ವಿಶೇಷ ಲೇಖನ : ವಿ.ರಾಮಸ್ವಾಮಿ ಕಣ್ವ
ಅಪರಾಧಗಳಲ್ಲಿ ಇತ್ತೀಚೆಗೆ ಡಿಜಿಟಲ್ ಅರೆಸ್ಟ್, ಹೋಮ್ ಅರೆಸ್ಟ್ ಎಂಬ ಪ್ರಕರಣಗಳು ಅತಿ ಹೆಚ್ಚು ಬೆಳಕಿಗೆ ಬರುತ್ತಿವೆ. ಪೊಲೀಸರು ಚಾಪೆ ಕೆಳಗೆ ನುಗ್ಗಿದರೆ, ಸೈಬರ್ ವಂಚಕರು ರಂಗೋಲಿ ಕೆಳಗೆ ನುಸುಳಿ ಯಾರ ಕೈಗೂ ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಪೊಲೀಸ್ ವ್ಯವಸ್ಥೆಗಳಲ್ಲಿ ಡಿಜಿಟಲ್ ಅರೆಸ್ಟ್ ಅಥವಾ ಹೋಮ್ ಅರೆಸ್ಟ್ ಎಂಬುವುದೇ ಇಲ್ಲ. ಈಗ ಸೈಬರ್ ಖದೀಮರು ಸೃಷ್ಟಿಸಿರುವ ಒಂದು ವಂಚನೆ ಅಷ್ಟೇ.ವ್ಯಕ್ತಿಯ ಜೀವನದ ಮಟ್ಟ ಸುಧಾರಿಸಿದಂತೆ ತಂತ್ರಜ್ಞಾನ ಬೆಳೆದಂತೆ ಆನ್‌ಲೈನ್ ವಂಚನೆಗಳು ಹೆಚ್ಚಾಗುತ್ತಿವೆ. ಈಗ ಶ್ರೀಸಾಮಾನ್ಯರ ಕೈಗಳಲ್ಲೂ ಮೊಬೈಲ್‌ಗಳಿವೆ.
ಬಹುತೇಕ ಮಂದಿ ಕುಳಿತಲ್ಲಿ, ನಿಂತಲ್ಲಿ ಸಾವಿರಾರೂ ರೂ.ಗಳ ಆನ್‌ಲೈನ್ ವ್ಯವಹಾರ ನಡೆಸುತ್ತಿದ್ದಾರೆ. ನಮಗೆ ಆನ್‌ಲೈನ್ ವ್ಯವಹಾರದಿಂದ ಎಷ್ಟು ಸುಲಭ ಆಗಿದೆಯೋ ಅಷ್ಟೇ ಸಲೀಸಾಗಿ ಸೈಬರ್ ವಂಚಕರಿಗೂ ಆಗಿದೆ. ಸಾವಿರಾರೂ ಕಿಲೋಮೀಟರ್ ದೂರದ ವಿದೇಶಗಳಲ್ಲಿ ಕುಳಿತು ನಿಮಗೆ ಯಾಮಾರಿಸಿ ಲಕ್ಷಾಂತರ ರೂ. ಹಣವನ್ನು ಲಪಟಾಯಿಸುತ್ತಾರೆ.
ಮಾನಸಿಕವಾಗಿ ಬೆದರಿಸುತ್ತಾರೆ..!
ಈ ಸೈಬರ್ ವಂಚಕರು ಪೊಲೀಸ್, ಸಿಬಿಐ, ಇಡಿ… ಮುಂತಾದ ಘಟಕಗಳ ಅಧಿಕಾರಿಗಳೆಂದು ನಿಮ ಮೊಬೈಲ್ ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸುತ್ತಾರೆ. ನೀವು ನಂಬುವಂತೆ ಸುಳ್ಳು ಹೇಳಿ ಮಾನಸಿಕ ಒತ್ತಡಕ್ಕೆ ಸಿಲುಕಿಸಿ ಬೆದರಿಸುತ್ತಾರೆ.
