿ ಮಾಡಲಾಗಿದೆ. ಆತನ ಆಸ್ತಿಗಳು, ಬ್ಯಾಂಕ್ ಖಾತೆಗಳು ಮತ್ತು ವಿದೇಶ ಪ್ರಯಾಣಗಳನ್ನು ತನಿಖೆ ಮಾಡಲಾಗುತ್ತಿದೆ.
2009 ಮತ್ತು 2016ರಲ್ಲಿ ಇಬ್ಬರು ಮೊಲೆಸ್ಟೇಶನ್ ಕೇಸ್ಗಳಲ್ಲಿ ಆತನ ವಿರುದ್ಧ ಪ್ರಕರಣಗಳಿದ್ದು, ಒಂದರಲ್ಲಿ ಸ್ವಲ್ಪಕಾಲ ಬಂಧನಗೊಂಡಿದ್ದನು. ಆದರೆ, ಆಶ್ರಮವು ಯಾವ ಕ್ರಮವೂ ತೆಗೆದುಕೊಂಡಿರಲಿಲ್ಲ.
ದೆಹಲಿ ಪೊಲೀಸ್ ಡಿಪ್ಯೂಟಿ ಕಮಿಷನರ್ (ಸೌತ್ ವೆಸ್ಟ್) ಅಮಿತ್ ಗೋಯಲ್, ಆಗ್ರದಲ್ಲಿ ಸ್ವಾಮಿಯ ಸ್ಥಳವನ್ನು ಟ್ರ್ಯಾಕ್ ಮಾಡಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.