ರಾಯ್ಪುರ(ಛತ್ತೀಸ್‌ಗಢ),ಸೆ.30- ಮೂರು ತಿಂಗಳ ಗರ್ಭಿಣಿಯಾಗಿದ್ದ 16 ವರ್ಷದ ಅಪ್ರಾಪ ಬಾಲಕಿಗೆ ಗರ್ಭಪಾತ ಮಾಡಿಸುವಂತೆ ಚಾಕು ತೋರಿಸಿ ಬೆದರಿಕೆ ಹಾಕಿದ್ದ ಗೆಳಯನನ್ನು ಅದೇ ಆಯುಧದಿಂದ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಗರದ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್ಜ್ ವೊಂದರಲ್ಲಿ ನಡೆದಿದ್ದು, ಮೂಲತಃ ಬಿಹಾರದ ಮೊಹಮದ್ ಸದ್ದಾಂ ಕೊಲೆಯಾಗಿರುವ ಸ್ನೇಹಿತ.ಈತ ಅಭನ್‌ಪುರದಲ್ಲಿ ಎಂಎಸ್ ಎಂಜಿನಿಯರಿಂಗ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ.
ಅಪ್ರಾಪ್ತ ವಯಸ್ಕಳು ಮೂರು ತಿಂಗಳ ಗರ್ಭಿಣಿಯಾಗಿದ್ದು, ಗರ್ಭಪಾತ ಮಾಡಲು ನಿರಾಕರಿಸಿದ್ದಳು. ಸದ್ದಾಂ ಆಕೆಯನ್ನು ಮದುವೆಯಾಗಲು ಇಷ್ಟವಿಲ್ಲ ಎಂದು ಹೇಳಿ ಗರ್ಭಪಾತ ಮಾಡುವಂತೆ ಒತ್ತಾಯಿಸಿದ್ದಾನೆ. ಇದು ಇಬ್ಬರ ನಡುವೆ ಪದೇ ಪದೇ ಜಗಳಕ್ಕೆ ಕಾರಣವಾಗಿ, ಮಾರಕ ಕೃತ್ಯಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ಬಿಲಾಸ್‌ಪುರದ ಕೋನಿ ಪೊಲೀಸ್ ಠಾಣೆ ಪ್ರದೇಶದ ನಿವಾಸಿಯಾಗಿರುವ ಅಪ್ರಾಪ್ತೆಯು ಸೆಪ್ಟೆಂಬರ್ 28ರಂದು ತನ್ನ ಗೆಳೆಯ ಮೊಹಮದ್ ಸದ್ದಾಂನನ್ನು ಭೇಟಿಯಾಗಲು ರಾಯ್‌ಪುರಕ್ಕೆ ಹೋಗಿದ್ದಳು. ಬಳಿಕ ರಾಯ್‌ಪುರದ ರಾಮನ್‌ಮಂದಿರ ವಾರ್ಡ್‌ನ ಸತ್ಕರ್ ಗಾಲಿಯಲ್ಲಿರುವ ಏವನ್ ಲಾಡ್ಜ್ ನಲ್ಲಿ ಇಬ್ಬರು ತಂಗಿದ್ದರು.
ಗರ್ಭಿಣಿಯಾಗಿರುವ ಬಾಲಕಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹಾಕಿದ್ದ ಸದ್ದಾಂ ಚಾಕು ತೋರಿಸಿ ಬೆದರಿಕೆ ಹಾಕಿದ್ದ. ಅದೇ ದಿನ ರಾತ್ರಿ ಸದ್ದಾಂ ಲಾಡ್‌್ಜ ಕೋಣೆಯೊಳಗೆ ಮಲಗಿದ್ದಾಗ, ಬಾಲಕಿ ಅದೇ ಆಯುಧದಿಂದ ಆತನ ಕೊಯ್ದಿದ್ದಾಳೆ. ಕೋಣೆಯನ್ನು ಹೊರಗಿನಿಂದ ಲಾಕ್ ಮಾಡಿ, ಸದ್ದಾಂನ ಮೊಬೈಲ್ ಫೋನ್ ತೆಗೆದುಕೊಂಡು ಓಡಿಹೋದ ಆಕೆ ಲಾಡ್‌್ಜ ಕೋಣೆಯ ಕೀಲಿಯನ್ನು ಹತ್ತಿರದ ರೈಲ್ವೆ ಹಳಿಗಳಿಗೆ ಎಸೆದು ಮರುದಿನ ಬೆಳಿಗ್ಗೆ ಹದಿಹರೆಯದ ಹುಡುಗಿ ಬಿಲಾಸ್ಪುರಕ್ಕೆ ಹಿಂತಿರುಗಿದ್ದಾಳೆ.
ಬಾಲಕಿ ದಣಿದಿರುವುದನ್ನು ಕಂಡ ತಾಯಿ ವಿಚಾರಿಸಿದಾಗ ಕೊಲೆ ಮಾಡಿದ್ದಾಗಿ ತಿಳಿಸಿದ್ದಾಳೆ. ಆಘಾತಕ್ಕೊಳಗಾದ ಆಕೆ ತಕ್ಷಣ ಬಾಲಕಿಯೊಂದಿಗೆ ಕೋನಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.
ಬಾಲಕಿ ನೀಡಿದ ಮಾಹಿತಿ ಮೇರೆಗೆ ರಾಯ್ಪುರ ಪೊಲೀಸರು ಏವನ್ ಲಾಡ್‌್ಜಗೆ ತೆರಳಿ ರಕ್ತದ ಮಡುನಲ್ಲಿ ಸತ್ತು ಬಿದಿದ್ದ ಸದ್ದಾಂನ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.ಬಿಹಾರದಲ್ಲಿರುವ ಸದ್ದಾಂನ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಗಳು ನಡೆಯುತ್ತಿವೆ. ಆತನ ಮೊಬೈಲ್ ನಮ ವಶದಲ್ಲಿದೆ, ಮತ್ತು ನಾವು ಆ ಸಂಖ್ಯೆಯ ಮೂಲಕ ಅವನ ಕುಟುಂಬ ಸದಸ್ಯರನ್ನು ಪತ್ತೆಹಚ್ಚುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಅಪ್ರಾಪ್ತ ಬಾಲಕಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಇದು ಉತ್ಸಾಹ ಮತ್ತು ಹತಾಶೆಯ ಅಪರಾಧವೆಂದು ತೋರುತ್ತಿದೆ. ತನಿಖೆಯಿಂದ ಇದು ಪೂರ್ವಯೋಜಿತ ಕೃತ್ಯವೇ ಅಥವಾ ಕ್ಷಣಿಕ ಕೃತ್ಯವೇ ಎಂಬುದನ್ನು ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.