ಉದಾಹರಣೆಗೆ ನಿಮ ಮೊಬೈಲ್‌ಗೆ ಕರೆ ಮಾಡುವ ಅಪರಿಚಿತ ವ್ಯಕ್ತಿ ನಾನು ಸಿಬಿಐ, ಇಡಿ ಅಧಿಕಾರಿ ಎಂದು ಪರಿಚಯಿಸಿಕೊಂಡು ನಿಮ ಹೆಸರು ಮಾದಕ ವಸ್ತು ಸಾಗಾಣಿಕೆ ಅಥವಾ ಅಕ್ರಮ ಹಣ ವರ್ಗಾವಣೆ…. ಹೀಗೆ ಮುಂತಾದ ಪ್ರಕರಣ ಒಂದರಲ್ಲಿ ಕಂಡುಬಂದಿದೆ. ನೀವು ಇರುವ ಜಾಗದಲ್ಲೇ ನಿಮನ್ನು ಬಂಧಿಸುತ್ತೇವೆ ಎಂದು ಹೇಳುತ್ತಾನೆ. ನಂತರ ಒಂದು ಇಂಚು ಜಾಗ ಕದಲಬಾರದು, ಕರೆಯನ್ನು ಸ್ಥಗಿತಗೊಳಿಸಬಾರದು, ಯಾರ ಜೊತೆಯಲ್ಲೂ ಮಾತನಾಡಬಾರದು, ನಾನು ಹೇಳಿದ ರೀತಿ ಕೇಳಬೇಕು ಇಲ್ಲದಿದ್ದರೆ ನಿಮ ಮಾನ, ಮರ್ಯಾದೆ ಹರಾಜಾಗುತ್ತದೆ ಎಂದು ಗಡುಸು ಧ್ವನಿಯಲ್ಲಿ ಬೆದರಿಸುತ್ತಾನೆ.
ಆಗ ನೀವು ಆತನ ದರ್ಪದಿಂದ ದಿಕ್ಕುತೋ ದಂತಾಗಿ ಅಸಹಾಯಕರ ರೀತಿ ಈಗ ನಾನು ಬಿಡುಗಡೆಯಾಗಬೇಕಾದರೆ ಏನು ಮಾಡಬೇಕೆಂದು ಕೇಳಿದ ತಕ್ಷಣ ನೀಚ ಬಹಳ ಉಪಕಾರ ಮಾಡುವ ರೀತಿ ಈ ಪ್ರಕರಣದಿಂದ ನಿಮನ್ನು ಕೈಬಿಡುತ್ತೇವೆ, ನಾವು ಹೇಳಿದ ರೀತಿ ಕೇಳಬೇಕು ಎಂದು ತಾಕೀತು ಮಾಡುತ್ತಾನೆ.
ನಿಮ ಬ್ಯಾಂಕ್ ಖಾತೆಗಳ ವಿವರ ನೀಡಿ ಇಲ್ಲವೇ ನಾವು ಹೇಳಿದ ಬ್ಯಾಂಕ್ ಖಾತೆಗಳಿಗೆ ಇಂತಿಷ್ಟು ಹಣ ಹಾಕಿ ಎಂದು ಹೇಳಿ ತನ್ನ ನಕಲಿ ಖಾತೆಗಳಿಗೆ ಹಣ ಹಾಕಿಸಿಕೊಂಡು ಯಾರಿಗೂ ಈ ವಿಷಯ ತಿಳಿಸಬೇಡಿ. ಬೇರೆಯವರಿಗೆ ಇದು ಗೊತ್ತಾದರೆ ನಿಮಗೇ ತೊಂದರೆ ಎಂದು ಹೇಳಿ ವಂಚಕ ಕರೆ ಸ್ಥಗಿತಗೊಳಿಸು ತ್ತಾನೆ.
