ಬೆಂಗಳೂರು,ಸೆ.29-ಪಾಸ್ಪೋರ್ಟ್ ಮತ್ತು ವೀಸಾ ಇಲ್ಲದೇ ಹಡಗು ಮೂಲಕ ಅನಧಿಕೃತವಾಗಿ ಬಂದು ಅಪಾರ್ಟ್ಮೆಂಟ್ವೊಂದರಲ್ಲಿ ನೆಲೆಸಿದ್ದ ಮೂವರು ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸಿಸಿಬಿ ಕಾನೂನು ಕ್ರಮ ಕೈಗೊಂಡಿದೆ.ಕಳೆದ ವರ್ಷ ಮೂವರು ವಿದೇಶಿ ಪ್ರಜೆಗಳು ಯಾವುದೇ ಪಾಸ್ಪೋರ್ಟ್ ಮತ್ತು ವೀಸಾ ಇಲ್ಲದೇ ಶೀಲಂಕಾದ ಜಾಫ್ನಾದಿಂದ ಹಡಗು ಮೂಲಕ ತಮಿಳುನಾಡಿನ ರಾಮೇಶ್ವರಂ ಅಕ್ರಮವಾಗಿ ಬಂದಿದ್ದಾರೆ.
ನಂತರ ಈ ಮೂವರಿಗೆ ಮತ್ತೊಬ್ಬ ವಿದೇಶಿ ಪ್ರಜೆ ಸಹಾಯ ಮಾಡಿದ್ದು, ಆತನ ನೆರವಿನಿಂದ ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿದ್ದರು.
ಸಿಸಿಬಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಲಭಿಸಿದೆ. ಖಚಿತ ಮಾಹಿತಿಯನ್ನಾಧರಿಸಿ ಪ್ರಕರಣ ದಾಖಲಿಸಿಕೊಂಡು ನಂತರ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿ ಮೂವರು ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ, ಹಡಗು ಮೂಲಕ ಬಂದಿರುವುದಾಗಿ ತಿಳಿಸಿದ್ದಾರೆ.
ಈ ಮೂವರ ವಿರುದ್ಧ ಫಾರಿನರ್ರಸ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಇವರು ಯಾವ ಕಾರಣಕ್ಕಾಗಿ ಬಂದು ನಗರದಲ್ಲಿ ವಾಸವಾಗಿದ್ದರು ಎಂಬ ಬಗ್ಗೆ ತನಿಖೆ ಮುಂದುವರೆಸಿ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ.