ಮೆಲ್ಬೋರ್ನ್,ಸೆ.30- ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಮೌಂಟ್ ಮೌಂಗನುಯಿಯಲ್ಲಿ ನೆಟ್ಸ್ ನಲ್ಲಿ ಬೌಲಿಂಗ್ ಮಾಡುವಾಗ ಮಣಿಕಟ್ಟಿನ ಮುರಿತ ಗಾಯವಾಗಿದೆ.ಇದರಿಂದ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿದ್ದು ಮುಂದಿನ ನ್ಯೂಜಿಲೆಂಡ್ ವಿರುದ್ಧದ ಮೂರು ಟಿ 20 ಪಂದ್ಯಗಳ ಸರಣಿಯಿಂದ ಹೊರಬಿದಿದ್ದಾರೆ.
ವಿಕೆಟ್ ಕೀಪರ್/ಬ್ಯಾಟರ್ ಜೋಶ್ ಫಿಲಿಪ್ ಅವರನ್ನು ಬುಧವಾರದಿಂದ ಮೌಂಟ್ ಮೌಂಗನುಯಿಯಲ್ಲಿರುವ ಬೇ ಓವಲ್‌ನಲ್ಲಿ ನಡೆಯಲಿರುವ ಸರಣಿಗೆ ಕರೆಸಲಾಗಿದೆ. ಸರಣಿಯ ಪೂರ್ವಭಾವಿ ಹಂತದಲ್ಲಿ ಜೋಶ್ ಇಂಗ್ಲಿಸ್ ಅವರ ಕಾಲಿನ ಗಾಯದಿಂದ ಹೊರಗುಳಿದಿರುವುದು ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದುಹಿನ್ನಡೆಯಾಗಿದೆ, ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿ ಗೆಲುವಿನಲ್ಲಿ ಅಜೇಯ ಅರ್ಧಶತಕ ಗಳಿಸಿದ 36 ವರ್ಷದ ಮ್ಯಾಕ್ಸ್ ವೆಲ್ ನೆಟ್ಸ್ ನಲ್ಲಿ ಬೌಲಿಂಗ್ ಮಾಡುವಾಗ ಬಲ ಮಣಿಕಟ್ಟಿಗೆ ಪೆಟ್ಟು ಬಿದ್ದಿದೆ.
ಮ್ಯಾಕ್ಸ್ ವೆಲ್ ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ ಮತ್ತು ತಜ್ಞರನ್ನು ಭೇಟಿಯಾಗಲಿದ್ದಾರೆ. ಅವರ ಬದಲಿ ಆಟಗಾರ ಫಿಲಿಪ್ ಇತ್ತೀಚಿನ ಭಾರತ ಪ್ರವಾಸದಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ.
ಮುಂಬರುವ ಆಶಸ್ ಸರಣಿಗೆ ಆದ್ಯತೆ ನೀಡಲಾಗುತ್ತಿದೆ.ಬೆನ್ನು ನೋವಿನಿಂದಾಗಿ ಪ್ರಮುಖ ವೇಗಿ ಹಾಗು ತಂಡದ ನಾಯಕ ಪ್ಯಾಟ್ ಕಮಿನ್ಸ್ ಕೂಡ ಪ್ರಸ್ತುತ ಆಸ್ಟ್ರೇಲಿಯಾ ತಂಡದ ಭಾಗವಾಗಿಲ್ಲ,ಜೊತೆಗೆ ನಾಥನ್ ಎಲಿಸ್ ತಮ ಮೊದಲ ಮಗುವಿನ ಜನನದ ನಿಮಿತ್ತ ನ್ಯೂಜಿಲೆಂಡ್ ಸರಣಿಯಿಂದ ಹೊರಗುಳಿದಿದ್ದಾರೆ.ಹಿಗಾಗಿ ಆಸ್ಸಿಸ್ ಯುವ ತಂಡಕ್ಕೆ ಸರಣಿ ಸವಾಲಾಗಿದೆ.