ವಂಚಕನ ಸಿಮ್ ಕಾರ್ಡ್ ಸ್ಥಗಿತ:
ಆಘಾತದಿಂದ ಹೊರಬಂದು ನೀವು ಕುಟುಂಬದವರಿಗೆ ವಿಷಯ ತಿಳಿಸಿ ವಂಚಕ ಮಾಡಿದ್ದ ಮೊಬೈಲ್ ನಂಬರಿಗೆ ಕರೆ ಮಾಡಿದಾಗಲೇ ನೀವು ಮೋಸಕ್ಕೆ ಒಳಗಾಗಿದ್ದೀರಿ ಎಂಬುದು ಗೊತ್ತಾಗುತ್ತದೆ. ಆ ವೇಳೆಗಾಗಲೇ ವಂಚಕ ಆತನ ಮೊಬೈಲ್‌ನಿಂದ ಸಿಮ್ ತೆಗೆದು ಬಿಸಾಕಿ ಜಾಗ ಖಾಲಿ ಮಾಡಿರುತ್ತಾನೆ. ಹೀಗೆ ಈ ಸೈಬರ್ ಖದೀಮರು ಇತ್ತೀಚೆಗೆ ಬೇರೆ ಬೇರೆ ವಿಷಯಗಳಲ್ಲಿ ವಿವಿಧ ರೀತಿಯಲ್ಲಿ ವಂಚನೆ ಮಾಡುತ್ತಾ ಲಕ್ಷಾಂತರ ರೂ. ಹಣವನ್ನು ದೋಚಿ ನಿಮ ಹಣದಲ್ಲಿ ಮೋಜು, ಮಸ್ತಿ ಮಾಡುತ್ತಾರೆ.
ಮೋಸಕ್ಕೆ ಒಳಗಾಗಬೇಡಿ:
ವಂಚಕರು ಹೇಳುವ ರೀತಿಯ ಪ್ರಕರಣಗಳಲ್ಲಿ ನೀವು ಭಾಗಿಯಾಗಿಲ್ಲದಿದ್ದರೆ ಏಕೆ ಅಂಜುತ್ತೀರಿ, ಭಯಪಟ್ಟಷ್ಟೂ ಆತ ನಿಮನ್ನು ಹೆದರಿಸಿ, ಯಾಮಾರಿಸಿ ಹಣ ಹಾಕಿಸಿಕೊಂಡು ಕಣರೆಯಾಗುತ್ತಾನೆ. ಆಗ ನೀವು ಮೋಸಕ್ಕೆ ಒಳಗಾಗಿ ಹಣ ಕಳೆದುಕೊಳ್ಳುತ್ತೀರಿ ಜೋಕೆ! ಯಾಮಾರಿ ಒಂದು ವೇಳೆ ವಂಚನೆಗೆ ಒಳಗಾದರೆ ಚಿಂತಿಸಬೇಡಿ. ಮೊದಲು ಸಹಾಯವಾಣಿ 1930ಗೆ ನೀವು ಕರೆ ಮಾಡಿ ದೂರು ದಾಖಲಿಸಿ ಅಥವಾ ನಿಮ ಸಮೀಪದ ಪೊಲೀಸ್ ಠಾಣೆಗೆ ತಕ್ಷಣ ತೆರಳಿ ದೂರು ನೀಡಿ. ಘಟನೆ ನಡೆದ 24 ಗಂಟೆ ಒಳಗಾಗಿ ದೂರು ನೀಡಿದರೆ ತುಂಬಾ ಒಳ್ಳೆಯದು. ಇಲ್ಲದಿದ್ದರೆ ನಿಮ ಹಣ ಖದೀಮನ ಜೇಬು ಸೇರುತ್ತದೆ. ಇದು ಎಐ ಯುಗ. ಏನು ಬೇಕಾದರೂ ಆಗಬಹುದು ಯಾವುದಕ್ಕೂ ಸದಾ ಜಾಗೃತರಾಗಿರಿ.
ಡಿಜಿಟಲ್ ಅರೆಸ್ಟ್ ಇಲ್ಲ:
ದೇಶದ ಯಾವುದೇ ಪೊಲೀಸ್ ಘಟಕಗಳ ಅಧಿಕಾರಿಗಳಾಗಲೀ ಅಥವಾ ಸ್ಥಳೀಯ ಠಾಣೆಯ ಪೊಲೀಸರಾಗಲಿ ನಿಮನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿ ಡಿಜಿಟಲ್ ಅರೆಸ್ಟ್ ಅಥವಾ ಹೋಮ್ ಅರೆಸ್ಟ್ ಮಾಡುವುದಿಲ್ಲ. ಪ್ರತಿಯೊಬ್ಬ ನಾಗರಿಕರು ತಿಳಿಯಬೇಕಾದ ವಿಷಯ ಇದು. ನಿಮ ಮೇಲೆ ಪ್ರಕರಣ ದಾಖಲಾಗಿದ್ದರೆ ಮಾತ್ರ ನಿಮನ್ನು ಪೊಲೀಸರು ಮೊಬೈಲ್‌ನಲ್ಲಿ ಸಂಪರ್ಕಿಸಬಹುದು.
