ಇಸ್ಲಮಾಬಾದ್,ಸೆ.30-ಪಾಕಿಸ್ತಾನ ಆಕ್ರಮಿತ ಕಾಶೀರದಲ್ಲಿ (ಪಿಒಕೆ) ಜೆಕೆಜೆಎಎಸಿ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದು ಒಬ್ಬ ಸಾವನ್ನಪ್ಪಿ,ಪೊಲೀಸರು ಸೇರಿ ಹಲವಾರು ಮಂದಿ ಗಾಯಗೊಂಡಿದ್ದಾರೆ.
ಜಮ್ಮು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ ವಿವಿಧ ಬೇಡಿಕೆ ಈಡೇಕಿಕೆಗೆ ಒತ್ತಾಯಿಸಿ ಕರೆ ನೀಡಿದ್ದ ಮುಷ್ಕರ ಸಂದರ್ಭದಲ್ಲಿ ಪ್ರತಿಸ್ಪರ್ಧಿ ಗುಂಪುಗಳು ಏಕಕಾಲದಲ್ಲಿ ಪ್ರತಿಭಟನೆಗಳನ್ನು ನಡೆಸಿದೆ,ಶಾಂತಿಯುತ ಪ್ರತಿಭಟನೆ ಏಕಾಏಕಿ ಎರಡೂ ಕಡೆಯವರು ಹಿಂಸಾಚಾರಕ್ಕೆ ಪ್ರಚೋದಿಸುತ್ತಿದ್ದಾರೆ ಎಂದು ಪರಸ್ಪರ ಆರೋಪಿಸಲಾಗಿದೆ.
ಪಿಒಕೆಯಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.ನೀಲಂ ಸೇತುವೆಯ ಸುತ್ತಲೂ ಸಾವುನೋವುಗಳು ಸಂಭವಿಸಿವೆ, ಮುಸ್ಲಿಂ ಕಾನ್ಫರೆನ್‌ನಾಯಕ ರಾಜಾ ಸಾಕಿಬ್ ಮಜೀದ್ ನೇತೃತ್ವದ ಶಾಂತಿ ರ್ಯಾಲಿ ವೇಳೆ ಜೆಕೆಜೆಎಸಿ ಸದಸ್ಯರು ಘರ್ಷಣೆಗೆ ಇಳಿದರು.
ಯಾವುದೇ ಪ್ರಚೋದನೆಯಿಲ್ಲದೆ ಜೆಕೆಜೆಎಎಸಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಮಜೀದ್ ಅವರ ಬೆಂಗಾವಲು ಪಡೆಯನ್ನು ಹಾದುಹೋಗಲು ಪ್ರತಿಭಟನಾಕಾರರು ಸ್ಥಳಾವಕಾಶ ಕಲ್ಪಿಸಲು ಪ್ರಯತ್ನಿಸಿದರು, ಆದರೆ ಅವರ ತಂಡದ ಸದಸ್ಯರು ತಮ್ಮ ವಾಹನಗಳಿಂದ ಹೊರಬಂದು ಅವರ ಮೇಲೆ ದಾಳಿ ಮಾಡಿದರು
ಪೊಲೀಸರು ಮತ್ತು ಅರೆಸೈನಿಕ ಪಡೆಗಳು ಕೆಲವರನ್ನು ರಕ್ಷಿಸಿದ್ದಾರೆ. ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ ,ಗುಂಡು ಹಾರಿಸಿದರು. ರಾವಲಕೋಟ್ ಮತ್ತು ಸುಧ್ನೋಟಿಯಲ್ಲೂ ಇದೇ ರೀತಿಯ ಸಭೆಗಳು ನಡೆದಿವೆ