ಒಂದು ವೇಳೆ ಸಿಬಿಐ, ಇಡಿ ಮುಂತಾದ ಪೊಲೀಸ್ ಘಟಕಗಳ ಅಧಿಕಾರಿಗಳು ಎಂದು ಹೇಳಿಕೊಂಡು ವಿನಾಕಾರಣ ಕರೆ ಮಾಡಿದರೆ ತಕ್ಷಣ ಆ ಕರೆಯನ್ನು ಸ್ಥಗಿತಗೊಳಿಸಿ ಮತ್ತೆ ಮತ್ತೆ ಕರೆ ಮಾಡುತ್ತಿದ್ದರೆ ಮೊಬೈಲ್ ಸ್ವಿಚ್ಡ್ ಆಫ್‌ಮಾಡಿ ಇಲ್ಲವೇ ಕೂಡಲೇ ಸೈಬರ್ ಅಪರಾಧ ಸಹಾಯವಾಣಿ 1930ಗೆ ಕರೆ ಮಾಡಿ ಅಥವಾ ಪೊಲೀಸ್ ಕಂಟ್ರೋಲ್ ರೂಮ್ 112ಗೆ ತಿಳಿಸಿ.
ವಿದ್ಯಾವಂತರೇ ಇವರ ಟಾರ್ಗೆಟ್:
ವಿಜ್ಞಾನಿಗಳು, ವೈದ್ಯರು, ಸಾ್ಟ್‌ವೇರ್ ಎಂಜಿನಿಯರ್‌ಗಳು, ಸರ್ಕಾರಿ ಹಾಗೂ ನಿವೃತ್ತ ಅಽಕಾರಿಗಳೇ ಇತರರಿಗಿಂತ ಹೆಚ್ಚು ವಂಚನೆಗೆ ಒಳಗಾಗುತ್ತಿದ್ದಾರೆ. ತಿಳಿದವರೇ, ವಿದ್ಯಾವಂತರೇ, ಬುದ್ಧಿವಂತರೇ ಹೆಚ್ಚು ಹೆಚ್ಚು ಈ ಸೈಬರ್ ವಂಚಕರ ಜಾಲಕ್ಕೆ ಒಳಗಾಗುತ್ತಿರುವುದು ವಿಪರ್ಯಾಸ.
ಈ ವಂಚಕರು ಹೇಳುವ ರೀತಿಯ ಪ್ರಕರಣಗಳಲ್ಲಿ ನಿಮ್ಮ ಹೆಸರು ಇದ್ದರೆ ಅಥವಾ ಎ್‌ಐಆರ್ ದಾಖಲಾಗಿದ್ದರೆ, ಪರಿಶೀಲಿಸಿ ಸಿಬಿಐ, ಇಡಿ.. ಇನ್ನು ಮುಂತಾದ ಘಟಕಗಳ ಅಽಕಾರಿಗಳು ತಮ್ಮ ಕಚೇರಿಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಮೊದಲು ನಿಮಗೆ ನೋಟೀಸ್ ನೀಡುತ್ತಾರೆ. ನಂತರ ವಿಚಾರಣೆ ನಡೆಸಿ ಪ್ರಕರಣದಲ್ಲಿ ನೀವು ಭಾಗಿಯಾಗಿರುವುದು ಕಂಡುಬಂದರೆ ಮಾತ್ರ ಬಂಧಿಸುತ್ತಾರೆ.ಒಂದು ವೇಳೆ ನಿಮ್ಮ ಮನೆಗೆ ನಿಮ್ಮನ್ನು ಬಂಧಿಸಲು ಬರುವ ಯಾವುದೇ ಪೊಲೀಸ್ ಅಧಿಕಾರಿ ಜೊತೆಯಲ್ಲಿ ವಾರೆಂಟ್ ತಂದಿರುತ್ತಾರೆ. ಬಂಽಸಿದ ನಂತರ ವಿಷಯವನ್ನು ನಿಮ್ಮ ಕುಟುಂಬದ ಸದಸ್ಯರಿಗೆ ತಿಳಿಸುತ್ತಾರೆ.